ಏಪ್ರಿಲ್‌ ತಿಂಗಳ ಈ ದಿನಾಂಕಗಳಲ್ಲಿ ಬ್ಯಾಂಕ್‌ಗಳಿಗೆ ರಜೆ, ಇಂದೇ ನಿಮ್ಮ ಕೆಲಸ ಮುಗಿಸಿಕೊಳ್ಳಿ

ನವದೆಹಲಿ: ಹೊಸ ಹಣಕಾಸು ವರ್ಷವು ಏಪ್ರಿಲ್ 1, 2022 ರಿಂದ ಪ್ರಾರಂಭವಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ದಿನದಂದು ಬ್ಯಾಂಕ್‌ಗಳಲ್ಲಿ ಯಾವುದೇ ಸಾರ್ವಜನಿಕ ವ್ಯವಹಾರವಿಲ್ಲ. ಇದರೊಂದಿಗೆ ಈ ತಿಂಗಳಲ್ಲಿ ವಿವಿಧ ವಲಯಗಳಲ್ಲಿ ಒಟ್ಟು 30 ದಿನಗಳಲ್ಲಿ 15 ದಿನ ಬ್ಯಾಂಕ್‌ಗಳಲ್ಲಿ ಕೆಲಸ ಇರುವುದಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ವೆಬ್‌ಸೈಟ್‌ನಲ್ಲಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ರಜಾದಿನಗಳ ಸಂಪೂರ್ಣ ಪಟ್ಟಿ ಇದೆ. ಈ ವರ್ಷದ ಏಪ್ರಿಲ್‌ನಲ್ಲಿ ಗುಡಿ ಪಾಡ್ವಾ, ಅಂಬೇಡ್ಕರ್ ಜಯಂತಿ ಮತ್ತು ಸರಹುಲ್‌ನ ಸಂದರ್ಭದಲ್ಲಿ ವಿವಿಧ ವಲಯಗಳ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಮುಂದಿನ ತಿಂಗಳು ಬ್ಯಾಂಕ್‌ಗಳಿಗೆ ಒಟ್ಟು 15 ದಿನ ರಜೆ ಇರಲಿದೆ. ಇವುಗಳಲ್ಲಿ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನಗಳು ಸೇರಿವೆ.

ಏಪ್ರಿಲ್ 1, 2022 (ಶುಕ್ರವಾರ): ಹೊಸ ತಿಂಗಳು ಮತ್ತು ಹಣಕಾಸು ವರ್ಷದ ಮೊದಲ ದಿನದಂದು ಹೆಚ್ಚಿನ ವಲಯಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕ್ ಖಾತೆಗಳ ವಾರ್ಷಿಕ ಮುಚ್ಚುವಿಕೆ ಏಪ್ರಿಲ್ 1 ರಂದು ನಡೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಏಪ್ರಿಲ್ 2, 2022 (ಶನಿವಾರ): ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರ ವಲಯಗಳು ಗುಡಿ ಪಾಡ್ವಾ/ಯುಗಾದಿ ಹಬ್ಬದ ಸಂದರ್ಭದಲ್ಲಿ/ನವರಾತ್ರಿ/ತೆಲುಗು ಹೊಸ ವರ್ಷದ ಮೊದಲ ದಿನ/ಸಜಿಬು ನೊಂಗಂಪಾಂಬ ( ಚೈರೋಬಾ) ಬ್ಯಾಂಕ್‌ಗಳಲ್ಲಿ ಯಾವುದೇ ವ್ಯವಹಾರ ಇರುವುದಿಲ್ಲ.

ಏಪ್ರಿಲ್ 3 (ಭಾನುವಾರ): ಈ ದಿನ ಬ್ಯಾಂಕ್‌ಗಳಿಗೆ ವಾರದ ರಜೆ.

ಏಪ್ರಿಲ್ 4 (ಸೋಮವಾರ): ಸರ್ಹುಲ್ ಸಂದರ್ಭದಲ್ಲಿ, ರಾಂಚಿ ವಲಯದ ಬ್ಯಾಂಕ್‌ಗಳ ಶಾಖೆಗಳು ಮುಚ್ಚಲ್ಪಡುತ್ತವೆ.

ಏಪ್ರಿಲ್ 5 (ಮಂಗಳವಾರ): ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಸಂದರ್ಭದಲ್ಲಿ, ಹೈದರಾಬಾದ್ ವಲಯದ ಬ್ಯಾಂಕ್‌ಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ.

ಏಪ್ರಿಲ್ 9 (ಶನಿವಾರ): ತಿಂಗಳ ಎರಡನೇ ಶನಿವಾರದಂದು ಬ್ಯಾಂಕ್‌ಗಳು ಕೆಲಸ ಮಾಡುವುದಿಲ್ಲ.

10 ಏಪ್ರಿಲ್ (ಭಾನುವಾರ): ಸಾಪ್ತಾಹಿಕ ರಜೆ

ಏಪ್ರಿಲ್ 14 (ಗುರುವಾರ): ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ / ಮಹಾವೀರ ಜಯಂತಿ / ಬೈಸಾಖಿ / ತಮಿಳು ಹೊಸ ವರ್ಷ / ಚೈರೋಬಾ, ಬಿಜು ಹಬ್ಬ / ಬೋಹರ್ ಬಿಹು ಸಂದರ್ಭದಲ್ಲಿ, ಶಿಲ್ಲಾಂಗ್ ಮತ್ತು ಶಿಮ್ಲಾ ವಲಯವನ್ನು ಹೊರತುಪಡಿಸಿ ಉಳಿದೆಲ್ಲ ವಲಯಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಏಪ್ರಿಲ್ 15 (ಶುಕ್ರವಾರ): ಶುಭ ಶುಕ್ರವಾರ/ಬಂಗಾಳಿ ಹೊಸ ವರ್ಷ/ಹಿಮಾಚಲ ದಿನ/ವಿಶು/ಬೋಹಾಗ್ ಬಿಹು ಸಂದರ್ಭದಲ್ಲಿ ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಏಪ್ರಿಲ್ 16 (ಶನಿವಾರ): ಬೊಹಾಗ್ ಬಿಹುವಿನ ಕಾರಣದಿಂದ ಗುವಾಹಟಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

17 ಏಪ್ರಿಲ್ (ಭಾನುವಾರ): ಸಾಪ್ತಾಹಿಕ ರಜೆ

ಏಪ್ರಿಲ್ 21 (ಗುರುವಾರ): ಗಡಿಯಾ ಪೂಜೆಯ ಸಂದರ್ಭದಲ್ಲಿ ಅಗರ್ತಲಾದಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

23 ಏಪ್ರಿಲ್ (ಶನಿವಾರ): ತಿಂಗಳ ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಲ್ಲಿ ಯಾವುದೇ ವ್ಯವಹಾರ ಇರುವುದಿಲ್ಲ.

24 ಏಪ್ರಿಲ್ (ಭಾನುವಾರ): ಸಾಪ್ತಾಹಿಕ ರಜೆ

ಏಪ್ರಿಲ್ 29 (ಶುಕ್ರವಾರ): ಶಾಬ್-ಎ-ಕದ್ರ್/ಜುಮಾತ್-ಉಲ್-ವಿದಾ ಸಂದರ್ಭದಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಶ್ಮೀರ ಫೈಲ್ಸ್ ಟಿಕೆಟ್ ನೀಡಿದಂತೆ ಇಂಧನಕ್ಕೆ ಕೂಪನ್‌ ನೀಡಿ: ಬಿಜೆಪಿಗೆ ರಾಜಸ್ಥಾನ ಸಚಿವ ಟಾಂಗ್‌

Tue Mar 29 , 2022
ಜೈಪುರ, ಮಾರ್ಚ್ 29: ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆ ಲೀಟರ್‌ಗೆ ಸುಮಾರು 5 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ನಡುವೆ ಕಾಶ್ಮೀರ ಫೈಲ್ಸ್ ಟಿಕೆಟ್ ನೀಡಿದಂತೆ ಕೇಂದ್ರದ ಆಡಳಿತಾರೂಢ ಬಿಜೆಪಿಯು ಇಂಧನಕ್ಕಾಗಿ ಕೂಪನ್‌ಗಳನ್ನು ವಿತರಿಸಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್ ಸೋಮವಾರ ಹೇಳಿದ್ದಾರೆ.”ಚುನಾವಣೆಯ ನಂತರ, ಬಿಜೆಪಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಅವರು ‘ರಾವಣ ಭಕ್ತರು’ ‘ರಾಮಭಕ್ತರು’ ಅಲ್ಲ. ಬಿಜೆಪಿಯ ಮುಖ್ಯಮಂತ್ರಿ, ಮಂತ್ರಿಗಳು […]

Advertisement

Wordpress Social Share Plugin powered by Ultimatelysocial