‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಅನುಪಮ್ ಖೇರ್ ನಟನೆ…

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಖ್ಯಾತ ನಟ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಇಂಥದ್ದೊಂದು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದಿರುವ ಅನುಪಮ್ ಖೇರ್, ಇದು ಅವರ 534ನೇ ಸಿನಿಮಾ ಎಂದು ಬರೆದುಕೊಂಡಿದ್ದಾರೆ.ಈ ಸಿನಿಮಾ ಆಕರ್ಷಕ ಮತ್ತು ಸ್ಫೂರ್ತಿದಾಯಕ ಎಂದು ಹೆಮ್ಮೆಪಟ್ಟಿದ್ದಾರೆ. ಶೂಟಿಂಗ್ ಸೆಟ್ ನಿಂದಲೇ ಕ್ಲ್ಯಾಪ್ ಬೋರ್ಡ್ ಹಿಡಿದುಕೊಂಡಿರುವ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ.ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ, ಈ ಸಿನಿಮಾ ವಿವಾದವಾದಾಗ ನಿರ್ದೇಶಕರ ಪರವಾಗಿ ನಿಂತಿದ್ದರು. ಈಗ ಮತ್ತೆ ವಿವೇಕ್ ಜೊತೆ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಈ ನಿರ್ದೇಶಕರ ಜೊತೆ ಮತ್ತೆ ಮತ್ತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಮತ್ತೆ ಮತ್ತೆ ಈ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದೂ ಅವರು ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಸದ್ಯ ದಿ ವಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ಲಖನೌದಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ನಾಯಕನಾಗಿ ನಾನಾ ಪಾಟೇಕರ್ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗೋಪಾಲ್ ಸಿಂಗ್, ದಿವ್ಯಾ ಸೇಠ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಾಣವಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್​ ಬದಲು ವಿಶ್ವಕಪ್​ಗೆ​ ಪ್ರಾಮುಖ್ಯತೆ ನೀಡಿ

Thu Jan 5 , 2023
ಟೀಮ್​ ಇಂಡಿಯಾ ಕ್ರಿಕೆಟಿಗರು ಹೆಚ್ಚಾಗಿ ಐಪಿಎಲ್ ಆಡುವುದನ್ನು ನಿಲ್ಲಿಸಿ ವಿಶ್ವ ಕಪ್ ಟೂರ್ನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಮಾಜಿ ಆಟಗಾರ ಗೌತಮ್​ ಗಂಭೀರ್​(Gautam Gambhir) ಹೇಳಿದ್ದಾರೆ.ಸ್ಟಾರ್ ಸ್ಪೋರ್ಟ್ಸ್ ಶೋ ‘ರೋಡ್ ಟು ವರ್ಲ್ಡ್ ಕಪ್ ಗ್ಲೋರಿ’ಯಲ್ಲಿ ಮಾತನಾಡಿದ ಗಂಭೀರ್​, ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್​ ಟೂರ್ನಿಯಲ್ಲಿ ನಾಯಕ ರೋಹಿತ್ ಶರ್ಮಾ,ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಬೃಹತ್ ಪಾತ್ರ ವಹಿಸಬೇಕು ಈ ನಿಟ್ಟಿನಲ್ಲಿ ಐಪಿಎಲ್​ಗೆ ಹೆಚ್ಚಿನ ಪ್ರಾಮುಖ್ಯತೆ […]

Advertisement

Wordpress Social Share Plugin powered by Ultimatelysocial