ಅರಸನ ಕೋಟೆಗೆ ಎಂಟ್ರಿ ಆದ ಅನುಷ್ಕಾ; ಮುಂದೆ ಅಖಿಲ ಗತಿ?

ರಸನ ಕೋಟೆಗೆ ಇದೀಗ ಅನುಷ್ಕಾ ಎಂಟ್ರಿ ಆಗಿದ್ದಾಳೆ. ತನ್ನ ತಾಯಿ ತಾನು ಅಂದುಕೊಂಡ ಹಾಗೆ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ತನ್ನ ತಾಯಿಯನ್ನೇ ಕೊಂದು ಹಾಕಿ ಇದೀಗ ಸೇಡು ತೀರಿಸಿಕೊಳ್ಳಲು ಅಖೀಲಾಂಡೇಶ್ವರಿ ಮನೆಗೆ ಎಂಟ್ರಿ ನೀಡಿದ್ದಾಳೆ. ಜನನಿಯನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬರುತ್ತಾಳೆ.ಆಕೆಯೇ ಅನುಷ್ಕಾ ಎನ್ನುವ ಅನುಮಾನ ಸ್ವಲ್ಪ ಕೂಡ ಬಾರದ ಹಾಗೆ ನಡೆದುಕೊಳ್ಳುತ್ತಾಳೆ. ಇನ್ನು ಪಾರು ಅಖಿಲ ಫೋಟೋವನ್ನು ಗೋಡೆಗೆ ನೇತು ಹಾಕಿ ನೋಡುತ್ತಾ ಇರುವಾಗ ಗಣಿ ತನ್ನ ತಂದೆಯನ್ನು ತರಾತುರಿಯಲ್ಲಿ ಕರೆದುಕೊಂಡು ಒಳಗೆ ಹೋಗುತ್ತಿದ್ದಂತೆ ರಘು ಬರುತ್ತಾನೆ. ಅರೆ ಗಣಿ ಯಾಕೆ ಹೀಗೆ ಹನುಮಂತುವನ್ನು ಕರೆದುಕೊಂಡು ಹೋಗುತ್ತಾ ಇದ್ದಾನೆ ಎಂದು ಯೋಚನೆ ಮಾಡುತ್ತಾ ಮನೆಯ ಒಳಗೆ ಹೋಗಿ ನೋಡಿದಾಗ ಅಖಿಲ ಫೋಟೋ ನೋಡಿ ಮೂಕ ವಿಸ್ಮಿತ ಆಗುತ್ತಾನೆ.ಆಕೆಯೇ ಅನುಷ್ಕಾ ಎನ್ನುವ ಅನುಮಾನ ಸ್ವಲ್ಪ ಕೂಡ ಬಾರದ ಹಾಗೆ ನಡೆದುಕೊಳ್ಳುತ್ತಾಳೆ. ಇನ್ನು ಪಾರು ಅಖಿಲ ಫೋಟೋವನ್ನು ಗೋಡೆಗೆ ನೇತು ಹಾಕಿ ನೋಡುತ್ತಾ ಇರುವಾಗ ಗಣಿ ತನ್ನ ತಂದೆಯನ್ನು ತರಾತುರಿಯಲ್ಲಿ ಕರೆದುಕೊಂಡು ಒಳಗೆ ಹೋಗುತ್ತಿದ್ದಂತೆ ರಘು ಬರುತ್ತಾನೆ. ಅರೆ ಗಣಿ ಯಾಕೆ ಹೀಗೆ ಹನುಮಂತುವನ್ನು ಕರೆದುಕೊಂಡು ಹೋಗುತ್ತಾ ಇದ್ದಾನೆ ಎಂದು ಯೋಚನೆ ಮಾಡುತ್ತಾ ಮನೆಯ ಒಳಗೆ ಹೋಗಿ ನೋಡಿದಾಗ ಅಖಿಲ ಫೋಟೋ ನೋಡಿ ಮೂಕ ವಿಸ್ಮಿತ ಆಗುತ್ತಾನೆ.ಅಖಿಲ ತಾನು ಹೇಳಿದ ಹಾಗೆಯೇ ಈ ಹುಡುಗಿ ನಡೆದುಕೊಂಡು ಬಿಟ್ಟಳಲ್ಲ ಎಂದು ಖುಷಿ ಪಡುತ್ತ ಇರುತ್ತಾನೆ. ಹನುಮಂತು ಈ ವೇಳೆ ಪಾರು ಹೆಗಲು ತಟ್ಟುತ್ತಾರೆ. ಎಂತಹ ಒಳ್ಳೆಯ ಕೆಲಸ ಮಾಡುತ್ತಾ ಇದ್ದೀಯಾ, ಅಖಿಲಮ್ಮ ನಿಮ್ಮನ್ನು ಮನೆಯಿಂದ ಹೊರಗೆ ಕಳುಹಿಸಿದರೂ ನೀವು ಅವರನ್ನು ಪೂಜಿಸುತ್ತ ಇರುವುದು ನನಗೆ ಖುಷಿ ನೀಡಿದೆ ಎಂದು ಹೇಳುತ್ತಾನೆ. ಆ ವೇಳೆ ಪಾರು ಅಪ್ಪ ಗರ್ಭಿಣಿ ಆಗಿರುವ ಸಂದರ್ಭ ನಾವು ಯಾರ ಮುಖವನ್ನು ಜಾಸ್ತಿ ನೋಡುತ್ತೇವೋ ಹಾಗೆಯೇ ಅವರ ಸ್ವಭಾವ ಕೂಡ ಬರುತ್ತಂತೆ ಎಂದಾಗ ರಘು ಬಹಳ ಖುಷಿಯಿಂದ ನಿಂತು ನೋಡುತ್ತಾ ಇರುತ್ತಾರೆ.ಸೊಸೆ ತನ್ನ ಅತ್ತೆಯ ಬಗ್ಗೆ ಎಷ್ಟೆಲ್ಲ ಕಾಳಜಿ ಇಟ್ಟುಕೊಂಡು ಇದ್ದಾಳಲ್ಲ ಎಂದು ಭಾವುಕ ಆಗುತ್ತಾರೆ. ಕೊನೆಗೆ ಪಾರು ಅತ್ತೆಯಮ್ಮನ ಹಾಗೆ ಗುಣ ಸ್ವಭಾವ ಇರುವ ಹೆಣ್ಣು ಮಗು ನನಗೆ ಆಗುವುದು ಎಂದು ಹೇಳುತ್ತಾಳೆ. ಅಷ್ಟರಲ್ಲಿ ರಘು ಜೋರಾಗಿ ನನ್ನ ಮುದ್ದು ಸೊಸೆ ಎಂದು ಕರೆಯುತ್ತಾನೆ. ಇದನ್ನು ಕೇಳಿದ ಪಾರುಗೆ ಆಶ್ವರ್ಯ ಆಗುತ್ತದೆ.ಪಾರು ಹತ್ತಿರ ಬಂದು ಹನುಮಂತು ಚಿನ್ನದ ಹಾಗೆ ಇರುವ ಮಗಳನ್ನು ಹೇತ್ತಿದ್ದಿಯಾ, ಇಂಥ ಸೊಸೆ ನಮಗೆ ಸಿಕ್ಕಿದ್ದು ನಮ್ಮ ಪುಣ್ಯ ಎಂದೆಲ್ಲ ಹೇಳುತ್ತಾನೆ. ಇನ್ನು ತನಗೆ ಆಗುತ್ತಿರುವ ಈ ಖುಷಿಯನ್ನು ರಘುಗೆ ಯಾರ ಬಳಿಯೂ ಹೇಳಿಕೊಳ್ಳಲು ಆಗುತ್ತಿಲ್ಲ. ತನ್ನ ಪ್ರೀತಿಯ ಮಡದಿಯ ಬಳಿ ಹೇಳಬೇಕು ಎಂದುಕೊಂಡರೂ ಬೇಡ ಎಂದು ಅನ್ನಿಸಿ ಸುಮ್ಮನೆ ಇದ್ದು ಬಿಡುತ್ತಾನೆ. ಇತ್ತ ಅಖೀಲಾಂಡೇಶ್ವರಿ ಜನನಿ ಬಳಿ ಬರುತ್ತಾಳೆ. ಆಕೆಗೆ ಒಂದು ಗಿಫ್ಟ್ ಕೂಡ ತರುತ್ತಾಳೆ. ಜನನಿ ಬಳಿ ಆ ಗಿಫ್ಟ್ ಬಾಕ್ಸ್ ಕೊಟ್ಟು ಓಪನ್ ಮಾಡಲು.ಹೇಳುತ್ತಾಳೆ.ಮೆತ್ತಗೆ ಗಿಫ್ಟ್ ಪ್ಯಾಕ್ ಅನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿ ಬಾಲ ಕೃಷ್ಣನ ಫೋಟೋ ಇರುತ್ತದೆ. ಅದನ್ನು ನೋಡಿ ಜನನಿ ಬಹಳ ಖುಷಿ ಪಡುತ್ತಾಳೆ. ಅರೆ ಬಾಲ ಕೃಷ್ಣ ಎಂದು ಹೇಳುತ್ತಾಳೆ. ಬಳಿಕ ಆಕೆ ಎದ್ದ ಕೂಡಲೇ ಬಾಲ ಕೃಷ್ಣ ಕಾಣಿಸಬೇಕು ಎಂದು ಎದುರುಗಡೆ ಇಡುತ್ತಾಳೆ ಅಖಿಲ. ಇನ್ನು ರಘು ಕೂಡ ತನ್ನ ಮುದ್ದು ಸೊಸೆ ಪಾರುಗೆ ಕೂಡ ಗಿಫ್ಟ್ ಬಾಕ್ಸ್ ಹಿಡಿದುಕೊಂಡು ಹೋಗಿರುತ್ತಾನೆ. ಆ ಗಿಫ್ಟ್ ಬಾಕ್ಸ್ ಓಪನ್ ಮಾಡಿ ಪಾರುಗೆ ಇನ್ನೂ ಖುಷಿ ದುಪ್ಪಟ್ಟು ಆಗುತ್ತದೆ ಅದರಲ್ಲಿ ಬಾಲ ಕೃಷ್ಣನ ಫೋಟೋ ಇರುತ್ತದೆ. ಆಕೆ ಅಖಿಲ ಅವರ ಫೋಟೋ ಬಳಿಯೇ ಈ ಫೋಟೋವನ್ನು ಇಡುತ್ತಾಳೆ. ಬಳಿಕ ಆ ಫೋಟೋ ನೋಡಿ ಹನುಮಂತು ಪಾರು ನಿನಗೆ ಅವಳಿ ಜವಳಿ ಮಕ್ಕಳು ಆಗಲಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪಾರು ಹಾಗೂ ಅಲ್ಲಿ ನೆರೆದವರು ಎಲ್ಲರೂ ಜೋರಾಗಿ ನಗುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಮೊಸರನ್ನು ಸೇವಿಸುವಾಗ ಈ ವಿಷ್ಯ ನೆನಪಿನಲ್ಲಿಡೋದು ಮುಖ್ಯ.

Fri Feb 24 , 2023
ಬೇಸಿಗೆ ಕಾಲ ಆರಂಭವಾಗಿದ್ದು, ಮೊಸರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಸಿಗೆಯಲ್ಲಿ ಊಟದ ಜೊತೆ ಮೊಸರು ಸೇವಿಸುವುದು, ತಣ್ಣನೆಯ ಲಸ್ಸಿ ಕುಡಿಯುವುದು, ಮಜ್ಜಿಗೆ ಕುಡಿಯುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಅವರಿಗೆ ಮೊಸರನ್ನು ತಿನ್ನುವ ಸರಿಯಾದ ವಿಧಾನದ ಬಗ್ಗೆ ತಿಳುವಳಿಕೆ ಇರುವುದಿಲ್ಲ.ಮೊಸರು ಸೇವಿಸುವಾಗ ಸಮಯ, ಪ್ರಮಾಣ, ಗುಣಮಟ್ಟ ಮತ್ತು ಸಂಯೋಜನೆಯನ್ನು ನೋಡಿಕೊಳ್ಳುವುದು ಮುಖ್ಯವಾಗಿದೆ. ಮೊಸರು ತಿನ್ನುವ ಸಂದರ್ಭದಲ್ಲಿ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ಮೊಸರು ಅನಾರೋಗ್ಯಕ್ಕೀಡಾಗಿಸಬಹುದು.ಆಯುರ್ವೇದದಲ್ಲಿ ಮೊಸರಿನ ಹಲವಾರು ಪ್ರಯೋಜನಗಳಿವೆ. ಆಯುರ್ವೇದ […]

Advertisement

Wordpress Social Share Plugin powered by Ultimatelysocial