ವಿರಾಟ್​ ಕೊಹ್ಲಿಗಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ ಶರ್ಮಾ;

ನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಮದುವೆ ಆದರು. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿಗೆ ಮಗಳು ಜನಿಸಿದಳು. ಅವಳಿಗೆ ವಮಿಕಾ ಎಂದು ನಾಮಕರಣ ಮಾಡಲಾಗಿದೆ.ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಮತ್ತೆ ಲಯ ಕಂಡುಕೊಂಡಿದ್ದಾರೆ.

ಫಾರ್ಮ್​​ಗೆ ಮರಳುವ ಮೂಲಕ ಕ್ರಿಕೆಟ್​ ಪ್ರಿಯರನ್ನು ಅವರು ರಂಜಿಸುತ್ತಿದ್ದಾರೆ. ಅವರು ಯಶಸ್ಸು ಕಂಡಾಗ, ಸೋತಾಗ  ಅನುಷ್ಕಾ ಶರ್ಮಾ ಅವರು ವಿರಾಟ್ ಜೊತೆಗಿದ್ದರು. ಈ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ  ಅವರ ತ್ಯಾಗವನ್ನು ಅವರು ನೆನಪಿಸಿಕೊಂಡಿದ್ದಾರೆ. ಪತ್ನಿಯನ್ನು ಮನಸ್ಫೂರ್ತಿಯಾಗಿ ಹೊಗಳಿದ್ದಾರೆ ವಿರಾಟ್. ಅವರು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಮದುವೆ ಆದರು. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿಗೆ ಮಗಳು ಜನಿಸಿದಳು. ಅವಳಿಗೆ ವಮಿಕಾ ಎಂದು ನಾಮಕರಣ ಮಾಡಲಾಗಿದೆ. ಮಗಳು ಜನಿಸಿದ ನಂತರದಲ್ಲಿ ವಿರಾಟ್ ಕೊಹ್ಲಿ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅನುಷ್ಕಾ ಅವರು ಮಗಳ ಆರೈಕೆ ಮಾಡುತ್ತಾರೆ. ಇದರಿಂದ ವಿರಾಟ್​​ಗೆ ಕ್ರಿಕೆಟ್​ ಮೇಲೆ ಗಮನಹರಿಸೋಕೆ ಸಾಧ್ಯವಾಗುತ್ತಿದೆ.

‘ಕಳೆದ ಎರಡು ವರ್ಷಗಳಲ್ಲಿ ಹಲವು ಘಟನೆಗಳು ನಡೆದೆವು. ನಾವು ಮಗುವನ್ನು ಪಡೆದೆವು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗ ದೊಡ್ಡದು. ಅನುಷ್ಕಾ ನೋಡಿದಾಗ ನನ್ನಲ್ಲಿರುವ ಸಮಸ್ಯೆಗಳು ಏನೂ ಅಲ್ಲ ಎಂದೆನಿಸುತ್ತದೆ. ನೀವು ಹೇಗಿದ್ದೀರೋ ಹಾಗೆ ನಿಮ್ಮ ಕುಟುಂಬ ಒಪ್ಪಿಕೊಳ್ಳುತ್ತದೆ ಎಂದಾದರೆ ಅವರಿಂದ ಅದಕ್ಕಿಂತ ಹೆಚ್ಚಿನದ್ದನ್ನು ನೀವು ನಿರೀಕ್ಷಿಸಬಾರದು’ ಎಂದು ವಿರಾಟ್​ ಕೊಹ್ಲಿ ಅವರು ಆರ್​ಸಿಬಿ ಪಾಡ್​ಕಾಸ್ಟ್​​ನಲ್ಲಿ ಹೇಳಿದ್ದಾರೆ.

‘ಸ್ಫೂರ್ತಿ ಬೇಕು ಎಂದಾಗ ನೀವು ಮೊದಲು ನೋಡೋದು ಮನೆಯ ಸದಸ್ಯರನ್ನು. ಅನುಷ್ಕಾ ನನಗೆ ದೊಡ್ಡ ಸ್ಫೂರ್ತಿ. ನನ್ನ ಜೀವನದಲ್ಲಿ ನಾನು ಬೇರೆಯದೇ ದೃಷ್ಟಿಕೋನ ಹೊಂದಿದ್ದೆ. ಆದರೆ, ಒಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದರೆ ನಿಮ್ಮೊಳಗೆ ಆ ಬದಲಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಜೀವನದ ಬಗ್ಗೆ ಅನುಷ್ಕಾ ದೃಷ್ಟಿಕೋನ ಭಿನ್ನವಾಗಿದೆ. ವಿಷಯಗಳನ್ನು ಒಪ್ಪಿಕೊಳ್ಳಲು ನಾನು ಅವರಿಂದ ಕಲಿತೆ’ ಎಂದಿದ್ದಾರೆ ವಿರಾಟ್.

ಅನುಷ್ಕಾ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮದುವೆ ಬಳಿಕ ಅವರು ಕುಟುಂಬದಲ್ಲಿ ಬ್ಯುಸಿ ಆದರು. ಹೀಗಾಗಿ, ಅವರು ಸಿನಿಮಾ ಮಾಡೋದು ಕಡಿಮೆ ಆಯಿತು. ಕುಟುಂಬಕ್ಕಾಗಿ ಅವರು ತಮ್ಮ ವೃತ್ತಿ ಜೀವನವನ್ನು ತ್ಯಾಗ ಮಾಡಿದ್ದಾರೆ ಎನ್ನುವ ಮಾತನ್ನು ಅನೇಕರು ಒಪ್ಪುತ್ತಾರೆ. ಅವರು ಸಂಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಕೊಳ್ಳಲಿ ಅನ್ನೋದು ಅನೇಕರ ಕೋರಿಕೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಮಗಳ ಆರೈಕೆಯಲ್ಲಿ ಅನುಷ್ಕಾ ಬ್ಯುಸಿ ಇರುವುದರಿಂದ ಇದು ಸಾಧ್ಯವಾಗುತ್ತಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀರೆಕಾಯಿ ಹುಳಿ ತೊವ್ವೆ ಮಾಡುವ ವಿಧಾನ.

Wed Mar 1 , 2023
    ಬಾಣಲಿಗೆ ಎಣ್ಣೆ ಹಾಕಿ ಇದು ಬಿಸಿಯಾದ ನಂತರ ಇಂಗು ಹಾಕಿ ಬಾಡಿಸಿ, ಇದಕ್ಕೆ ಮೆಂತ್ಯೆ, ಕಡ್ಲೆಬೇಳೆ, ಉದ್ದಿನಬೇಳೆ, ಧನಿಯಾ, ಬ್ಯಾಡಿಗೆ ಮೆಣಸಿನಕಾಯಿ, ಅರಿಶಿಣ, ತೆಂಗಿನಕಾಯಿ ತುರಿ ಹಾಕಿ ಜೊತೆಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲ ತಯಾರಿಕೊಳ್ಳಿ. ಪ್ಯಾನಿಗೆ ಒಣಕೊಬ್ಬರಿತುರಿ, ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲ ತಯಾರಿಸಿಕೊಳ್ಳಿ. ಪ್ಯಾನಿಗೆ ಒಣಕೊಬ್ಬರಿತುರಿ, ಸ್ವಲ್ಪ ಅರಿಶಿಣ ಸೇರಿಸಿ ಹುರಿದು ಕೊಳ್ಳಿ ಕುಕ್ಕರ್‌ಗೆ ನೀರು ಮತ್ತು ತೊಗರಿಬೇಳೆ ಹಾಕಿ ಬೇಯಿಸಿ […]

Advertisement

Wordpress Social Share Plugin powered by Ultimatelysocial