ಚಿತ್ರರಂಗಕ್ಕೆ ಮತ್ತೊಂದು ಶಾಕ್: ಜನಪ್ರಿಯ ನಟ ಸಮೀರ್ ಖಾಖರ್ ವಿಧಿವಶ!

ದೂರದರ್ಶನದ ಪ್ರಸಿದ್ಧ ಶೋ ‘ನುಕ್ಕಡ್’ ನಲ್ಲಿ ಖೋಪ್ಡಿ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ಹಿರಿಯ ನಟ ಸಮೀರ್ ಖಾಖರ್(71) ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಸತೀಶ್ ಕೌಶಿಕ್ ಅವರ ಸಾವಿನಿಂದ ಅಭಿಮಾನಿಗಳು ಇನ್ನೂ ತತ್ತರಿಸುತ್ತಿರುವಾಗ, ಇದು ಉದ್ಯಮಕ್ಕೆ ಮತ್ತೊಂದು ಹೊಡೆತವಾಗಿದೆ.

ವರದಿಯ ಪ್ರಕಾರ, ಹಿರಿಯ ನಟ ಸಮೀರ್ ಅವರಿಗೆ ಮಂಗಳವಾರ ಉಸಿರಾಟದ ಸಮಸ್ಯೆ ಎದುರಿಸಿದ ನಂತರ ಮೂರ್ಛೆ ಹೋಗಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಐಸಿಯುಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಅವರ ಹೃದಯ ಕಾರ್ಯನಿರ್ವಹಣೆ ನಿಂತು ಬಹು ಅಂಗಾಂಗ ವೈಫಲ್ಯದ ನಂತರ ಅವರು ಮುಂಜಾನೆ ನಿಧನರಾಗಿದ್ದಾರೆ.

ಸಮೀರ್ ಖಾಖರ್ 90 ರ ದಶಕದ ಜನಪ್ರಿಯ ನಟರಾಗಿದ್ದರು. ಅವರು 1996 ರಲ್ಲಿ ಯುಎಸ್‌ಗೆ ತೆರಳಿದ ನಂತರ ನಟನೆಯಿಂದ ದೂರ ಉಳಿದರು. ಅವರು ‘ಪುಷ್ಪಕ್’, ‘ಶಾಹೆನ್‌ ಶಾ’, ‘ರಖ್ವಾಲಾ’, ‘ದಿಲ್‌ವಾಲೆ’, ‘ರಾಜಾ ಬಾಬು’ ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಲೆಗೆ ಎಣ್ಣೆ ಹಚ್ಚಿ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ!

Wed Mar 15 , 2023
ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ ಎಣ್ಣೆ ಹಚ್ಚಿದ ತಕ್ಷಣ ಸ್ನಾನ ಮಾಡುವುದರಿಂದ ಅಥವಾ ತಲೆ ತೊಳೆದುಕೊಳ್ಳುವುದರಿಂದ ಎಣ್ಣೆಯ ಯಾವುದೇ ಪ್ರಯೋಜನಗಳು ನಿಮಗೆ ಲಭ್ಯವಾಗುವುದಿಲ್ಲ. ಅದರ ಬದಲು ಎಣ್ಣೆ ಹಚ್ಚಿ ಒಂದರಿಂದ ಎರಡು ಗಂಟೆಯೊಳಗೆ ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ರಾತ್ರಿ ಎಣ್ಣೆ ಹಚ್ಚಿ […]

Advertisement

Wordpress Social Share Plugin powered by Ultimatelysocial