ಬೆಟ್ಟದಲ್ಲಿ ಸಿಲುಕಿದ್ದ ತಂದೆ ಮಗನನ್ನು ಪೊಲೀಸರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ

ಬೆಟ್ಟದಲ್ಲಿ ಸಿಲುಕಿದ್ದ ತಂದೆ ಮಗನನ್ನು ಪೊಲೀಸರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿಂದ ತುಮಕೂರು ಜಿಲ್ಲೆಯ ಮಧುಗಿರಿಗೆ ಏಕಶಿಲಾ ಬೆಟ್ಟ ನೋಡಲು ಬಂದಿದ್ದರು. ತಂದೆ ಮಗ ಬೆಟ್ಟ ಹತ್ತು ವೇಳೆ ಜೋರು ಮಳೆ ಶುರುವಾಗಿದೆ.

ಇದರಿಂದ ಆತಂಕಗೊಂಡ ಇಬ್ಬರು ಮೇಲೆ ಹತ್ತಲು‌ ಆಗದೆ ಕೆಳಗೆ ಇಳಿಯಲು‌ ಆಗದೆ ಸಂಕಟಕ್ಕೆ ಸಿಲುಕಿದ್ದರು.

ತ್ರಿಶಂಕು ಸ್ಥಿತಿಯಲ್ಲಿ ಇದ್ದ ತಂದೆ ಮಧುಗಿರಿ ಪೊಲೀಸರಿಗೆ ಕರೆ ಮಾಡಿ ರಕ್ಷಣೆ‌ಗೆ ಮನವಿ‌ ಮಾಡಿದ್ದಾರೆ
ತಕ್ಷಣ ಎಚ್ಚೆತ್ತ ಸಬ್ ಇನ್ಸ್ಪೆಕ್ಟರ್ ರಮೇಶ್ ಗೌಡ ಹಾಗೂ ಮಧುಗಿರಿ ಸ್ಥಳೀಯ ಯುವಕರಿಬ್ಬರು ಹಾಗೂ ಠಾಣೆಯ ಇಬ್ಬರ ಸಿಬ್ಬಂದಿ ಜೊತೆ ಬೆಟ್ಟ ಹತ್ತಿದ್ದಾರೆ‌

ಬಳಿಕ ಉದ್ಯಮಿ ಹಾಗೂ ಆತನ ಮಗನನ್ನು ರಕ್ಷಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬದುಕಿ ಬಂದ ನನಗೆ ಬೆಟ್ಟದ ಮೇಲೆ ಸಿಲುಕಿ ಭಯವಾಗಿತ್ತು. ನನ್ನ ಮಗನನ್ನು ಕರೆದುಕೊಂಡು ಬರುವ ಸಮಯದಲ್ಲಿ ನನ್ನ ಕಾಲು ಜಾರುತ್ತಿದ್ದು ಅದರಿಂದ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿದ್ದೆ ಅವರ ಸಿಬ್ಬಂದಿಯನ್ನು ಕಳಿಸಿಕೊಟ್ಟು ನನ್ನ ಹಾಗೂ ನನ್ನ ಮಗನನ್ನು ರಕ್ಷಣೆ ಮಾಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿ ವಿಚಾರಕ್ಕೆ ಯುವಕನ ಹತ್ಯೆ ಪ್ರಕರಣ

Mon Jul 18 , 2022
ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ನಾಗೇಂದ್ರ ಹಾಗೂ ರಂಗಸ್ವಾಮಿ ಬಂಧಿತ ಆರೋಪಿಗಳು ಸಂಬಂಧಿಕರ ಮನೆಯ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಹತ್ಯೆಯಾಗಿದ್ದ ಯುವಕ ಜುಲೈ 15ರ ರಾತ್ರಿ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಡೆದಿದ್ದ ಹತ್ಯೆ ಪ್ರಜ್ವಲ್ (18) ನನ್ನ ದೊಣ್ಣೆಯಿಂದ ಹೊಡೆದು ಕೊಲೆಗೈಯ್ಯಲಾಗಿತ್ತು ನಾಗೇಂದ್ರನ ಅಣ್ಣನ ಮಗಳನ್ನ ಪ್ರೀತಿಸುತ್ತಿದ್ದ ಪ್ರಜ್ವಲ್ ಸೋಶಿಯಲ್ ಮೀಡಿಯಾಗಳಲ್ಲಿ ‘ಲವ್ ಯೂ’ ಅಂತಾ ಮೆಸೇಜ್ ಕಳಿಸುತ್ತಿದ್ದ ವಾರ್ನಿಂಗ್ ಕೊಡಲು ಮತ್ತೊಬ್ಬ ಯುವಕನ […]

Advertisement

Wordpress Social Share Plugin powered by Ultimatelysocial