ಅಟಲ್‌ ಉತ್ಸವಕ್ಕೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌

ಣಿಪಾಲ : ಬಿಜೆಪಿ ನಗರ, ಗ್ರಾಮಾಂತರ ಸಮಿತಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಡಿ. 24ರಂದು ಸಂಜೆ 5ರಿಂದ ಆಯೋಜಿಸಿರುವ ಅಟಲ್‌ ಉತ್ಸವ – ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಅಟಲ್‌ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಕೂಟದಲ್ಲಿ ಕೇಂದ್ರ ಕ್ರೀಡಾ, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಭಾಗವಹಿಸಲಿದ್ದಾರೆ ಎಂದು ಶಾಸಕ ಕೆ.ರಘುಪತಿ ಭಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ಅನುರಾಗ್‌ ಠಾಕೂರ್‌ ಉದ್ಘಾಟಿಸಲಿದ್ದಾರೆ. ರಾಜ್ಯ ಕ್ರೀಡಾ ಸಚಿವ ಡಾ| ಕೆ.ಸಿ. ನಾರಾಯಣ ಗೌಡ ಪಂದ್ಯಾಟಕ್ಕೆ ಚಾಲನೆ ನೀಡುವರು. ಕರ್ನಾಟಕ ಸಹಿತ ಮಹಾರಾಷ್ಟ್ರ, ಕೇರಳ, ದಿಲ್ಲಿ, ಹರಿಯಾಣ, ತಮಿಳುನಾಡು ರಾಜ್ಯಗಳ ಒಟ್ಟು 12 ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ. ವಿಜೇತರಿಗೆ ಪ್ರಥಮ 1 ಲಕ್ಷ ರೂ., ದ್ವಿತೀಯ 75 ಸಾವಿರ ರೂ., ತೃತೀಯ 50 ಸಾವಿರ ರೂ., ಚತುರ್ಥ 25 ಸಾವಿರ ರೂ. ಬಹುಮಾನ ನೀಡಲಾಗುವುದು. 15 ಸಾವಿರ ಪ್ರೇಕ್ಷಕರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಎಸ್‌. ಅಂಗಾರ, ವಿ. ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ್‌ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ.ಬೂತ್‌ ಸಂಗಮ: ಬಿಎಸ್‌ವೈ ಉಪಸ್ಥಿತಿವಾಜಪೇಯಿ ಅವರ 98ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಸುಶಾಸನ ದಿವಸ್‌ ಆಚರಿಸಲಾಗುತ್ತಿದೆ. ಡಿ. 25ರಂದು ಸಂಜೆ 4ಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ 226 ಮತಗಟ್ಟೆಗಳ ಅಧ್ಯಕ್ಷರ ಸಮಾವೇಶ “ಬೂತ್‌ ಸಂಗಮ’ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಡೆಯಲಿದೆ. ಬೂತ್‌ ಮಟ್ಟದ ಪ್ರತಿನಿಧಿಗಳೇ ವೇದಿಕೆಯಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ದಿಕ್ಸೂಚಿ ಭಾಷಣ, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಸಂಘಟನಾತ್ಮಕ ಮಾರ್ಗದರ್ಶನ ಕೊಡಲಿದ್ದಾರೆ. ಕಾರ್ಯಕ್ರಮದ ಒಂದು ಭಾಗವಾಗಿ ಜ. 7 ಮತ್ತು 8ರಂದು ಯುವ ಸಂಗಮ, ಮಾತೃ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಚಾಕುವಿನಿಂದ ಇರಿದು ಯುವಕನ ಭೀಕರ ಕೊಲೆ!

Wed Dec 21 , 2022
  ಹೆಗಡೆನಗರದ ಬಾಲಾಜಿ ಲೇಔಟ್ ಬಳಿ ಘಟನೆ ಹೆಗಡೆನಗರ ನಿವಾಸಿ ಸಲ್ಮಾನ್ (17) ಕೊಲೆಯಾದ ಯುವಕ ಹೋಟೆಲ್ ಕೆಲಸ ಮಾಡ್ತಿದ್ದ ಸಲ್ಮಾನ್ 11 ಗಂಟೆ ಸುಮಾರಿಗೆ ನಡೆದು ಮನೆಗೆ ಹೋಗ್ತಿದ್ದ ಸಲ್ಮಾನ್ ಆ ವೇಳೆ ಬಂದ ಹಂತಕರಿಂದ ಚಾಕುವಿಂದ ಇರಿದು ಕೊಲೆ ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸ್ರ ಭೇಟಿ ಪರಿಶೀಲನೆ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಘಟನೆ ಸ್ಥಳಕ್ಕೆ ಭೇಟಿ ಸಿಸಿಟಿವಿ ಪರಿಶೀಲಿಸುತ್ತಿರೋ ಪೊಲೀಸ್ರು ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರೆಸಿರುವ ಪೊಲೀಸ್ರು. […]

Advertisement

Wordpress Social Share Plugin powered by Ultimatelysocial