ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವ!

ಹಾಸನ, ಏಪ್ರಿಲ್ 12; ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವಗಳಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವನ್ನು ಆಯುಕ್ತರಾದ ಅವರ ಗಮನಕ್ಕೆ ತರಲಾಗಿದೆ ಎಂದು ಬೇಲೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಲತಾ ಹೇಳಿದ್ದಾರೆ.

ಮಂಗಳವಾರ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಅದು ನಡೆದುಕೊಂಡು ಬಂದಿದೆ” ಎಂದರು.

“ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿದೆ. ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ. ಅವರ ನಿರ್ದೇಶನದಂತೆ ನಾವು ನಡೆಯಲಿದ್ದೇವೆ” ಎಂದು ಸ್ಪಷ್ಟಪಡಿಸಿದರು.

“ರಥದ ಪಕ್ಕ ನಿಂತು ಕುರಾನ್ ಪಠಣ ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದೊಂದು ಪ್ರತೀತಿಯಿದೆ. 32 ಪುಟಗಳಿರುವ ಕೈಪಿಡಿಯಲ್ಲಿ ಇದು ಉಲ್ಲೇಖವಾಗಿದೆ. ಇಂದು ಈ ಬಗ್ಗೆ ನಿರ್ದೇಶನ ಬರುವ ನಿರೀಕ್ಷೆಯಿದ್ದು, ನಂತರ ಅದರಂತೆ ನಡೆಯುತ್ತೇವೆ” ಎಂದು ವಿದ್ಯಾಲತಾ ಮಾಹಿತಿ ನೀಡಿದರು.

ಮುಸ್ಲಿಂ ವ್ಯಾಪಾರಿಗಳ ಅಂಗಡಿ ಬುಧವಾರದಿಂದ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಬಳಿ 100ಕ್ಕೂ ಹೆಚ್ಚು ಮಳಿಗೆ ಹಾಕಲಾಗಿದೆ. ಆದರೆ ಸುಮಾರು 15 ಜನ ಮುಸ್ಲಿಮರೂ ಕೂಡ ಅಂಗಡಿ ಹಾಕಿದ್ದಾರೆ. ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಚರ್ಚೆ ಕೇಳಿಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಯವರು ಜಿಲ್ಲಾಧಿಕಾರಿ, ತಹಶೀಲ್ದಾರ್, ದೇವಾಲಯದ ಸಿಇಓಗೆ ಮನವಿ ಸಲ್ಲಿಸಿದ್ದರು.

ಜಾತ್ರೆಯ ಸಂದರ್ಭದಲ್ಲಿ ಮಳಿಗೆ ಹಾಕುವ ವಿಚಾರವಾಗಿ ಸಿದ್ದೇಶ್ ಎಂಬವರು ಟೆಂಡರ್ ಪಡೆದಿದ್ದಾರೆ. ಟೆಂಡರ್ ಪುರಸಭೆ ವ್ಯಾಪ್ತಿಗೆ ಸೇರಿದ್ದು, ದೇವಾಲಯದ ಆಡಳಿತ ಮಂಡಳಿಗೂ ಇದಕ್ಕೂ ಸಂಬಂಧವಿಲ್ಲ. ಈ ಬಾರಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ನೂರು ಮಳಿಗೆ ಇಡಲಾಗಿದ್ದು, ಅದರಲ್ಲಿ 15 ಮುಸ್ಲಿಂ ಕುಟುಂಬಗಳೂ ಕೂಡ ಸೇರಿವೆ ಎಂದು ಟೆಂಡರ್ ಪಡೆದವರು ತಿಳಿಸಿದ್ದಾರೆ. ಪ್ರತಿ ವರ್ಷ ಸಾಕಷ್ಟು ಮುಸ್ಲಿಂ ವ್ಯಾಪಾರಿಗಳು ಆವರಣದಲ್ಲಿ ಅಂಗಡಿಗಳನ್ನು ಹಾಕುತ್ತಿದ್ದರು. ಈ ಭಾರೀ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲವೇ ಕೆಲವು ಮುಸ್ಲಿಂ ವ್ಯಾಪಾರಿಗಳು ಅಂಗಡಿ ಹಾಕಿದ್ದಾರೆ.

ಹಲವಾರು ಭಕ್ತರು ಆಗಮಿಸುವ ನಿರೀಕ್ಷೆ ದೇವಾಲಯದಲ್ಲಿ ಈಗಾಗಲೇ ಪಾಂಚರಾತ್ರಾ ನಿಮಿತ್ತ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿವೆ. ಬುಧವಾರ ಬೆಳಗ್ಗೆ ನಡೆಯಲಿರುವ ಗಳಿಗೆ ತೇರು (ಚಿಕ್ಕತೇರು) ರಥೋತ್ಸವ ನಡೆಯುತ್ತದೆ. ದೇವರಿಗೆ ಸಂಪೂರ್ಣ ಅಲಂಕಾರ, ಮಹಾಮಂಗಳಾರತಿ ನಡೆಯಲಿದ್ದು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಶ್ರೀ ಚನ್ನಕೇಶವಸ್ವಾಮಿ ತೇರು (ಚಿಕ್ಕತೇರು) ವೇಳೆ ಕುರಾನ್ ಪಠಣ ವಿಚಾರವಾಗಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಮಾಡಿದ್ದು ಹಿಂದಿನಿಂದ ನಡೆದುಕೊಂಡು ಬಂದ ರೂಢಿ ಸಂಪ್ರದಾಯದಂತೆ ನಡೆಸಲು ಆದೇಶ ಮಾಡಿದ್ದಾರೆ.

ಕುರಾನ್ ಪಠಣ ಮಾಡಬೇಕು ಬೇಡವೋ ಎಂಬ ಗೊಂದಲಕ್ಕೆ ಧಾರ್ಮಿಕ ದತ್ತಿ ಇಲಾಖೆ ತೆರೆ ಎಳೆದಿದೆ. ಹಿಂದಿನಿಂದಲೂ ಗಳಿಗೆ ತೇರಿಗು ಮುನ್ನ ಕುರಾನ್ ಪಠಣ ಮಾಡುವ ಖಾಜ ಸಾಹೇಬರು, ನಂತರ ರಥೋತ್ಸವ ನಡೆಯಲಿದ್ದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಪಾಲಿಸುವಂತೆ ಧಾರ್ಮಿಕ ದತ್ತ ಇಲಾಖೆ ಆದೇಶ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಮ್ರಾನ್‌ ಖಾನ್‌ ಅವರ 'ಪಾಕಿಸ್ತಾನ್‌ ತೆಹ್ರೀಕ್ ಎ ಇನ್ಸಾಫ್‌ '

Wed Apr 13 , 2022
  ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ‘ಪಾಕಿಸ್ತಾನ್‌ ತೆಹ್ರೀಕ್ ಎ ಇನ್ಸಾಫ್‌ ‘ (ಪಿಟಿಐ) ಪಕ್ಷದ 8 ಮಂದಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪಾಕ್‌ ಸೇನಾ ಮುಖ್ಯಸ್ಥ ಜ. ಖಮರ್‌ ಜಾವೇದ್‌ ಬಾಜ್ವಾ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ನಿಂದನೆ ಹಾಗೂ ಅಪಪ್ರಚಾರ ನಡೆಸಿದ ಆರೋಪ ಹೊರಿಸಲಾಗಿದೆ. ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿದ್ದ 8 ಮಂದಿ ಪಿಟಿಐ ಕಾರ್ಯಕರ್ತರನ್ನು ಪಾಕಿಸ್ತಾನದ ಫೆಡರಲ್‌ […]

Advertisement

Wordpress Social Share Plugin powered by Ultimatelysocial