ಹಿಂದಿ ಕಿಚ್ಚಿಗೆ ಅರ್ಜುನ್‌ ರಾಮ್‌ಪಾಲ್‌ ತುಪ್ಪ..

ಮುಂಬಯಿ: ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಹೇಳುವ ಮೂಲಕ ಹಿಂದಿ ವಿವಾದಕ್ಕೆ ಬಾಲಿವುಡ್‌ ನಟ ಅರ್ಜುನ್‌ ರಾಮ್‌ಪಾಲ್‌ ತುಪ್ಪ ಸುರಿದಿದ್ದಾರೆ.

ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದ್ದು ಅದಕ್ಕೆ ಗೌರವ ನೀಡಬೇಕು ಎಂದಿದ್ದಾರೆ. ಅಲ್ಲದೆ, ನಾವೆಲ್ಲರೂ ಒಟ್ಟಿಗೆ ಬಾಳುತ್ತಿದ್ದು, ಇಲ್ಲಿ ಭಾಷೆ ಪ್ರಧಾನವೇ ಅಲ್ಲ.

ನನ್ನ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆ. ಇದನ್ನು ಹೆಚ್ಚು ಜನ ಮಾತನಾಡುತ್ತಾರೆ, ಸಂಪರ್ಕ ಭಾಷೆಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ತಿಂಗಳ ಹಿಂದಷ್ಟೇ ಬಾಲಿವುಡ್‌ ನಟ ಅಜಯ್‌ ದೇವಗನ್‌ ಮತ್ತು ಕನ್ನಡ ನಟ ಸುದೀಪ್‌ ನಡುವೆ ಹಿಂದಿ ಕುರಿತಂತೆ ಟ್ವೀಟ್‌ ಸಮರವೇ ನಡೆದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ:

Fri May 20 , 2022
ಕನ್ನಡದ ಹಾಟ್ ಬ್ಯೂಟಿ ಎಂದೇ ಫೇಮಸ್‌ ಆಗಿರುವ ನಟಿ ಸಂಜನಾ ಗಲ್ರಾನಿ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಸದ್ಯ ಕಳೆದ ಎರಡು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸದೇ ಕುಟುಂಬದ ಜೊತೆ ಸಂತೋಷವಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸಂಜನಾ ಗಲ್ರಾನಿ ಇತ್ತೀಚಿಗಷ್ಟೇ ಮುಸ್ಲಿಂ ಸಂಪ್ರಾದಾಯದಂತೆ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಸಂಜನಾ ಗಲ್ರಾನಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ನಿರೀಕ್ಷೆಯಲ್ಲಿದ್ದರು. ಇಂದು (ಮೇ 19) ಆ ಗಳಿಗೆ ಕೂಡಿ ಬಂದಿದ್ದು, ನಟಿ […]

Advertisement

Wordpress Social Share Plugin powered by Ultimatelysocial