ಮಕ್ಕಳಿಗೆ ಬೈಸಿಕಲ್, ಮೊಟ್ಟೆ ನೀಡಲು ಹಣವಿಲ್ಲದವರಿಗೆ ಶಿಕ್ಷಣ ಸಚಿವರ ಜಾಲತಾಣ ನಿರ್ವಹಣೆಗೆ ಎಲ್ಲಿಂದ ಬಂತು ಹಣ?

ಬೆಂಗಳೂರು: ವೈಯಕ್ತಿಕ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್, ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ.

ಮಕ್ಕಳಿಗೆ ಬೈಸಿಕಲ್ ಒದಗಿಸಲು, ಮೊಟ್ಟೆ ನೀಡಲು ಹಣವಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿಗಳು. ಶಿಕ್ಷಣ ಸಚಿವರು ತಮ್ಮ ಖಾಸಗಿ ಸಾಮಾಜಿಕ ಜಾಲತಾಣ ನಿರ್ವಹಿಸಲು ಲಕ್ಷಾಂತರ ಹಣ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಾರೆ ಎಂದು ‘ಕೂ’ ಮಾಡಿದ್ದಾರೆ.

ಬಿಜೆಪಿ ಮಾನ ಮರ್ಯಾದೆ ಬಿಟ್ಟಿದೆ ಎಂದು ಹೇಳಿರುವ ಕಾಂಗ್ರೆಸ್ ಒಂದು ವರ್ಷದವರೆಗೆ ಸುಮಾರು ೧೧, ೩೨, ೦೦೦ ರೂ. ಖರ್ಚು ಮಾಡಿದೆ. ಅಂದರೆ ತಿಂಗಳಿಗೆ ೯೪,೪೦೦ ರೂ. ಹಣ ಖರ್ಚು ಮಾಡಿದ್ದಾರೆ ಎಂದು ಹೇಳಿದೆ.

ಪರಿಷ್ಕೃತ ಪಠ್ಯಪುಸ್ತಕಗಳನ್ನು ಸಮರ್ಥಿಸುತ್ತಿದ್ದ ಸರ್ಕಾರ ಮತ್ತೊಮ್ಮೆ ಲೋಪ ಸರಿಪಡಿಸಿದ ಮತ್ತೊಂದು ಹೆಚ್ಚುವರಿ ಪುಸ್ತಕ ಹಂಚುತ್ತೇವೆ ಎಂದಿರುವುದು ತುಘಲಕ್ ದರ್ಬಾರಿನಂತಿದೆ! ಇಂತದ್ದೊಂದು ನಾಚಿಕೆಗೇಡಿನ ಬೆಳವಣಿಗೆಗೆ ಸಿಎಂ ತಲೆತಗ್ಗಿಸಿ ಕ್ಷಮೆ ಕೇಳಬೇಕು, ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟು ಹೊರಡಬೇಕಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದಯಪುರ ಘಟನೆ ಖಂಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ ಅಸದುದ್ದೀನ್ ಉವೈಸಿ

Wed Jun 29 , 2022
  ಹೈದರಾಬಾದ್: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಟೈಲರ್ ಹತ್ಯೆಯನ್ನು ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಬ್ಬರು ಶಸ್ತ್ರಧಾರಿಗಳು ಉದಯಪುರದಲ್ಲಿ ಮಂಗಳವಾರ ಟೈಲರ್ ಒಬ್ಬರನ್ನು ಹತ್ಯೆ ಮಾಡಿ ಇಸ್ಲಾಂಗೆ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆಸುತ್ತಿರುವುದಾಗಿ ಘೋಷಿಸುವ ವೀಡಿಯೊವನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ್ದರು. ಈ ಘಟನೆಯ ನಂತರ ರಾಜಸ್ಥಾನ ನಗರದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದ್ದು, ಕಫ್ಯೂ ವಿಧಿಸಲಾಗಿದೆ. ಮಧ್ಯಪ್ರದೇಶ […]

Advertisement

Wordpress Social Share Plugin powered by Ultimatelysocial