ಅಂಕಿತ ಕನ್ನಡ ಕನ್ನಡ ನೆಲದ ಕಾಂತಿಯುತ ಬಾಲ ಪ್ರತಿಭೆ.

ಅಂಕಿತ ಜನಿಸಿದ್ದು 2010ರ ಫೆಬ್ರವರಿ 20ರಂದು. ತಂದೆ ಜಯರಾಮ ಸ್ವಯಂ ಉದ್ಯೋಗಸ್ಥರು. ತಾಯಿ ಪ್ರೇಮಾ.
ಮಗು ಅಂಕಿತಾಳ ಉತ್ಸಾಹ, ಪ್ರತಿಭೆ, ಲಕ್ಷಣತೆಯ ಆಕರ್ಷಣೆ ಮತ್ತ ಪಟ ಪಟನೆ ಆಡುವ ಸ್ಪಷ್ಟ ಮುದ್ದು ಮಾತುಗಳು ಕಲಾಲೋಕದ ಕಣ್ಣಿಗೆ ಬಿದ್ದೊಡನೆ ಅಭಿನಯಕ್ಕಾಗಿನ ಬೇಡಿಕೆಗಳು ನಿರಂತರವಾಗಿ ಬರಲಾರಂಭಿಸಿತು.
ಮೊದಲು ‘ಕ್ರೀಂ ಬಿಸ್ಕೆಟ್ ವೆಬ್’ ಸರಣಿಯಲ್ಲಿ ಮೂಡಿದ ಅಂಕಿತಳ ಪ್ರತಿಭೆ, ಕಿರಿಕ್ ಕೀರ್ತಿ ಅವರ ‘ಸಿಲಿಂಡರ್ ಸತೀಶ್’ ಮೂಲಕ ಚಲನಚಿತ್ರ ಲೋಕಕ್ಕೆ ಪರಿಚಯವಾಯ್ತು.
ನಂತರದಲ್ಲಿ ಶ್ರೀಮುರಳಿ ಅವರೊಂದಿಗೆ ‘ಭರಾಟೆ’, ಜಗ್ಗೇಶ್ ಅವರೊಂದಿಗೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಮತ್ತು ಸತೀಶ್ ನೀನಾಸಂ ಜೊತೆಗಿನ ‘ಬ್ರಹ್ಮಚಾರಿ’ ಚಿತ್ರಗಳು ಬಿಡುಗಡೆ ಆಗಿವೆ. ಕಿರುತೆರೆಯಲ್ಲಿಯೂ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸಿದ ಅಂಕಿತ, ಟಿವಿ 9 ವಾಹಿನಿಯ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಯಶಸ್ವೀ ನಿರ್ವಹಣೆ ಕೂಡಾ ಮಾಡಿದ್ದಾಳೆ.
ಶಾಂತಿನಿಕೇತನ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಾ, ಓದಿನಲ್ಲೂ ಮುಂದಿರುವ ಅಂಕಿತ, ತನ್ನ ರಜಾ ದಿನಗಳಲ್ಲಿ ಮಾತ್ರಾ ಅಭಿನಯಿಸುತ್ತಾ ಶಾಲೆಯಲ್ಲಿನ ಶಿಕ್ಷಕ ವರ್ಗದವರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ. ಯೋಗ, ಚಿತ್ರಕಲೆ, ಸೈಕಲ್ ಸವಾರಿ , ಈಜು, ಕಿಡ್ ಮಾಡಲಿಂಗ್ ಮತ್ತು ಸಂಗೀತದ ಆಸ್ವಾದನೆ ಅಂಕಿತಾಳ ಇತರ ಹವ್ಯಾಸಗಳು.
ಅಂಕಿತಾಗೆ ನಿರಂತರವಾಗಿ ಹರಿದು ಬರುತ್ತಿರುವ ಅಭಿನಯಕ್ಕಾಗಿನ ಅವಕಾಶಗಳಲ್ಲಿ ತಯಾರಾಗಿರುವ ಮತ್ತು ತಯಾರಿಯ ವಿವಿಧ ಹಂತಗಳಲ್ಲಿರುವ ‘ಯುವರತ್ನ’, ‘ಕಡಲ ತೀರದ ಭಾರ್ಗವ’, ಸಾಯಿಕುಮಾರ್ ಅವರ ‘ನಟ ಭಯಂಕರ’, ಶಶಿಕುಮಾರ್ ಅವರೊಂದಿಗಿನ ‘ಪ್ರಚಂಡ ಪುಟಾಣಿ’, ‘ಕರುನಾಡ ಕಂದ ರಾಜಕುಮಾರ’, ‘ರಂಗನಾಯಕಿ’, ‘ಅಂಗೈಲಿ ಅಕ್ಷರ’, ಲೂಸ್ ಮಾದ ಯೋಗಿ ಅವರೊಂದಿಗಿನ ‘9ನೇ ದಿಕ್ಕು’ , ಅಜಯ್ ರಾವ್ ಅವರ ‘ಶೋಕಿವಾಲ’, ಅನುಪ್ರಭಾಕರ್ ಜೊತೆಗೆ ‘ಸಾರಾ ವಜ್ರ’, ವಿಕಾಸ್ ಅವರ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’, ಅಥಿತಿ ಪ್ರಭುದೇವ ಅವರೊಂದಿಗೆ ‘ದಿಲ್ಮಾರ್’, ಶಿವರಾಜ್ ಕುಮಾರ್ ಅವರ ‘ಭಜರಂಗಿ 2’ ಹಾಗೂ’ಶಿವಪ್ಪ’, ಡಾಲಿ ಧನಂಜಯ್ಯ ಅವರ
‘ರತ್ನನ ಪ್ರಪಂಚ’, ‘ಧರಣಿ ಮಂಡಲ ಮಧ್ಯದೊಳಗೆ’ ಹೀಗೆ ಚಲನಚಿತ್ರಗಳ ದೊಡ್ಡ ಪಟ್ಟಿ ಇದೆ.
ಪುಟಾಣಿ ಅಂಕಿತ ಮೇಲೆ ತಂದೆ ತಾಯಿಯರಲ್ಲಿ ತುಂಬಿರುವ ಕನ್ನಡ ಪರ ಚಟುವಟಿಕೆಗಳಲ್ಲಿ ಜೊತೆಗೂಡುವ ಅಭಿಮಾನ ಸಹಜವಾಗಿ ಮೈಗೂಡಿದೆ. ತಾನು ಚೆನ್ನಾಗಿ ಓದಿ ಡಾಕ್ಟರ್ ಆಗಿ ಬಡ ಜನರ ಸೇವೆ ಮಾಡುವಂತಹ ಕನಸುಗಳು ಪುಟಾಣಿ ಅಂಕಿತಳಲ್ಲಿ ಅರಳಿವೆ.
ಶುಭ್ರಮನಕ್ಕೆ ಸಾಧ್ಯವಿಲ್ಲದಾದರೂ ಏನಿದೆ. ಅಂಕಿತ ಮನದಲ್ಲಿ ಅರಳುತ್ತಿರುವ ಅಸಂಖ್ಯ ಆಶಯಗಳೂ ನೆರವೇರಲಿ. ಬೆಳೆಯುತ್ತಿರುವ ಆಕೆಯ ಮನಕ್ಕೆ ಉಲ್ಲಾಸಕರ ಪೋಷಣೆ ದೊರಕುತ್ತಿರಲಿ. ಆಕೆಯಲ್ಲಿರುವ ಕಲಾ ಪ್ರತಿಭೆಗಳು ನಿರೀಕ್ಷೆಗಳ ಒತ್ತಡಕ್ಕೆ ಸಿಲುಕದೆ ನಿತ್ಯ ಉಲ್ಲಾಸಕರವಾಗಿರಲಿ. ಅಂಕಿತ ತನ್ನ ಬಾಲ್ಯದ ಸವಿಯನ್ನು ಕೂಡಾ ಕಳೆದುಕೊಳ್ಳದೆ, ನಲಿ ನಲಿಯುತ್ತಾ ಸಹಜತೆಯಲ್ಲಿ ತನ್ನ ಸುಗಮ ದಾರಿಯ ಉತ್ತಮ ಭವಿತವ್ಯವನ್ನು ತಾನೇ ರೂಪಿಸಿಕೊಳ್ಳುವಂತ ಉತ್ತಮ ವಾತಾವರಣದ ಭವಿತವ್ಯ ಆಕೆಗೆ ಲಭಿಸುತ್ತಿರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರ ಹಕ್ಕಿ ಜ್ವರದ ಭೀತಿ: ಥಾಣೆ ನಂತರ, ಪಾಲ್ಘರ್‌ನಲ್ಲಿನ ಮಾದರಿಗಳು ಏವಿಯನ್ ಇನ್ಫ್ಲುಯೆನ್ಸಕ್ಕೆ ಧನಾತ್ಮಕವಾಗಿ ಕಂಡುಬಂದಿವೆ

Sun Feb 20 , 2022
  ನವದೆಹಲಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾದ ಕೆಲವೇ ದಿನಗಳಲ್ಲಿ, ಅದರ ನೆರೆಯ ಪಾಲ್ಘರ್ ಜಿಲ್ಲೆಯ ವಸಾಯಿ-ವಿರಾರ್ ಪ್ರದೇಶದ ಕೋಳಿ ಫಾರಂನಲ್ಲಿಯೂ ಸೋಂಕು ಪತ್ತೆಯಾಗಿದೆ. ಪೌಲ್ಟ್ರಿ ಫಾರ್ಮ್‌ನಲ್ಲಿ ಕೆಲವು ಪಕ್ಷಿಗಳು ಸಾವನ್ನಪ್ಪಿದ ನಂತರ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳು ಪಕ್ಷಿಗಳಿಗೆ ಎಚ್5ಎನ್1 ವೈರಸ್ ಇರುವುದು ದೃಢಪಟ್ಟಿದೆ ಎಂದು ಪಾಲ್ಘರ್ ಜಿಲ್ಲಾ ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್ ಕಾಂಬ್ಳೆ ತಿಳಿಸಿದ್ದಾರೆ. ಡಾ.ಕಾಂಬ್ಳೆ ಅವರು ಕೋಳಿ ಫಾರಂನಲ್ಲಿ ಸಾವನ್ನಪ್ಪಿದ […]

Advertisement

Wordpress Social Share Plugin powered by Ultimatelysocial