ಆರೋಗ್ಯಕರ ʼಬಾಳೆʼ ಹಣ್ಣಿನ ಆರಂಭ ಹೇಗಾಯ್ತು ಗೊತ್ತಾ…?

ಬಾಳೆಹಣ್ಣನ್ನು ಇಷ್ಟಪಡದೇ ಇರುವವರು ಬಹಳ ಕಡಿಮೆ. ಇದು ಆಹಾರ ಜೀರ್ಣವಾಗಲು ತುಂಬ ಸಹಾಯಕಾರಿ. ಬಾಳೆಯನ್ನು ಮೊದಲು ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಬೆಳೆಯಲಾಯಿತು. ಅಲ್ಲಿನ ಅರಣ್ಯಗಳಲ್ಲಿ ಕಾಡು ಬಾಳೆ ಬೆಳೆಯುತ್ತಿತ್ತು.

ಅನೇಕ ವರ್ಷಗಳ ನಂತರ ಕಾಡು ಬಾಳೆಯನ್ನು ಸೂಕ್ತ ವಿಧಾನದಲ್ಲಿ ಬೆಳೆಸಲಾಯಿತು.

ಇದರ ಫಲವಾಗಿ ರುಚಿಕರವಾದ ಬಾಳೆಹಣ್ಣು ದೊರೆಯಲಾರಂಭಿಸಿದ್ದು, ಕಾಲಕಳೆದಂತೆ ಬಾಳೆಹಣ್ಣು ತುಂಬ ಜನಪ್ರಿಯತೆ ಪಡೆಯಿತು. ಇದರಿಂದಾಗಿ ಬಾಳೆಯನ್ನು ವಿಶ್ವದೆಲ್ಲೆಡೆ ಬೆಳೆಯಲು ಆರಂಭಿಸಲಾಯಿತು.

ಬಾಳೆಹಣ್ಣಿನಲ್ಲಿ ಪ್ರತಿಶತ 74ರಷ್ಟು ನೀರು, 20 ರಷ್ಟು ಸಕ್ಕರೆ, 2 ರಷ್ಟು ಪ್ರೋಟೀನು, 1.5 ರಷ್ಟು ಜಿಡ್ಡು ಪದಾರ್ಥ, 1ರಷ್ಟು ಸೆಲ್ಯುಲೋಸ್ ಗಳಿರುತ್ತವೆ. ಈ ಹಣ್ಣಿನಲ್ಲಿ ಎ,ಸಿ, ಬಿ1, ಬಿ2 ವಿಟಮಿನ್ ಗಳಿರುತ್ತವೆ. ಬಾಳೆಹಣ್ಣನ್ನು ಒಣಗಿಸಿ ಹಿಟ್ಟನ್ನು ಮಾಡುತ್ತಾರೆ. ಆಫ್ರಿಕಾದ ಜನರು ತಮ್ಮ ಗುಡಿಸಲಿಗೆ ಬಾಳೆಎಲೆಗಳನ್ನು ಹಾಕಿ ಮುಚ್ಚುತ್ತಾರೆ. ಬಾಳೆಮರವನ್ನು ಒಣಗಿಸಿ ಅದರ ನಾರಿನಿಂದ ಹಗ್ಗ ತಯಾರಿಸುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಸರು ಮತ್ತು ಮಜ್ಜಿಗೆ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ

Wed Mar 16 , 2022
ಡೈರಿ ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಮೊಸರು ಮತ್ತು ಮಜ್ಜಿಗೆ ಎರಡೂ ಹಾಲಿನಿಂದ ತಯಾರಿಸಿದ ಉತ್ಪನ್ನಗಳಾಗಿವೆ. ಎರಡರಲ್ಲೂ ಬಹುತೇಕ ಒಂದೇ ರೀತಿಯ ಪೋಷಕಾಂಶಗಳು ಇರುತ್ತವೆ. ಅದೇನೇ ಇದ್ದರೂ, ಮೊಸರು ಮತ್ತು ಮಜ್ಜಿಗೆಯಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಮೊಸರನ್ನು ದುರ್ಬಲಗೊಳಿಸಿದಾಗ ಅದು ಮಜ್ಜಿಗೆ ಆಗುತ್ತದೆ ಎಂದು […]

Advertisement

Wordpress Social Share Plugin powered by Ultimatelysocial