ಮಧ್ಯರಾತ್ರಿ ಐಎಫ್​ಎಸ್ ಅಧಿಕಾರಿ ವಿಶ್ರಾಂತಿ ಗೃಹಕ್ಕೆ ಬಂತು ಚಿರತೆ!

 

ಲಖನೌ: ಪ್ರಾಣಿಗಳು ಆಗ್ಗಾಗ್ಗೆ ಮನುಷ್ಯರಿಗೆ ಎದುರಾಗುವುದು ಸಾಮಾನ್ಯ. ಆದರೆ ಒಬ್ಬರೇ ಇದ್ದಾಗ ಪ್ರಾಣಿ ಎದುರಾದರೆ ಏನಾಗಬಹುದು.ಹೀಗೊಂದು ಘಟನೆ ಇಲ್ಲಿ ನಡೆದಿದ್ದು, ರಾತ್ರಿ ವೇಳೆಯಲ್ಲಿ ಅರಣ್ಯಾಧಿಕಾರಿಗಳ ವಿಶ್ರಾಂತಿ ಗೃಹಕ್ಕೆ ಆಗಮಿಸಿದ ಚಿರತೆ ರಾಜಾರೋಷವಾಗಿ ಓಡಾಡಿರುವ ಚಿತ್ರವನ್ನು ಅಧಿಕಾರಿಯೊಬ್ಬರು ಸೆರೆ ಹಿಡಿದಿದ್ದಾರೆ.

ವಿಶ್ರಾಂತಿ ಗೃಹದಲ್ಲಿದ್ದ ಐಎಫ್​ಎಸ್​ ಅಧಿಕಾರಿ ನಿವಾಸಕ್ಕೆ ಮಧ್ಯರಾತ್ರಿ ಅತಿಥಿಯೊಂದು ಆಗಮಿಸಿದೆ. ನಾವಿಬ್ಬರು ಉತ್ತಮ ಸಮಯ ಕಳೆದೆವು ಎಂದು ಚಿರತೆಯ ಚಿತ್ರ ಸಮೇತ ಟ್ವೀಟ್​ ಮಾಡಿದ್ದಾರೆ.

ಉತ್ತರ ಪ್ರದೇಶದ ಖತರ್ನಿಯಾಘಾಟ್​​ ವನ್ಯಜೀವಿ ಅಭಯಾರಣ್ಯದಲ್ಲಿ ವಿಶ್ರಾಂತಿ ಗೃಹದಲ್ಲಿ ಐಎಫ್​ಎಸ್​ ಅಧಿಕಾರಿ ಆಕಾಶ್​ ದೀಪ್​ ಬಧ್ವಾನ್​ ಇದ್ದರು. ಈ ವೇಳೆ ಚಿರತೆ ಆಗಮಿಸಿದೆ. ಈ ವೇಳೆ ಅದರ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ ಚಿರತೆಯ ಬಂದಿತ್ತು, ಅದರ ನಡೆಯ ನೋಟ ನಿಮಗೆ ವಿನೋದವೆನಿಸಬಹುದು ಎಂದೂ ಟ್ವೀಟ್​ ಮಾಡಿದ್ದಾರೆ.

ಅಲ್ಲದೇ 120 ವರ್ಷಗಳ ಇತಿಹಾಸ ಹೊಂದಿರುವ ಈ ವನ್ಯಜೀವಿ ಅಭಯಾರಣ್ಯ ತುಂಬಾ ಪ್ರಸಿದ್ಧಿಯಾಗಿದೆ ಎಂದೂ ಟ್ವೀಟ್​ ಮಾಡಿದ್ದಾರೆ. ಅವರ ಈ ಟ್ವೀಟ್​ಗೆ 3 ಸಾವಿರಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಅಧಿಕಾರಿ ಆಕಾಶ್​ ದೀಪ್​ ಬಧ್ವಾನ್​ ಅವರು ಆಗ್ಗಾಗ್ಗೆ ವನ್ಯಜೀವಿಗಳ ವಿಶೇಷ ಫೋಟೋ ಸೆರೆ ಹಿಡಿದು ಟ್ವೀಟ್​ ಮಾಡುತ್ತಿರುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂತ್ರಿ ಸ್ಥಾನಕ್ಕಾಗಿ ನಾನು ಯಾರ ಮನೆಗೂ ಹೋದವನಲ್ಲ: ಸಚಿವ ಅರಗ ಜ್ಞಾನೇಂದ್ರ

Fri May 13 , 2022
ಬೆಂಗಳೂರು,ಮೇ 13- ನಾನು ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಳಿಯೂ ಹೋಗುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಿ ಸ್ಥಾನ ನೀಡಿದ್ದಾರೆ. ಕೊಟ್ಟಿರುವ ಖಾತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ತೃಪ್ತಿ ನನಗಿದೆ ಎಂದರು. ಮಂತ್ರಿ ಸ್ಥಾನಕ್ಕಾಗಿ ನಾನು ಯಾರ ಮನೆಗೂ ಹೋದವನಲ್ಲ. ಮುಂದೆಯೂ ಹೋಗುವುದಿಲ್ಲ. […]

Advertisement

Wordpress Social Share Plugin powered by Ultimatelysocial