3,673 ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

ಬೆಂಗಳೂರು : ರಾಜ್ಯ ಸರ್ಕಾರವು ಗುತ್ತಿಗೆ ಪೌರಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಲಾಗಿದ್ದು, ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಅಧಿಸೂಚನೆ ಹೊರಡಿ ಸಲಾಗಿದ್ದು, ಒಟ್ಟು 3,673 ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಬಿಬಿಎಂಪಿಯ ವೆಬ್ ಸೈಟ್ https://bbmp.gov.in ಗೆ ಭೇಟಿ ನೀಡಿ ನೇಮಕಾತಿಯ ಅಧಿಸೂಚನೆಯನ್ನು ನೋಡಬಹುದು. ಜ.16ರಿ೦ದ 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಜ.16ರ ಬೆಳಗ್ಗೆ 10ರಿಂದ ಅರ್ಜಿ ವಿತರಣೆ ಮಾಡಲಾಗುತ್ತದೆ. ಜನವರಿ 30 ಸಂಜೆ 5ರ ಒಳಗೆ ಭರ್ತಿ ಮಾಡಿದ ಅರ್ಜಿ ಹಾಗೂ ಸೂಚಿಸಿದ ದಾಖಲೆಗಳೊಂದಿಗೆ ಸಲ್ಲಿಸಿ ಸ್ವೀಕೃತಿ ಪಡೆಯಲು ಸೂಚಿಸಲಾಗಿದೆ.

ನೇಮಕಾತಿಗೆ ಅಧಿಸೂಚನೆ ಹೊರಡಿಸಲಾದ 3,673 ಹುದ್ದೆಗಳ ಪೈಕಿ 3,243 ಹುದ್ದೆಗಳನ್ನು ಸಾಮಾನ್ಯ ಹುದ್ದೆಗಳಾಗಿದ್ದು, ಉಳಿದ 430 ಗಳಿಗೆ ನೇಮಕಾತಿಗೆ ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿ ಮೀಸಲಿಡಲಾಗಿದೆ.

ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ 10 ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಪೌರಕಾರ್ಮಿಕರಿಗೆ 217 ಸಾವಿರದಿಂದ 228,950 ರವರೆಗೆ ವೇತನ ನಿಗದಿ ಪಡಿಸಲಾಗಿದೆ. ನೇಮಕಾತಿ ವಯೋಮಿತಿಯನ್ನು ಗುಷ್ಠ 35 ವರ್ಷಕ್ಕೆ ನಿಗದಿ ಪಡಿಸಲಾಗಿದೆ. ವಯಸ್ಸು ದೃಢಿಕರಣಕ್ಕೆ ಅರ್ಜಿ ಸಲ್ಲಿಸುವ ವೇಳೆ ಶೈಕ್ಷಣಿಕ ದಾಖಲೆಗಳು, ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯ ದಾಖಲೆಗಳಲ್ಲಿ ಯಾವುದಾದರೂ ದಾಖಲೆ ಸಲ್ಲಿಸಬೇಕಿದೆ. ಕನಿಷ್ಠ 2 ವರ್ಷ ಗುತ್ತಿಗೆ ಆಧಾರದಡಿ ಕಾರ್ಯನಿರ್ವ ಹಿಸಿದ ಪೌರಕಾರ್ಮಿಕರು ಕಾಯಂಗೊಳಿಸುವ ನೇಮಕಾತಿ ವೇಳೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು.

Sun Jan 15 , 2023
ಕೊಪ್ಪಳ: ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಮನೆಯೊಂದರಲ್ಲಿ ಚಾಪೆ ಮೇಲೆ ಮಲಗಿದ ಸ್ಥಿತಿಯಲ್ಲೇ ರಕ್ತದ ಮಡುವಿನಲ್ಲಿ ಯುವಕ ಮತ್ತು ಯುವತಿ ಶವ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಬಳಿಗೇರಿ ಗ್ರಾಮದ ಸುಮಾ ಮತ್ತು ಪ್ರಕಾಶ ಭಜಂತ್ರಿ ಮೃತ ದುರ್ದೈವಿಗಳು. ಇಂದು(ಶನಿವಾರ) ಮಧ್ಯಾಹ್ನ ಇವರಿಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿ ಮಾಡುವಂತೆ ಸುಮಾಳ ಹಿಂದೆ ಪ್ರಕಾಶ ಭಜಂತ್ರಿ ದುಂಬಾಲು ಬಿದ್ದಿದ್ದ. ಈ ವಿಷಯ ಹುಡುಗಿ ಮನೆಯವರಿಗೂ ತಿಳಿದಿತ್ತು. ಇದಕ್ಕೆ ಮನೆಯವರು […]

Advertisement

Wordpress Social Share Plugin powered by Ultimatelysocial