ಬೀಜಿಂಗ್: ಪ್ರಾಥಮಿಕ ಶಾಲೆಯ ಭದ್ರತಾ ಸಿಬ್ಬಂದಿಯೊಬ್ಬ ಚೂರಿಯಿಂದ ದಾಳಿ ನಡೆಸಿದ ಪರಿಣಾಮ 40 ಮಂದಿ ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.ಚೀನಾದ ದಕ್ಷಿಣ ಗುವಾಂಕ್ಸಿ ಪ್ರಾಂತ್ಯದ ಶಾಲೆಯೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಚೀನಾ ಸರ್ಕಾರ ಪ್ರಾಯೋಜಕತ್ವದ ದೈನಿಕದ ವರದಿ ವಿವರಿಸಿದೆ. ಮೂವರು ಪುಟ್ಟ ಮಕ್ಕಳ ಸ್ಥಿತಿ ಗಂಭೀರವಾಗಿರುವುದಾಗಿ ಸಿಜಿಟಿಎನ್ ಟಿವಿ ವರದಿ ಮಾಡಿದೆ. ಚೂರಿಯಿಂದ ದಾಳಿ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಗಾಯಗೊಂಡಿರುವ ಮಕ್ಕಳನ್ನು ಆಸ್ಪತ್ರೆಗೆ […]

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿರುವ ಸರಣಿ ಲಾಕ್‌ಡೌನ್ ವಿಫಲವಾಗಿದೆ ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ರಾಜೀವ್ ಬಜಾಜ್, ಲಾಕ್‌ಡೌನ್ ಹೇರಿಕೆ ಕೊರೊನಾ ವೈರಸ್‌ನ್ನು ನಿಯಂತ್ರಿಸುವ ಬದಲು ದೇಶದ ಅರ್ಥ ವ್ಯವಸ್ಥೆಯನ್ನು ಬಲಹೀನಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್‌ನಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಭಾರತದ ಉತ್ಪಾದನಾ ವಲಯದ ಬಲ […]

ಬೆಂಗಳೂರು: ತಮ್ಮ ವೈಯಕ್ತಿಕ ಖಾತೆಗೆ ಆಧಾರ್‌ ಲಿಂಕ್ ಮಾಡದ ಪರಿಣಾಮ ರೈತರಿಗೆ ಸಿಗಬೇಕಾಗಿರುವ ಪರಿಹಾರದ ಹಣ ಏರ್‌ಟೇಲ್‌ ಖಾತೆಗೆ ಜಮೆ ಆಗುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೃಷಿ ಸಚಿವ ಬಿ.ಸಿ ಪಾಟೀಲ್ ಕೂಡಲೇ ರೈತರು ತಪ್ಪದೇ ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ‌ ಮಾಡಿ ಎಂದು ಮನವಿ ಮಾಡಿಕೊಂಡರು.ಸರ್ಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ […]

ಮೈಸೂರು: ರಾಜ್ಯದಲ್ಲಿ ಸೂಪರ್ ಸಿಎಂ ವಿಜಯೇಂದ್ರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ದನಾ? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯ ಪ್ರಯುಕ್ತ ನಗರದ ಕೆ.ಆರ್.ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ನಾನು ಮಂತ್ರಿಯಾಗಿ 3 ತಿಂಗಳಾಗಿದ್ದು, ಇದುವರೆಗೂ ವಿಜಯೇಂದ್ರ ಒಂದು ಬಾರಿಯೂ ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು. ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ […]

ರಾಯಚೂರು: ರಾಯಚೂರು ಜಿಲ್ಲೆಯ ಯರಗೇರಾ ಗ್ರಾಮದ  ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ  ಮಳೆ ನೀರು ಕೊಯ್ಲು ಯೋಜನೆ ಕಾಮಗಾರಿಯನ್ನ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ವೀಕ್ಷಣೆ ಮಾಡಿದರು. ಕೊರೊನಾ ರೋಗದಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕೆಲಸ ಇಲ್ಲ. ಹೀಗಾಗಿ  ನರೇಗಾ ಮೂಲಕ ಹಳ್ಳಿ ಜನರಿಗೆ ಉದ್ಯೋಗ ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ನರೇಗಾ ಕಾಮಗಾರಿ ಉತ್ತಮ ಯಶಸ್ಸನ್ನು ಕಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು […]

ದೇವದುರ್ಗ: ರಾಯಚೂರು‌ ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನ್ ಇದ್ದ ಬಾಲಕ‌ ಸಾವನಪ್ಪಿದ್ದಾನೆ. ಮಹಾರಾಷ್ಟ್ರದಿಂದ ಬಂದಿದ್ದ ಬಾಲಕ ಹಾಗೂ ಅವನ ಸೋದರ ಅತ್ತೆಯನ್ನು ಪಟ್ಟಣದ ಡಿಗ್ರಿ ಕಾಲೇಜು ಪಕ್ಕದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 16 ರಂದು ಮಹಾರಾಷ್ಟ್ರದಿಂದ ಬಂದಿದ್ದ ಬಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ  ನೆಗೆಟಿವ್ ಬಂದಿತ್ತು.  ಬಾಲಕ ಮತ್ತು ಅವರ ಅತ್ತೆಯನ್ನು ಇಂದಿಗೆ ಕ್ವಾರಂಟೈನ್ ನಲ್ಲಿ ಇರಿಸಿ 20 ದಿನಗಳಾದ್ರೂ ಇವರನ್ನು ಮನೆಗೆ ಕಳುಹಿಸಿರಲಿಲ್ಲ. ಜೂನ್ […]

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.  ಮೈಸೂರು ತಾಲೂಕಿನ ಹುಯಿಲಾಳು ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರ ಉಳಿವಿಕೆ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.  ತಾಲೂಕು ಪಂಚಾಯಿತಿ ವತಿಯಿಂದ ನೂರಾರು ಮಕ್ಕಳಿಗೆ ಉಪಯುಕ್ತ ಕರವಾದ  ವಿವಿಧ ಮಾದರಿಯ ಗಿಡ ಹಾಗೂ ಸ್ಯಾನಿಟೈಸರ್ , ಮಾಸ್ಕ್ ಗಳನ್ನು ವಿತರಿಸಲಾಯಿತು ಎಂದು ಗ್ರಾಮ ಪಂಚಾಯತಿ […]

ಬೀದರ್:  ಬೀದರ್​​​ ಜಿಲ್ಲಾಧಿಕಾರಿ ಡಾ‌. ಹೆಚ್.ಆರ್.ಮಹಾದೇವ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಹೊರಡಿಸಿದ ಆದೇಶದಲ್ಲಿ ಜಿಲ್ಲಾಧಿಕಾರಿ ಡಾ‌. ಹೆಚ್.ಆರ್.ಮಹದೇವ್ ಅವರನ್ನು ವರ್ಗಾವಣೆಗೊಳಿಸಲಾಗಿದೆ. ​​​​ಬೀದರ್​​ಗೆ ರಾಮಚಂದ್ರನ್ ಆರ್. ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇವರು ಈ ಹಿಂದೆ ರಾಷ್ಟ್ರೀಯ ಆರೋಗ್ಯ ನಿರ್ದೇಶನಾಲಯ ಬೆಂಗಳೂರಿನ ಯೋಜನಾ ನಿರ್ದೇಶಕರಾಗಿದ್ದರು.  

ಬೀದರ್: ಪ್ರವಾಸಿ ವೀಸಾ ಮುಗಿದರೂ ಧರ್ಮ ಪ್ರಚಾರದಲ್ಲಿ ತೊಡಗಿದ್ದ 10 ಕಿರ್ಗಿಸ್ತಾನ ಪ್ರಜೆಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಜೂನ್ 16 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೀದರ್ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇವರೆಲ್ಲ ವೀಸಾ ಅವಧಿ ಮುಗಿದರೂ ಬೀದರ್ ನಲ್ಲಿ ಉಳಿದುಕೊಂಡು ಧರ್ಮ ಪ್ರಚಾರ ನಡೆಸಿದ್ದರು. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ತಿಂಗಳ ಕ್ವಾರಂಟೈನ್ ಬಳಿಕ […]

ನವದೆಹಲಿ: ಗೃಹ ಸಚಿವಾಲಯ ಇಂದು ವಿದೇಶಿ ವ್ಯಾಪಾರಿಗಳು, ಎಂಜಿನಿಯರ್ಗಳು ಮತ್ತು ಆರೋಗ್ಯ ವೃತ್ತಿಪರರು ತಮ್ಮ ವೀಸಾಗಳನ್ನು ನವೀಕರಿಸಿ ವಿಶೇಷ ವಿಮಾನಗಳಲ್ಲಿ ದೇಶಕ್ಕೆ ಆಗಮಿಸಬಹುದೆಂಬ ಷರತ್ತುಬದ್ಧ ಅನುಮತಿ ನೀಡಿದೆ. ಗೃಹ ಸಚಿವಾಲಯದ ಈ ಆದೇಶವು ವಿದೇಶಿಯರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೊದಲ, ಎಚ್ಚರಿಕೆಯ ಹೆಜ್ಜೆಯಾಗಿದ್ದು, ವಿಶೇಷವಾಗಿ ಆರ್ಥಿಕತೆಯನ್ನು ಪುನರಾರಂಭಿಸಲು ಸರ್ಕಾರದ ಪ್ರಯತ್ನಗಳ ಪ್ರಮುಖ ಅಂಶವಾಗಿ ಕಂಡುಬರುತ್ತದೆ.ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್ನಲ್ಲಿ ವಿದೇಶಿಯರಿಗೆ ಪ್ರವೇಶ ನಿಷೇಧಿಸಿದ್ದ ಸರ್ಕಾರ, ಈಗ ನವೀಕೃತ […]

Advertisement

Wordpress Social Share Plugin powered by Ultimatelysocial