ಬೆಂಗಳೂರು ಕರಗ ಶಕ್ತ್ಯೋತ್ಸವ ಮತ್ತು ಮಹಾರಥೋತ್ಸವ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಭಕ್ತರು!

ಬೆಂಗಳೂರು, ಏ.16- ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಮತ್ತು ಮಹಾರಥೋತ್ಸವ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಕರಗ ಸಾಗುವ ಕೆಲವು ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳನ್ನು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಇಂದು ಸಂಜೆ 4 ಗಂಟೆಯಿಂದ ಆರಂಭವಾಗುವ ಕರಗ ಮಹೋತ್ಸವ ನಾಳೆ ಬೆಳಗ್ಗೆ 8 ಗಂಟೆ ವರೆಗೆ ನಡೆಯಲಿದೆ. ಕರಗ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಕೆಲವು ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

ಎಸ್‍ಜೆಸಿ ರಸ್ತೆಯಲ್ಲಿ ಸಿಟಿ ಮಾರ್ಕೆಟ್ ಕಡೆಯಿಂದ ಬಂದು ಎಸ್‍ಜೆಪಿ ಲೇನ್ ಮೂಲಕ ಓಟಿಸಿ ರಸ್ತೆ ಮಾರ್ಗವಾಗಿ ಎನ್‍ಆರ್ ರಸ್ತೆ ಹಾಗೂ ಸುಣ್ಣಕಲ್‍ಪೇಟೆಗೆ ಹೋಗಲು ಎಡ ತಿರುವು ಪಡೆಯುತ್ತಿದ್ದ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಎಲ್ಲಾ ವಾಹನಗಳು ನೇರವಾಗಿ ಟೌನ್‍ಹಾಲ್ ವೃತ್ತದಲ್ಲಿ ಎಡ ತಿರುವು ಪಡೆದು ಎನ್‍ಆರ್ ರಸ್ತೆ ಮೂಲಕ ಮುಂದೆ ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ.

ಪಿಕೆ ಲೇನ್, ಓಟಿಸಿ ರಸ್ತೆ, ನಗರ್ತಪೇಟೆ ರಸ್ತೆ, ಎಸ್‍ಪಿ ರಸ್ತೆ ಮತ್ತು ಎಸ್‍ಪಿರಸ್ತೆಯ ಅಡ್ಡ ರಸ್ತೆಗಳು ಹಾಗೂ ಸುಣ್ಣಕಲ್‍ಪೇಟೆ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‍ಅನ್ನು ನಿಷೇಧಿಸಲಾಗಿದೆ.

ಪುರಭವನ, ರವೀಂದ್ರಕಲಾಕ್ಷೇತ್ರ, ಮೈಶುಗರ್ ಬಿಲ್ಡಿಂಗ್, ಎನ್‍ಆರ್ ರಸ್ತೆ ಎಡಭಾಗ, ಕುಂಬಾರಗುಂಡಿ ರಸ್ತೆಯ ಎಡ ಭಾಗ, ಜೆಸಿ ರಸ್ತೆ ಎಡಭಾಗ, ಎಸ್‍ಜೆಪಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಅವಕಾಶ ಕಲ್ಪಿಸಲಾಗಿದ್ದು, ಬೆಂಗಳೂರು ಕರಗದ ಪ್ರಯುಕ್ತ ಮಾಡಲಾದ ಸಂಚಾರ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaba

Please follow and like us:

Leave a Reply

Your email address will not be published. Required fields are marked *

Next Post

ಈಶ್ವರಪ್ಪರ ರಾಜೀನಾಮೆ ಅಷ್ಟೇ ಸಾಲದು, ಅವರನ್ನು ಕೂಡಲೇ ಬಂಧಿಸಿ:

Sat Apr 16 , 2022
ಮಂಗಳೂರು, ಎ.16: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೇ ಸಾಲದು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ರಾಜ್ಯದಲ್ಲಿ ನಾನಾ ರೀತಿಯಲ್ಲಿ ಹಿಂದೂ ಕಾರ್ಯಕರ್ತರ ಬಲಿ ಆಗುತ್ತಿದೆ. ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದವರಿಗೆ ಹಿಂದೂ ಕಾರ್ಯಕರ್ತರನ್ನು ಬಳಸಿಕೊಂಡು ಅಧಿಕಾರ ಪಡೆಯುವುದು ಮಾತ್ರ ಗೊತ್ತಿದೆ ಹೊರತು ಹಿಂದೂಗಳಿಗಾಗಿ ಏನೂ […]

Advertisement

Wordpress Social Share Plugin powered by Ultimatelysocial