‘ಹಸು ಅಪ್ಪುಗೆಯ ದಿನ’ ಆಚರಿಸಲು ಮಾಡಿದ ಮನವಿ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

ವದೆಹಲಿ: ಫೆಬ್ರವರಿ 14 ರಂದು ಹಸುಗಳನ್ನು ತಬ್ಬಿಕೊಳ್ಳುವಂತೆ ಹಸು ಪ್ರೇಮಿಗಳಿಗೆ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯೂಬಿಐ) ಫೆಬ್ರವರಿ 14 ಅನ್ನು ‘ಹಸು ಹಗ್ ಡೇ’ ಎಂದು ಆಚರಿಸುವ ಮನವಿಯನ್ನು ಹಿಂಪಡೆದಿದೆ.

ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ 14 ಫೆಬ್ರವರಿ 2023 ರಂದು ಹಸು ಅಪ್ಪುಗೆಯ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ನೀಡಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಸಲಹಾ ಮಂಡಳಿಯು ಹೊಸ ಸೂಚನೆಯಲ್ಲಿ ತಿಳಿಸಿದೆ. .

ಹಿಂದಿನ ಸೂಚನೆಯಲ್ಲಿ,  ಹಸುವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆ ತರುತ್ತದೆ ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ಹೆಚ್ಚಿಸುತ್ತದೆ ಎಂದು ಹೇಳಿತ್ತು. ಇದೀಗ ನೀಡಲಾಗಿದ್ದ ಕರೆಯನ್ನು ಮಂಡಳಿ ಹಿಂಪಡೆದುಕೊಂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನದಿಂದ ಎಲ್‌ಎಸಿಯಲ್ಲಿ 3 ಹಂತದ ಸೇನಾ ನಿಯೋಜನೆ!

Sat Feb 11 , 2023
ನವದೆಹಲಿ:ಪ್ಯಾಂಗಾಂಗ್‌ ತ್ಸೋ ಘರ್ಷಣೆ ಉಂಟಾಗಿ 3 ವರ್ಷಗಳ ಬಳಿಕ ಈಗ ಭಾರತೀಯ ಸೇನೆಗೆ ಮತ್ತೊಂದು ಸವಾಲು ಎದುರಾಗಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯ ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ಚೀನ ಸೇನೆಯ ಮೂರು ಹಂತದ ನಿಯೋಜನೆಯನ್ನು ಎದುರಿಸಲು ಭಾರತೀಯ ಯೋಧರು ಸಜ್ಜಾಗಿದ್ದಾರೆ. ಎಲ್‌ಎಸಿಯಲ್ಲಿ ಗುಪ್ತವಾಗಿ ತನ್ನ ಅಜೆಂಡಾವನ್ನು ಜಾರಿಗೊಳಿಸುತ್ತಿರುವ ಚೀನ ಪಡೆ, ಮೂರು ಹಂತಗಳಲ್ಲಿ ಸೇನಾ ನಿಯೋಜನೆ ಮಾಡಿರುವುದು ಕಣ್ಗಾವಲು ಮತ್ತು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ. ಮೊದಲ ಪದರದಲ್ಲಿ ಡ್ರ್ಯಾಗನ್‌ […]

Advertisement

Wordpress Social Share Plugin powered by Ultimatelysocial