ಮನೆ ಮಾರಿದ ಅಮಿತಾಬ್ ಬಚ್ಚನ್ ಎಷ್ಟು ಕೋಟಿ ಇರಬಹುದು ?

ನಟ ಅಮಿತಾಬ್ ಬಚ್ಚನ್ ಬಹಳ ಭಾವುಕ ಸಂಬಂಧ ಹೊಂದಿದ್ದ ಮನೆಯೊಂದನ್ನು ಮಾರಾಟ ಮಾಡಿದ್ದಾರೆ.ಅಮಿತಾಬ್ ಬಚ್ಚನ್ ಅವರ ತಂದೆ, ತಾಯಿ ವಾಸಿಸಿದ್ದ ದಕ್ಷಿಣ ಮುಂಬೈನ ಗುಲ್‌ಮೊಹರ್ ಪಾರ್ಕ್‌ ಬಳಿ ಇದ್ದ ‘ಸೋಪಾನ್’ ಹೆಸರಿನ ಬಂಗ್ಲೆಯನ್ನು ಮಾರಾಟ ಮಾಡಿದ್ದಾರೆ.ಅಮಿತಾಬ್ ಬಚ್ಚನ್ ತಾಯಿ ತೇಜಿ ಬಚ್ಚನ್ ಅವರ ಹೆಸರಿನಲ್ಲಿ ಈ ಬಂಗ್ಲೆ ಇತ್ತು. ಬಳಿಕ ಅಮಿತಾಬ್ ಬಚ್ಚನ್ ಹೆಸರಿಗೆ ಈ ಆಸ್ತಿ ವರ್ಗವಾಯಿತು. ಹಲವು ವರ್ಷಗಳ ಕಾಲ ಈ ಬಂಗ್ಲೆಯನ್ನು ನೋಡಿಕೊಂಡ ಅಮಿತಾಬ್ ಬಚ್ಚನ್ ಇದೀಗ ಬಂಗ್ಲೆಯನ್ನು ಮಾರಾಟ ಮಾಡಿದ್ದಾರೆ.ಅಮಿತಾಬ್ ಬಚ್ಚನ್ ಅವರ ಈ ಬಂಗ್ಲೆಯನ್ನು ಉದ್ಯಮಿ, ನ್ಯೂಜಾನ್ ಸಂಸ್ಥೆಯ ಸಿಇಒ ಅವ್ನಿ ಬದೇರ್ ಖರೀದಿಸಿದ್ದಾರೆ. ಅವ್ನಿ ಹಾಗೂ ಬಚ್ಚನ್ ಕುಟುಂಬ ಕಳೆದ 30 ವರ್ಷಗಳಿಂದ ಆಪ್ತ ನಂಟು ಹೊಂದಿದೆ. ಅವನಿ ಅವರ ಗುಲ್‌ಮೊಹರ್ ಪಾರ್ಕ್ ಏರಿಯಾದಲ್ಲಿ ಹಲವು ದಶಕದಿಂದ ವಾಸವಿದ್ದಾರೆ. ಈಗ ಅಮಿತಾಬ್ ಬಚ್ಚನ್ ಮಾರಿರುವ ಸ್ಥಳ ಸಹ ಅವ್ನಿ ನಿವಾಸಕ್ಕೆ ಹತ್ತಿರದಲ್ಲೇ ಇದೆ.418.05 ಚದರ ಅಡಿಯ ಸ್ಥಳದ ಈ ಬಂಗ್ಲೆಯನ್ನು ಬರೋಬ್ಬರಿ 23 ಕೋಟಿ ರುಪಾಯಿ ಹಣಕ್ಕೆ ಅವ್ನಿ ಖರೀದಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವ್ನಿ, ”ನಾವು ಈಗಾಗಲೇ ಇರುವ ಏರಿಯಾದಲ್ಲಿಯೇ ಮತ್ತೊಂದು ಆಸ್ತಿ ಖರೀದಿ ಮಾಡಲು ಯೋಚಿಸಿದ್ದೆವು. ಅದೇ ಸಮಯಕ್ಕೆ ಈ ಆಫರ್ ಬಂದಿತು. ಹಾಗಾಗಿ ನಾವು ಬಂಗ್ಲೆ ಖರೀದಿ ಮಾಡಿದೆವು” ಎಂದಿದ್ದಾರೆ”ಈಗಿರುವ ಕಟ್ಟಡವು ಹಳೆಯ ಕಟ್ಟಡ ಆಗಿದೆ ಹಾಗಾಗಿ ನಾವದನ್ನು ಒಡೆದು ನಮಗೆ ಅನುಕೂಲಕರವಾಗುವಂತೆ ಬದಲಾಯಿಸಲಿದ್ದೇವೆ” ಎಂದಿದ್ದಾರೆ.ಈಗ ಮಾರಾಟವಾಗಿರುವ ‘ಸೋಪಾನ್’ ಬಚ್ಚನ್ ಕುಟುಂಬದ ಮೊದಲ ಮನೆ. ಆದರೆ ಅದನ್ನೇ ಬಚ್ಚನ್ ಮಾರಾಟ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಬಾಲ್ಯವನ್ನು ಅದೇ ಮನೆಯಲ್ಲಿ ಕಳೆದಿದ್ದರು. ಬಚ್ಚನ್ ತಮ್ಮ ಬ್ಲಾಗ್‌ಗಳಲ್ಲಿ ಹಲವು ಬಾರಿ ‘ಸೋಪಾನ್’ ಮನೆಯ ಉಲ್ಲೇಖ ಮಾಡಿದ್ದಾರೆ.ಆದರೆ ಈಗ ಬಚ್ಚನ್ ಬಳಿ ಹಲವು ಐಶಾರಾಮಿ, ಅದ್ಧೂರಿ ಮನೆ, ಅಪಾರ್ಟ್‌ಮೆಂಟ್‌ಗಳಿವೆ. ಮುಂಬೈನ ಪ್ರತಿಷ್ಟಿತ ಜುಹು ಏರಿಯಾದಲ್ಲಿ ‘ಪ್ರತೀಕ್ಷಾ’ ಹೆಸರಿನ ಐಶಾರಾಮಿ ಬಂಗ್ಲೆಯಿದೆ. ಅದೇ ಏರಿಯಾದಲ್ಲಿ ‘ಜಲ್ಸಾ’ ಹೆಸರಿನ ಮತ್ತೊಂದು ಐಶಾರಾಮಿ ಮನೆಯಿದೆ. ಈ ಮನೆಯನ್ನು ‘ಶೋಲೆ’ ಸಿನಿಮಾದ ನಿರ್ದೇಶಕ ರಮೇಶ್ ಸಿಪ್ಪಿ ಬಚ್ಚನ್‌ಗೆ ಉಡುಗೊರೆಯಾಗಿ ನೀಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲೆಕ್ಟ್ರಿಕ್ ವಾಹನ ಬ್ಯಾಟರಿ ವಿನಿಮಯ ಸಹಕಾರಿ ಹೇಗೆ?

Thu Feb 3 , 2022
  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಟರಿ ವಿನಿಮಯ ನೀತಿಯನ್ನು ಹೊರತರಲಾಗುವುದು ಎಂದು ಘೋಷಿಸಿದರು.EV (ಎಲೆಕ್ಟ್ರಿಕ್ ವಾಹನ) ಚಾರ್ಜಿಂಗ್ ಕೇಂದ್ರಗಳಿಗಾಗಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗುವುದು.ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ವಲಯಗಳ ಅಭಿವೃದ್ಧಿ ಮಾಡಲಾಗುವುದು. ಬ್ಯಾಟರಿ ವಿನಿಮಯ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಜೆಟ್​ನಲ್ಲಿ ಹೇಳಿದರು. ಯುರೋಪ್ ದೇಶಗಳಲ್ಲಿ ಈಗಾಗಲೇ ಈ ರೀತಿ ಬ್ಯಾಟರಿ ವಿನಿಮಯ ಪದ್ಧತಿ ಜಾರಿಯಲ್ಲಿದೆ. […]

Advertisement

Wordpress Social Share Plugin powered by Ultimatelysocial