ಹೊಸ ಎಲೆಕ್ಟ್ರಿಕ್ ಕಾರ್ ಮೊದಲ ಬಾರಿ ಪ್ರದರ್ಶನ !

ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ಈ ವರ್ಷದ ಕ್ಯಾನೆಸ್ ಚಲನಚಿತ್ರೋತ್ಸವದ ಅಧಿಕೃತ ಪ್ರಾಯೋಜಕತ್ವವನ್ನು ಹೊಂದಿದೆ, ಇದೇ ವೇಳೆ ತನ್ನ ಹೊಸ ಉತ್ಪನ್ನವಾದ ಬಿಎಂಡಬ್ಲ್ಯು ಐ7 ಎಲೆಕ್ಟ್ರಿಕ್ ಕಾರ್ ಅನ್ನು ಶೋಕೇಸ್ ಮಾಡಿದೆ.

ಸಿನಿ ಹಬ್ಬಕ್ಕೆ ಆಗಮಿಸುವ ಅಂತರಾಷ್ಟ್ರೀಯ ಅತಿಥಿಗಳು, ವಿಐಪಿಗಳು, ಸಿಇಒಗಳು ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳ ಶ್ರೇಣಿಯನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನೀಡುತ್ತಿದೆ.

ಜತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಬಿಎಂಡಬ್ಲ್ಯು 163 ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳನ್ನು ಸಹ ಪ್ರದರ್ಶಿಸಿದೆ. ವಿಶೇಷವೆಂದರೆ ಬಿಎಂಡಬ್ಲ್ಯು ಐ7 ತನ್ನ ಜಾಗತಿಕವಾಗಿ ಮೊದಲ ಬಾರಿಗೆ ರಸ್ತೆ ಮೇಲೆ ಕಾಣಿಸಿಕೊಂಡಿದೆ.

ಫ್ರಾನ್ಸ್‌ನಲ್ಲಿ ಪ್ರತಿಷ್ಠಿತ 75 ನೇ ಕ್ಯಾನೆಸ್ ಚಲನಚಿತ್ರೋತ್ಸವವು ಮೇ 17ರಿಂದ ಆರಂಭವಾಗಿದ್ದು ಮೇ 28 ರವರೆಗೆ ನಡೆಯಲಿದೆ.

ಈ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ವಿಐಪಿಗಳು, ಪ್ರತಿನಿಧಿಗಳು ಮತ್ತು ಕಾರ್ಯಕ್ರಮದ ಅಧಿಕಾರಿಗಳ ಓಡಾಟಕ್ಕೆ ಸಹ ಬಳಸಲಾಗುತ್ತಿದೆ. ಜರ್ಮನ್ ಕಾರು ತಯಾರಕ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಈ ರೀತಿ ಉತ್ತೇಜಿಸುವ ಗುರಿ ಹೊಂದಿದೆ.

ಇದು ಏಪ್ರಿಲ್ 20 ರಂದು ಅದರ ಜಾಗತಿಕ ಪ್ರಥಮ ಪ್ರದರ್ಶನದ ನಂತರ ಮೊದಲ ಬಾರಿಗೆ ರಸ್ತೆಯ ಮೇಲೆ ನೋಡಬಹುದಾಗಿದೆ.

ಒಂದೇ ಚಾರ್ಜ್‌ನಲ್ಲಿ 625 ಕಿಮೀ ಪ್ರಯಾಣಿಸಬಹುದು. ಥಿಯೇಟರ್ ಸ್ಕ್ರೀನ್, 31.3 ಇಂಚಿನ ಪಾನೋರಮಿಕ್ ಒಎಲ್‌ಇಡಿ ಟಚ್‌ ಸ್ಕ್ರೀನ್, 32:9 ಫಾರ್ಮ್ಯಾಟ್ ಮತ್ತು 8ಕೆ ರೆಸಲ್ಯೂಶನ್ ಹೊಂದಿರುವ ಒಳಾಂಗಣಗಳು ಪ್ರಮುಖ ಆಕರ್ಷಣೆಯಾಗಿದೆ. ಕಾರಿನ ಎರಡನೇ ಸಾಲಿನಲ್ಲಿ ವಿಶೇಷ ಸಿನಿಮಾ ಲಾಂಜ್ ಇರಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆರೆ ಬಫರ್‍ಜೋನ್‍ಗಳಲ್ಲಿ ಮನೆ ಕಟ್ಟಲು ಅವಕಾಶವಿಲ್ಲ: ಸಿಎಂ

Fri May 20 , 2022
  ಬೆಂಗಳೂರು, ಮೇ 20- ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮುರ್ತಿನಗರದ ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ ಹೊರಡಿಸಲಾಗಿದ್ದ ಅಸೂಚನೆಯನ್ನು ರದ್ದು ಮಾಡಲಾಗಿದೆ. ಯಾವುದೇ ಅಧಿಸೂಚಿತ ಕೆರೆ ಪ್ರದೇಶಗಳ ಮೇಲೆ ಬಡಾವಣೆಗಳನ್ನು ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ […]

Advertisement

Wordpress Social Share Plugin powered by Ultimatelysocial