ಬಾಳೆ ಹಣ್ಣುಗಳನ್ನು ತಿನ್ನುವುದರಿಂದ ಆಗುವ ಲಾಭಗಳೇನು ? |Bannanna | Speed News Kannada |

ಬಾಳೆ ಹಣ್ಣುಗಳ ಗುಣವೇ ಹಾಗೆ. ಪುಟ್ಟ ಬಾಳೆ, ಪಚ್ಚ ಬಾಳೆ, ಚುಕ್ಕಿ ಬಾಳೆ ಹೀಗೆ ನಾನಾ ವಿಧದ ಬಾಳೆ ಹಣ್ಣುಗಳು ಸಿಹಿಯಾದ ಸ್ವಾದದ ಜೊತೆಗೆ ಉತ್ತಮ ಆರೋಗ್ಯಕರ ಅಂಶಗಳನ್ನು ತಮ್ಮಲ್ಲಿ ಒಳಗೊಂಡಿವೆ. ಬೆಳಗಿನ ಉಪಹಾರದ ಸಮಯದಲ್ಲಿ, ಮಧ್ಯಾಹ್ನದ ಊಟದ ನಂತರ ಅಥವಾ ಸಂಜೆಯ ಸ್ನಾಕ್ಸ್ ಸವಿಯುವ ವೇಳೆ ಇಲ್ಲವೆಂದರೆ ರಾತ್ರಿ ಊಟದ ನಂತರ ಬಾಳೆ ಹಣ್ಣು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ, ನಾವು ತಿಂದ ಆಹಾರ ಚೆನ್ನಾಗಿ ಜೀರ್ಣಗೊಂಡು ಪಚನ ಕ್ರಿಯೆಗೆ ಸಹಾಯಕವಾಗುತ್ತದೆ.ಇತರೆ ಬಾಳೆಹಣ್ಣುಗಳಿಗೆ ಹೋಲಿಸಿದರೆ ಕಪ್ಪು ಕಲೆಗಳನ್ನು ಹೊಂದಿರುವ ಬಾಳೆಹಣ್ಣುಗಳು ವಿಟಿಮಿನ್‌ ʼಎʼ ಅಂಶ ಹೆಚ್ಚು ಹೊಂದಿರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಹೆಚ್ಚುತ್ತದೆ.ಇನ್ನೂ ಕೆಲ ಜನರು ಬಾಳೆ ಹಣ್ಣಿನ ರುಚಿ ಹೆಚ್ಚಿಸಲು ಅದನ್ನು ಬ್ರೆಡ್, ಕೇಕ್, ಮೊಸರು ಹೀಗೆ ಹಲವಾರು ವಿಧದ ಇತರ ಆಹಾರಗಳ ಜೊತೆ ಸೇರಿಸಿ ಇನ್ನಷ್ಟು ಬಗೆ ಬಗೆಯ ರುಚಿಕರ ಆಹಾರಗಳನ್ನು ತಯಾರಿಸಿ ಸವಿಯುತ್ತಾರೆ. ಬಾಳೆ ಹಣ್ಣನ್ನು ಇಷ್ಟೆಲ್ಲಾ ರೀತಿಯಲ್ಲಿ ಸವಿಯಬೇಕಾದರೆ ಅದರ ಉಪಯೋಗಗಳ ಬಗ್ಗೆ ನಿಮಗೆ ತಿಳಿಸಲೇಬೇಕು. ಬಾಳೆ ಹಣ್ಣನ್ನು ಇಷ್ಟ ಪಟ್ಟು ಸವಿದ ಯಾವುದೇ ವ್ಯಕ್ತಿಗೆ ದೇಹದ ತುಂಬಾ ಶಕ್ತಿ ಸಂಚಲನ ವಾಗಿ, ಹೊಟ್ಟೆಯುಬ್ಬರ ಕಡಿಮೆಯಾಗಿ, ಮೂತ್ರ ಪಿಂಡ ಗಳಲ್ಲಿ ಕಲ್ಲುಗಳು ಇಲ್ಲವಾಗಿ ಹೃದಯದ ಆರೋಗ್ಯ ಉತ್ತಮಗೊಂಡು ಅಜೀರ್ಣತೆ ದೂರವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾದಿನಿ ಮೇಲೆ ಭಾವನಿಂದಲೇ ಅತ್ಯಾಚಾರ!

Sat Feb 5 , 2022
ಶಿವಮೊಗ್ಗ: ಅಕ್ಕನ ಮನೆಗೆ ಬಂದಿದ್ದ ನಾದಿನಿ ಮೇಲೆ ಅತ್ಯಾಚಾರ ಎಸಗಿದ ಅಕ್ಕನ ಗಂಡನ ವಿರುದ್ಧ ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.ಎಸ್‌ಎಸ್‌ಎಲ್ಸಿ ಫೇಲಾಗಿದ್ದ ಬಾಲಕಿ ಅಕ್ಕನ ಮನೆಗೆ ಬಂದಿದ್ದಳು.ಆಕೆಯ ಮೇಲೆ ಭಾವ ಅತ್ಯಾಚಾರ ಎಸಗಿದ್ದು ಗರ್ಭಿಣಿಯಾಗಿದ್ದಾಳೆ. 7 ನೇ ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಬಾಲಕಿಯನ್ನು ಸಖಿ ಕೇಂದ್ರಕ್ಕೆ ಬಿಡಲಾಗಿದ್ದು, ಮಗುವನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಮಗು ಮೃತಪಟ್ಟಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. […]

Advertisement

Wordpress Social Share Plugin powered by Ultimatelysocial