ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್​ ಹಶಿಮಿ ಅಲ್​ ಖುರೇಶಿ ಹತ್ಯೆ! ಮಿಲಿಟರಿ ದಾಳಿಯಲ್ಲಿ ̤

ವಾಷಿಂಗ್ಟನ್​​: ಅಮೆರಿಕ ಸೇನೆ ನಡೆಸಿದ ಸಿರಿಯಾ ದಾಳಿಯಲ್ಲಿ ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್​ ಹಶಿಮಿ ಅಲ್​ ಖುರೇಶಿ ಹತ್ಯೆಯಾಗಿರುವುದಾಗಿ ವೈಟ್​ ಹೌಸ್​ ತಿಳಿಸಿದೆ. ಐಸಿಸ್​ ನಾಯಕ ಅಬು ಬಕರ್​ ಅಲ್​ ಬಾಗ್ದಾದಿ ಹತ್ಯೆಯಾದ 2019ರ ದಾಳಿಯ ನಂತರದಲ್ಲಿ ನಡೆದಿರುವ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಆಡಳಿತಾಧಿಕಾರಿಗಳ ಪ್ರಕಾರ ಹತ್ಯೆಯಾದ ಅಲ್​ ಖುರೇಶಿ ವಾಸವಿದ್ದ ಕಟ್ಟಡದತ್ತ ಅಮೆರಿಕ ಯೋಧರು ತೆರಳುತ್ತಿದ್ದಂತೆ ಖುರೇಶಿ ತನ್ನನ್ನೇ ತಾನು ಸ್ಫೋಟಿಸಿಗೊಂಡ ಎಂದು ಮಾಹಿತಿ ನೀಡಿದ್ದಾರೆ. ಸ್ಫೋಟದ ಪರಿಣಾಮ ನಾಗರಿಕರ ಸಾವು-ನೋವುಗಳು ಸಂಭವಿಸಿದ್ದು, ಅಮೆರಿಕ ಯೋಧರಿಗೆ ಏನು ಆಗಿಲ್ಲ ಎಂದು ಅಮೆರಿಕದ ಸೇನಾ ಕ್ರೇಂದ್ರ ಪೆಂಟಗಾನ್ ಮಾಹಿತಿ ನೀಡಿದೆ.ಕಳೆದ ರಾತ್ರಿ ನನ್ನ ನಿರ್ದೇಶನದ ಮೇರೆಗೆ, ವಾಯುವ್ಯ ಸಿರಿಯಾದಲ್ಲಿ ಯುಎಸ್ ಮಿಲಿಟರಿ ಪಡೆಗಳು ಅಮೆರಿಕನ್ನರು ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಹಾಗೂ ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡವು ಎಂದು ಜೋ ಬೈಡೆನ್​ ಹೇಳಿಕೆಯನ್ನು ವೈಟ್​ ಹೌಸ್​ ಬಿಡುಗಡೆ ಮಾಡಿದೆ.ನಮ್ಮ ಸಶಸ್ತ್ರ ಪಡೆಗಳ ಕೌಶಲ್ಯ ಮತ್ತು ಶೌರ್ಯಕ್ಕೆ ಧನ್ಯವಾದಗಳು. ನಾವು ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಷಿಯನ್ನು ಹೊಡೆದು ಹಾಕಿದ್ದೇವೆ. ಎಲ್ಲ ಅಮೆರಿಕನ್ನರು ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಮರಳಿದ್ದಾರೆಂದು ವೈಟ್​ ಹೌಸ್​ ಹೇಳಿಕೆಯಲ್ಲಿ ತಿಳಿಸಲಾಗಿದೆ.ಖುರೇಷಿ 2019ರಲ್ಲಿ ಐಸಿಸ್ ಸಂಸ್ಥಾಪಕ ಅಬು ಬಕರ್ ಅಲ್-ಬಾಗ್ದಾದಿಯ ಮರಣದ ನಂತರ ಉತ್ತರಾಧಿಕಾರಿಯಾದರು. ಅಬು ಬಕರ್ ಅವರ ಮರಣದ ನಂತರ ಅವರಿಗೆ ಖಲೀಫ್ ಎಂದು ಹೆಸರಿಸಲಾಯಿತು. ಯುಎಸ್​ನ ರಿವಾರ್ಡ್ಸ್ ಫಾರ್ ಜಸ್ಟಿಸ್ ಕಾರ್ಯಕ್ರಮವು ಅವನ ಬಗ್ಗೆ ಮಾಹಿತಿ ನೀಡಿದರೆ 10 ಮಿಲಿಯನ್ ಡಾಲರ್​ ಬಹುಮಾನವನ್ನು ಘೋಷಣೆ ಮಾಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

Fri Feb 4 , 2022
ರಾಮನಗರ: ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ರೇಷ್ಮೆ ಇಲಾಖೆ ಆವರಣದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ಇದರಿಂದ ರಾಮನಗರ-ಚನ್ನಪಟ್ಟಣ ಅವಳಿ ನಗರದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗಲಿದೆ.ಜ.27ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದೀಗ ಆದೇಶ ಹೊರಡಿಸಲಾಗಿದೆ.75 ಕೋಟಿ ರೂ. ವೆಚ್ಚ: ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ […]

Advertisement

Wordpress Social Share Plugin powered by Ultimatelysocial