ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಮುಂಬೈ ಕೋರ್ಟ್ ಹೋದ ಆರ್ಯನ್!

ಡ್ರಗ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರಸ ಆರ್ಯನ್ ಖಾನ್‌ಗೆ ಎನ್‌ಸಿಬಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆರ್ಯನ್ ಖಾನ್‌ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಬಾಂಡ್‌ ಅನ್ನು ಕ್ಯಾನ್ಸಲ್ ಮಾಡಿ ಪಾಸ್‌ಪೋರ್ಟ್ ಅನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಆರ್ಯನ್ ಖಾನ್ ಜಾಮೀನು ನೀಡುವ ವೇಳೆ ನ್ಯಾಯಾಲಯ ಪಾಸ್‌ಪೋರ್ಟ್ ಒಪ್ಪಿಸಿದ ಬಳಿಕ ಜಾಮೀನನ್ನು ಮಂಜೂರು ಮಾಡಿತ್ತು. ಬಾಂಬೆ ಹೈ ಕೋರ್ಟ್ ಆದೇಶದ ಮೇರೆಗೆ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಆರ್ಯನ್ ಖಾನ್ ಪಾಸ್ ಪೋರ್ಟ್ ಅನ್ನು ನೀಡಿದ್ದರು. ಆ ಪಾಸ್‌ಪೋರ್ಟ್ ಅನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಆರ್ಯನ್ ಮನವಿಯಲ್ಲಿ ಏನಿದೆ?ಕ್ರೂಸ್ ಡ್ರಗ್ ಕೇಸ್‌ನಲ್ಲಿ ಆರ್ಯನ್ ಖಾನ್ ಅನ್ನು ಬಂಧಿಸಿದ ವೇಳೆ ನೀಡಿದ್ದ ಪಾಸ್‌ಪೋರ್ಟ್‌ ಅನ್ನು ಮರಳಿ ಪಡೆಯಲು ಮನವಿ ಸಲ್ಲಿಸಿದ್ದಾರೆ. ತನ್ನ ಮನವಿಯಲ್ಲಿ ಆರ್ಯನ್ ಖಾನ್ ನ್ಯಾಯಾಲಯಕ್ಕೆ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ಈ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿತ್ತು.

ಆರ್ಯನ್ ಮನವಿಯಲ್ಲೇನಿದೆ?

“ಅರ್ಜಿದಾರನನ್ನು ಪ್ರಸ್ತುತ ವಿಷಯದಿಂದ ಮುಕ್ತಗೊಳಿಸಲಾಗಿದೆ. ಅಲ್ಲದೆ ಪ್ರಸ್ತುತ ಪ್ರಕರಣದಲ್ಲಿ ಅವನು ಇನ್ನು ಮುಂದೆ ಆರೋಪಿಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಕಾರಣಕ್ಕೆ ಜಾಮೀನು ಬಾಂಡ್ ಅನ್ನು ರದ್ದುಗೊಳಿಸಿ ಪಾಸ್‌ಪೋರ್ಟ್ ಅನ್ನು ಅವರಿಗೆ ಹಿಂತಿರುಗಿಸುವುದು ಮತ್ತು ವೈಯಕ್ತಿಕ ಬಾಂಡ್ ಅನ್ನು ಬಿಡುಗಡೆ ಮಾಡುವುದು ನ್ಯಾಯಯುತವಾಗಿದೆ.” ಎಂದು ಅರ್ಜಿ ಸಲ್ಲಿಸಲಾಗಿದೆ.

ಕಳೆದ ವರ್ಷ ಎನ್‌ಸಿಬಿಯಿಂದ ಬಂಧನ

ಆರ್ಯನ್ ಖಾನ್ ಅನ್ನು ಅಕ್ಟೋಬರ್ 02, 2021ರಂದು ಮುಂಬೈನಿಂದ ಗೋವಾಗೆ ತೆರಳುತ್ತಿದ್ದ ಐಶಾರಾಮಿ ಕ್ರ್ಯೂಸ್‌ನಲ್ಲಿ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಎನ್‌ಡಿಪಿಎಸ್ ಆಕ್ಟ್‌ನ ಸೆಕ್ಷನ್ 8(ಸಿ), 20(ಡಿ), 27, 28,29 ಮತ್ತು 35ರ ಡಿಯಲ್ಲಿ ಆರ್ಯನ್ ಖಾನ್ ಅನ್ನು ಬಂಧಿಸಲಾಗಿತ್ತು. ಈ ಕ್ರ್ಯೂಸ್ ಕಾರ್ಯಾಚರಣೆಯಲ್ಲಿ ಎನ್‌ಸಿಬಿ ಅಧಿಕಾರಿಗಳು 13 ಗ್ರಾಂ ಕೊಕೇನ್, 5ಗ್ರಾಂ ಎಂ, 21 ಗ್ರಾಂ ಚರಸ್ ಹಾಗೂ 22 ಎಂಡಿಎಂಎ ಗುಳಿಗೆಗಳನ್ನು ವಶಕ್ಕೆ ಪಡೆದಿದ್ದರು.

ಜಾಮೀನು ನಿರಾಕರಿಸಿದ್ದ ಕೋರ್ಟ್

ಮೆಟ್ರೊಪೊಲಿಟನ್‌ನ ಮುಖ್ಯ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ಮೊದಲು ತಿರಸ್ಕರಿಸಿದ್ದರು. ಬಳಿಕ ಆರ್ಯನ್ ಖಾನ್ ಅಕ್ಟೋಬರ್ 20ರಂದು ಸ್ಪೆಷಲ್ ಕೋರ್ಟ್‌ಗೆ ಹೋಗಿದ್ದರು. ಅಲ್ಲೂ ಜಾಮೀನು ನಿರಾಕರಣೆ ಮಾಡಿದ್ದರು. ಬಳಿಕ ಅಕ್ಟೋಬರ್ 28, 2021ರಂದು ಹೈ ಕೋರ್ಟ್ ಜಾಮೀನು ನೀಡಿತ್ತು. 2022 ಮೇ 27ಕ್ಕೆ ಎನ್‌ಸಿಬಿ ಕ್ಲೀನ್ ಚಿಟ್ ನೀಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದಯಪುರದಲ್ಲಿ ಹಿಂದೂ ಟೈಲರ್ ಕನ್ನಯ್ಯಲಾಲ್ ಹತ್ಯೆ ಪ್ರಕರಣ : ಹತ್ಯೆ ಖಂಡಿಸಿ ಯರಗಟ್ಟಿ ಪಟ್ಟಣದ ಮುಸ್ಲಿಂ ಭಾಂದವರಿಂದ ರಾಜ್ಯಪಾಲರಿಗೆ ಮನವಿ

Sat Jul 2 , 2022
ಬೆಳಗಾವಿ : ಹೊರ ರಾಜ್ಯವಾದ ರಾಜ್ಯಸ್ತಾನದ ಉದಯಪುರದಲ್ಲಿ ಹಿಂದೂ  ಟೈಲರ್‌  ವೃತ್ತಿಯಲ್ಲಿರುವ ಕನ್ನಯ್ಯಲಾಲ್‌ ಎಂಬ ವ್ಯಕ್ತಿಯ  ಹತ್ಯೆ ಆಗಿರುವ ಹಿನ್ನಲೆ. ರಾಜ್ಯಸ್ತಾನ  ಸರಕಾರವು ಕೊಲೆ ಮಾಡಿದವರಿಗೆ ಕಠಿನ ಶಿಕ್ಷೆ ಆಗಬೇಕು ಮತ್ತು ಹತ್ಯೆಯಾದ ಟೈಲರನ ಕುಟುಂಕ್ಕೆ ಒಂದು ಕೋಟಿ ರೂಪಾಯಿ ಸಹಾಯ ಧನ  ನಿಡಬೇಕು ಮತ್ತು ಕುಟುಂದ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಯರಗಟ್ಟಿ ಪಟ್ಟಣದ ಮುಸ್ಲಿಂ ಸಮಾಜ ಭಾಂದವರು ಯರಗಟ್ಟಿ   ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ   ಮನವಿ ಪತ್ರ ಸಲ್ಲಿಸಿದರು. […]

Advertisement

Wordpress Social Share Plugin powered by Ultimatelysocial