ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ದಂಪತಿ

ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli ) ದಂಪತಿ ಇತ್ತೀಚೆಗೆ ಉತ್ತರಾಖಂಡದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಹಿತಾ ಪ್ರೇಮಾನಂದಜೀ ಅವರ ಆಶ್ರಮದಲ್ಲಿ ದಂಪತಿ ತಮ್ಮ ಮಗಳು ವಾಮಿಕಾ ಅವರೊಂದಿಗೆ ಆಶೀರ್ವಾದವನ್ನು ಪಡೆಯುತ್ತಿರುವ ವಿಡಿಯೊ ವೈರಲ್‌ ಆಗಿದೆ.ಈ ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ʻ’ದೇವರು ಈ ಕುಟುಂಬವನ್ನು ಆಶೀರ್ವದಿಸಲಿ’ ಎಂದು ಬರೆದಿದ್ದಾರೆ. ‘ವಾಮಿಕಾ ತುಂಬಾ ಮುದ್ದಾಗಿದ್ದಾಳೆ’ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೊಸ ವರ್ಷದಂದು ದುಬೈಗೆ ಹಾರಿದ್ದರು. ದುಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ವಿರಾಟ್, ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ವಿರಾಟ್, ಅನುಷ್ಕಾ ಮತ್ತು ಮಗಳು ವಾಮಿಕಾ ಮೂವರು ಸೂರ್ಯನ ಕಡೆ ಮುಖ ಮಾಡಿ ನಿಂತಿರುವ ಫೋಟೊ ಸಖತ್‌ ವೈರಲ್‌ ಆಗಿತ್ತು. ಅನುಷ್ಕಾ ಶೆಟ್ಟಿ ಮದುವೆ ಬಳಿಕ ತೆರೆಮೇಲೆ ಬಂದಿಲ್ಲ. ಕೊನೆಯದಾಗಿ ಅನುಷ್ಕಾ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾರುಖ್ ಖಾನ್ ಜತೆ ನಟಿಸಿದ್ದರು. ಇದೀಗ ಮಹಿಳಾ ಕ್ರಿಕೆಟರ್‌ ಲೆಜೆಂಟ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್‌ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ʻಚಕ್ದಾ ಎಕ್ಸ್‌ಪ್ರೆಸ್ʼ ಎಂದು ಟೈಟಲ್ ಇಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ.

Fri Jan 6 , 2023
ಕಾಂಗ್ರೆಸ್ ಪಾರ್ಟಿ ಮತ್ತು ಭ್ರಷ್ಟಾಚಾರ ಬ್ರೋಕರ ಯಾರು ಇದ್ದಾರೆ ದಿಲ್ಲಿಯೊಳಗ ಸೋನಿಯಾ ಗಾಂಧಿ ರಾಹುಲ ಗಾಂಧಿ ಮನೆ ಮುಂದೆ ಅಡ್ಡಾಟತ್ತಾ ಇರೋರನ್ನು ನೋಡಿದ್ರ ಗೋತ್ತಾಗುತ್ತೆ… ದುಡ್ಡು ತೋಗೋಡು ಟಿಕೆಟ್ ಹಚ್ಚಾತ್ರರಾ ಅಂತಾ ಹೇಳಿ ಪಾರ್ಟಿಯ ಅನೇಕ ಗೌರ್ನರ್ ಗಳು ಇದ್ದಾರೆ…. ದೇಶದಲ್ಲಿ ಭ್ರಷ್ಟಾಚಾರದ ರಕ್ತ ಬಿಜಾಸೂರರನ್ನು ಹುಟ್ಟಿಸಿದೆ ಕಾಂಗ್ರೆಸ್ ಪಾರ್ಟಿ… ಅವರು ಬಹಳ ಮಾತನಾಡಿದರೆ ನಾನು ರಾಷ್ಟ್ರೀಯ ನಾಯಕನಾಗಬಹುದು.. ಕಾಂಗ್ರೆಸ್ ಪಾರ್ಟಿ ಭೂತಕಾಲದ ಪಾರ್ಟಿ ಅವರಿಗೆ ಆಧಾರ ರಹಿತ ಆರೋಪ […]

Advertisement

Wordpress Social Share Plugin powered by Ultimatelysocial