ಅಂಗನವಾಡಿ ಹಾಲು ಪೌಡರ್ ಗೆ ಕನ್ನ ಫಲಾನುಭವಿಗಳಿಗೆ ಟೋಪಿ ಹಾಕಿ ದಂಧೆಕೋರರ ಜತೆ ಶಾಮೀಲು!

ಶಿಶು ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯಕರ್ತೆಯರು ಶಾಮೀಲು

ಆಂಕರ್: ಅಂಗನವಾಡಿಯ ಹಾಲು ಪೌಡರ್ ಗೆ ಕನ್ನ ಹಾಕಿದ ಖದೀಮನೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರಕರಣ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಅರ್ಧ ಕೆ.ಜಿ.ತೂಕದ 128 ಪ್ಯಾಕೆಟ್ ಗಳು ಖದೀಮನ ಬಳಿ ಪತ್ತೆಯಾಗಿದೆ.ಗರ್ಭಿಣಿಯರಿಗೆ ಬಾಣಂತಿಯರಿಗೆ ಸೇರಬೇಕಾದ ಹಾಲಿನ ಪೌಡರ್ ಪ್ಯಾಕೆಟ್ ಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುವ ದಂಧೆ ಬಟಾ ಬಯಲಾಗಿದೆ.ಮಡುವಿನಹಳ್ಳಿ ಗ್ರಾಮದ ಅಂಗನವಾಡಿಯ ಸಿಬ್ಬಂದಿ ಮಂಜುಳಾ ಎಂಬುವರು ಹಾಲಿನ ಪ್ಯಾಕೆಟ್ ಗಳನ್ನ ದಂಧೆಕೋರರಿಗೆ ತಲುಪಿಸಿರುವ ಮಾಹಿತಿಯನ್ನ ಸಿಕ್ಕಿಬಿದ್ದ ವ್ಯಕ್ತಿಯೇ ಬಹಿರಂಗಪಡಿಸಿದ್ದಾನೆ.ನಂಜನಗೂಡು ತಾಲೂಕಿನಾದ್ಯಂತ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ ಪುರಾವೆಗಳು ದೊರೆತಿರಲಿಲ್ಲ.ಇದೀಗ ಹಾಲಿನ ಪ್ಯಾಕೆಟ್ ಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ನಗರ್ಲೆ ಗ್ರಾಮದ ಜಗದೀಶ್ ಎಂಬ ಖದೀಮ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.ಫಲಾನುಭವಿಗಳಿಗೆ ವಿತರಿಸದ ಅಂಗನವಾಡಿ ಸಿಬ್ಬಂದಿಗಳು ದಂಧೆಕೋರರ ಜೊತೆ ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ.ತಾಲೂಕಿನ ವಿವಿದ ಅಂಗನವಾಡಿ ಕೇಂದ್ರಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಯೇ ಒಪ್ಪಿಕೊಂಡಿದ್ದಾನೆ.ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದ್ದು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು : ಜಮೀನು ಕೊಡಿ ಇಲ್ಲ ವಿಷ ಕೊಡಿ ಎಂದು ನೊಂದ ಲಿಂಗಮ್ಮ ಕುಟುಂಬ ತಹಸೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ

Sat Jul 23 , 2022
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ತಹಸೀಲ್ದಾರ್ ಕಚೇರಿ ಮುಂದೆ ಇಂದು ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರು ಮಾತನಾಡಿ ಇಂದು ನಾವು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿದ್ದು ನಿಂಗಮ್ಮ ಅವರಿಗೆ ನ್ಯಾಯ ಕೊಡಿಸುವ ಸಲುವಾಗಿ ಅವರ ಕುಟುಂಬ ಸಮೇತ ಧರಣಿ ಆಗಮಿಸಿದ್ದು ನಮ್ಮ ಸಂಘಟನೆಯಿಂದ ಅವರಿಗೆ ಸೂಕ್ತ ರಕ್ಷಣೆ ಹಾಗೂ ಬೆಂಬಲವನ್ನುಲಿಂಗಮ್ಮ ವ್ಯಕ್ತಪಡಿಸಿತಾ ಭೂ ಗೋಕರ್ಣ ಮಾಲೀಕ ಅವನಿಗೆ ಬಂಧಿಸಲೇಬೇಕು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದರೆ ಅವರಿಗೆ ಅಮಾನತ್ತು […]

Advertisement

Wordpress Social Share Plugin powered by Ultimatelysocial