ಅತಿಯಾಗಿ ಕರಿದ ತಿಂಡಿ ತಿಂದ ಮೇಲೆ ಹೀಗೆ ಮಾಡಿದ್ರೆ ಅಪಾಯ ತಪ್ಪಿಸಬಹುದು

ಕರಿದ ತಿಂಡಿಗಳೆಂದ್ರೆ ಎಲ್ಲರಿಗೂ ಇಷ್ಟ. ಜೊತೆಗೆ ಬಿಸಿ ಬಿಸಿ ಚಹಾ, ಕಾಫಿ ಇದ್ರೆ ಅತಿಯಾಗಿ ತಿಂದುಬಿಡ್ತೀವಿ. ಇದರಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬರಿಸುವುದು ಇಂತಹ ಅನೇಕ ಸಮಸ್ಯೆಗಳಾಗುತ್ತವೆ. ಈ ರೀತಿ ಆಗದಂತೆ ತಡೆಯಲು ಕರಿದ ಪದಾರ್ಥ ತಿಂದ ಮೇಲೆ ಬಿಸಿ ಬಿಸಿ ನೀರನ್ನು ಕುಡಿಯಿರಿ.

 

ಇದರಿಂದ ಜೀರ್ಣಕ್ರಿಯೆ ಸಕ್ರಿಯವಾಗುತ್ತದೆ. ಅಜೀರ್ಣವಾಗುವುದಿಲ್ಲ.

ಜಂಕ್‌ ಫುಡ್‌ ಗಳನ್ನು ಅತಿಯಾಗಿ ತಿಂದರೆ ಮಲಬದ್ಧತೆ ಉಂಟಾಗಬಹುದು. ಹಾಗಾಗದಂತೆ ತಡೆಯಲು ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಇವು ದೇಹಕ್ಕೆ ಬೇಕಾದ ಜೀವಸತ್ವ, ಫೈಬರ್ ಮತ್ತು ಖನಿಜಗಳನ್ನು ಪೂರೈಸುತ್ತವೆ. ಸಲಾಡ್ ನೊಂದಿಗೆ ಊಟ ಆರಂಭಿಸಿದರೆ ಜಂಕ್‌ ಫುಡ್‌ ಸೇವನೆಯನ್ನು ಅವಾಯ್ಡ್‌ ಮಾಡಬಹುದು.

ಎಣ್ಣೆಯುಕ್ತ ತಿಂಡಿಯನ್ನು ಸವಿದ ಬಳಿಕ ಡಿಟಾಕ್ಸ್ ಪಾನೀಯವನ್ನು ಕುಡಿಯಿರಿ. ನಿಂಬೆ ರಸವನ್ನು ನೀರಿಗೆ ಬೆರೆಸಿ ಕುಡಿದರೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಪ್ರೋಬಯಾಟಿಕ್‌ಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ, ಒಂದು ಕಪ್ ಮೊಸರು ತಿಂದರೆ ಸಾಕಷ್ಟು ಪರಿಹಾರ ಸಿಗುತ್ತದೆ.

ಹೆಚ್ಚು ಕರಿದ ಆಹಾರವನ್ನು ಸೇವಿಸಿದ ನಂತರ ತಣ್ಣನೆಯ ವಸ್ತುಗಳನ್ನು ಸೇವಿಸಬಾರದು. ಯಾಕಂದ್ರೆ ಇದು ಯಕೃತ್ತು ಮತ್ತು ಕರುಳನ್ನು ಹಾನಿಗೊಳಿಸುತ್ತದೆ. ಎಣ್ಣೆಯುಕ್ತ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ ವಾಕಿಂಗ್‌ ಮಾಡಿ. ಇದು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ತೂಕ ಹೆಚ್ಚಾಗದಂತೆ ಕೂಡ ನೀವು ಎಚ್ಚರಿಕೆ ವಹಿಸಬಹುದು.

ಕರಿದ ತಿಂಡಿ ತಿಂದ ಮೇಲೆ ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಆದ್ರೆ ಊಟ ಮತ್ತು ನಿದ್ರೆಯ ನಡುವೆ ಯಾವಾಗಲೂ 2-3 ಗಂಟೆಗಳ ಅಂತರವಿರಬೇಕು. ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ತಕ್ಷಣ ಮಲಗಬೇಡಿ. ಊಟ ಮಾಡಿದ ತಕ್ಷಣ ಮಲಗುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಕೊಬ್ಬಿನ ಶೇಖರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳಾ ವಿಶ್ವಕಪ್: ರಾಜ್, ಭಾಟಿಯಾ ಅವರ ಅರ್ಧಶತಕಗಳು ಕಳಪೆ ಆರಂಭದ ನಂತರ ಭಾರತವನ್ನು ಬಲವಾದ ಸ್ಥಾನಕ್ಕೆ ಕೊಂಡೊಯ್ಯುತ್ತವೆ!

Sat Mar 19 , 2022
ಮಿಥಾಲಿ ರಾಜ್ ಮತ್ತು ಯಾಸ್ತಿಕಾ ಭಾಟಿಯಾ ಶನಿವಾರ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಬಾರಿಸಿದರು ಮತ್ತು ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಆಸೀಸ್‌ಗೆ ಕಠಿಣ ಸವಾಲನ್ನು ನೀಡಿದರು. ರಾಜ್ ಮತ್ತು ಭಾಟಿಯಾ ಅವರ ಅರ್ಧಶತಕಗಳು ಭಾರತವನ್ನು ತೊಂದರೆಯಿಂದ ಹೊರಗೆ ತಂದವು, ಆರು ಓವರ್‌ಗಳ ನಂತರ ಆರಂಭಿಕ ಸ್ಕೋರ್ 28/2 ಆಗಿತ್ತು. 59 ರನ್ ಗಳಿಸಿದ ನಂತರ ಭಾಟಿಯಾ ಔಟಾದರು, ಆಟದ ಓಟದ ವಿರುದ್ಧ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. 2022ರ ICC ಮಹಿಳಾ […]

Advertisement

Wordpress Social Share Plugin powered by Ultimatelysocial