ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ವಿರುದ್ಧ ಸುದ್ದಿಗೋಷ್ಟಿ

ಹುಸ್ಕೂರು ಗ್ರಾಮದ ಗುಂಡುತೋಪನ್ನ ಸ್ಮಶಾನವಾಗಿ ಪರಿವರ್ತಿಸಿ ಆದೇಶ ಮಾಡಿದ್ದಾರೆ ಎಂದು ಆರೋಪ

ಹುಸ್ಕೂರು ಗ್ರಾಮಸ್ಥರಿಂದ‌ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ

ಹುಸ್ಕೂರು ಗ್ರಾಮಸ್ಥ ನಾಗಭೂಷಣ್ ಹೇಳಿಕೆ –

ಯಲಹಂಕ ಕ್ಷೇತ್ರ, ದಾಸನಪುರ ಹೋಬಳಿ, ಹುಸ್ಕೂರು ಗ್ರಾಮದ ಗುಂಡುತೋಪನ್ನ ಸ್ಮಶಾನವಾಗಿ ಮಾರ್ಪಾಡು ಮಾಡಲು ಮಂಜುನಾಥ್ ಅವರು ಆದೇಶ ಮಾಡಿದ್ದಾರೆ

ಸ್ಥಳೀಯ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಒತ್ತಡದಿಂದ ಈ ಆದೇಶ ಮಾಡಿದ್ದಾರೆ ಎಂದು ಆರೋಪ

ಹುಸ್ಕೂರು ಗ್ರಾಮದ 108 ಸರ್ವೆ ನಂಬರ್ ನಲ್ಲಿರುವ 2 ಎಕರೆ 22 ಗುಂಟೆ ಗುಂಡುತೋಪು ಜಾಗ

ಈ ಜಾಗವನ್ನ‌ ಏಳು ವರ್ಷಗಳಿಂದ ಗ್ರಾಮದ ಜನರು ಸ್ವಂತ ದುಡ್ಡು ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದಾರೆ

ಈ ಜಾಗದಲ್ಲಿರುವ 20 ಹಳೆಯ ಮರಗಳನ್ನ ಬೆಳೆಸಿ, 130 ಕ್ಕೂ ಹೆಚ್ಚು ಹೊಸ ಗಿಡ ನೆಟ್ಟು ಬೆಳೆಸಲಾಗುತ್ತಿದೆ

ಆದ್ರೆ ಕೆಲ ದಿನಗಳಿಂದ ಗ್ರಾಮದ ಜನರು ಮೃತಪಟ್ಟವರನ್ನ ಗುಂಡುತೋಪಿನಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ

ಆದ್ರೆ ಸರ್ವೆ ನಂಬರ್ 2 ರಲ್ಲಿ ಇದೇ ಗ್ರಾಮದಲ್ಲಿ 1 ಎಕರೆ 27 ಗುಂಟೆ ಸ್ಮಶಾನಕ್ಕೆ‌ ಮೀಸಲಿಡಲಾಗಿದೆ

ಆದ್ರೆ ಆ ನಿಗಧಿತ ಸ್ಮಶಾನ ಜಾಗದಲ್ಲಿ 5 ಗುಂಟೆಯೂ ಬಳಕೆಯಾಗಿಲ್ಲ

ಈ ಸಂಬಂಧ ಪಿಡಿಓ, ಸ್ಥಳೀಯ ಶಾಸಕರಿಗೆ ಮನವಿ ಪತ್ರ ಬರೆದಿದ್ದೇವೆ

ಗುಂಡಿತೋಪನ್ನ ಸ್ಮಶಾನದ ಜಾಗವನ್ನಾಗಿ ಮಾಡಿ ಮಂಜುನಾಥ್ ಅವರು 08-03-22 ರಂದು ಆದೇಶ ಮಾಡಿದ್ದಾರೆ

ಗುಂಡುತೋಪನ್ನ ಶಾಲಾ‌ ಮಕ್ಕಳಿಗೆ ಆಟವಾಡಲು , ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಅಭಿವೃದ್ಧಿ ಮಾಡಿದ್ದೇವೆ

ಹಾಗಾಗಿ ಈ ಆದೇಶವನ್ನ ರದ್ದುಗೊಳಿಸಿ ಗುಂಡುತೋಪನ್ನ ಉಳಿಸಬೇಕು ಎಂದು ಗ್ರಾಮಸ್ಥರ ಒತ್ತಾಯ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ: ಒಂದು ಗ್ರಾಮ ಅಭಿವೃದ್ಧಿ ಆಗಬೇಕಾದರೇ ಜನಪ್ರತಿನಿಧಿಗಳು, ಅಧಿಕಾರಿಗಳೇ ಬೇಕಂತಿಲ್ಲ

Fri Jul 15 , 2022
ಹುಬ್ಬಳ್ಳಿ: ಒಂದು ಗ್ರಾಮ ಅಭಿವೃದ್ಧಿ ಆಗಬೇಕಾದರೇ ಜನಪ್ರತಿನಿಧಿಗಳು, ಅಧಿಕಾರಿಗಳೇ ಬೇಕಂತಿಲ್ಲ, ಜನರೇ ಮನಸ್ಸು ಮಾಡಿದರೇ ತಮ್ಮ ಗ್ರಾಮವನ್ನು ತಾವೇ ಸುಧಾರಿಸಿಕೊಳ್ಳಬಹುದು ಎಂಬುದನ್ನು ಈ ಗ್ರಾಮಸ್ಥರು ಸಾಬೀತುಪಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು, ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ಹೇಳತ್ತೇವೆ ಕೇಳಿ. ಹೌದು, ನಿರಂತರ ಸುರಿಯುತ್ತಿರುವ ಮಳೇ… ಎಲ್ಲಿ ನೋಡಿದ್ರೂ ಕೇಸರು, ಆ ಕೇಸರಿನಲ್ಲೇ ಶಾಲೆಗೇ ಹೋಗುತ್ತಿರುವ ಮಕ್ಕಳು ಇಂತಹ ಮನುಕಲಕುವ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮ. ಗ್ರಾಮದ […]

Advertisement

Wordpress Social Share Plugin powered by Ultimatelysocial