ಬಾದೂಷ ಮಾಡುವ ವಿಧಾನ ಹೇಗೆ ?

 

ಬೇಕಾಗುವ ಸಾಮಾಗ್ರಿಗಳು

  • ಮೈದಾ ಹಿಟ್ಟು – 250 ಗ್ರಾಂ, ಸಕ್ಕರೆ
  • 200 ಗ್ರಾಂ, ತುಪ್ಪ
  • 1/4 ಕಪ್, ಏಲಕ್ಕಿ
  • ಸ್ವಲ್ಪ, ಮೊಸರು
  • 2 ಟೀ ಸ್ಪೂನ್,
  • ಅಡುಗೆ ಸೋಡಾ-ಚಿಟಿಕೆ
  • ಕರಿಯಲು ಎಣ್ಣೆ
  • ಲಿಂಬೆರಸ- ಸ್ವಲ್ಪ

ಮಾಡುವ ವಿಧಾನ  :  ಒಂದು ಪಾತ್ರೆಗೆ ಸಕ್ಕರೆ ಹಾಕಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಂದೆಳೆ ಪಾಕ ಬರುವಷ್ಟು ಕುದಿಸಿ. ನಂತರ ಈ ಸಕ್ಕರೆ ಪಾಕಕ್ಕೆ 5 ಹನಿಗಳಷ್ಟು ನಿಂಬೆರಸ ಸೇರಿಸಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಗೂ ಚಿಟಿಕೆ ಸೋಡಾ, ಮೊಸರು ಹಾಕಿ.> ನಂತರ ಮೈದಾ ಹಿಟ್ಟು ಹಾಕಿ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಸ್ವಲ್ಪ ಸ್ವಲ್ಪನೇ ನೀರು ಹಾಕಿ ಕಲಸಿಕೊಳ್ಳಿ. 5 ನಿಮಿಷ ಚೆನ್ನಾಗಿ ನಾದಿಕೊಳ್ಳಿ. ನಂತರ ಒಂದು ಚಿಕ್ಕ ಉಂಡೆ ತೆಗೆದುಕೊಂಡು ಬೆರಳಿನಿಂದ ಮಧ್ಯಕ್ಕೆ ಒತ್ತಿ ಬಿಸಿ ಎಣ್ಣೆಯಲ್ಲಿ ಕರಿಯಿರಿ. ಚೆನ್ನಾಗಿ ಕರಿದ ಬಾದೂಷವನ್ನು ಸಕ್ಕರೆ ಪಾಕಕ್ಕೆ ಹಾಕಿ 20 ನಿಮಿಷ ಹಾಗೆಯೇ ಬಿಡಿ. ನಂತರ ಸರ್ವಿಂಗ್ ಪ್ಲೇಟ್ ಗೆ ವರ್ಗಾಯಿಸಿದರೆ ಸವಿಯಲು ಬಾದೂಷಾ ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್: ವಿರಾಟ್‌ ಕೊಹ್ಲಿ ಏಕಾಂಗಿ ಹೋರಾಟ 

Wed Jan 12 , 2022
ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ. ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತಾಳ್ಮೆಯ ಆಟವಾಡಿ 79 ರನ್ ಗಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ದಿನಾಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial