ಬ್ಯಾಂಕ್‌ ಗ್ರಾಹಕರಿಗೆ ʼಗುಡ್‌ ನ್ಯೂಸ್‌ʼ : ಇನ್ಮುಂದೆ ಕಂಪನಿಗಳು ಗ್ರಾಹಕರಿಗೆ ಮನಬಂದಂತೆ ʼಬಡ್ಡಿ ವಸೂಲಿʼ ಮಾಡಂಗಿಲ್ಲ : ʼಹೊಸ ಮಾರ್ಗಸೂಚಿ ಬಿಡುಗಡೆʼ ಮಾಡಿದ RBI

ನವದೆಹಲಿ: ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದ ಮತ್ತು ಪಡೆಯಲು ಬಯಸುವ ಗ್ರಾಹಕರಿಗೆ RBI ಭಾರಿ ನೆಮ್ಮದಿಯ ಸುದ್ದಿಯನ್ನು ನೀಡಿದೆ. ಹೌದು, ಮೈಕ್ರೋಫೈನಾನ್ಸ್ ಕಂಪನಿಗಳು ತಮ್ಮ ಗ್ರಾಹಕರಿಂದ ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುವ ಹಾಗಿಲ್ಲ.ಷರತ್ತುಗಳ ಆಧಾರದ ಮೇಲೆ ಮೈಕ್ರೋಫೈನಾನ್ಸ್ ಕಂಪನಿಗಳು ಬಡ್ಡಿ ದರಗಳನ್ನು ನಿಗದಿಪಡಿಸಬಹುದು. ಆದರೆ, ಗ್ರಾಹಕರಿಂದ ಹೆಚ್ಚಿನ ಬಡ್ಡಿದರವನ್ನು ಪಡೆಯುವಂತಿಲ್ಲ. ಏಕೆಂದರೆ, ಈ ಶುಲ್ಕಗಳು ಮತ್ತು ದರಗಳು ಕೇಂದ್ರೀಯ ಬ್ಯಾಂಕ್ ನ ನಿಗಾ ವ್ಯಾಪ್ತಿಗೆ ಒಳಪಡುತ್ತವೆ ಎಂದು RBI ಹೇಳಿದೆ.ಯಾವ ಗ್ರಾಹಕರ ವಾರ್ಷಿಕ ಆದಾಯ ಮೂರು ಲಕ್ಷ ರೂ.ಗಳವರೆಗೆ ಇದೆಯೋ, ಆ ಕುಟುಂಬಗಳಿಗೆ ಯಾವುದೇ ಖಾತರಿಯಿಲ್ಲದೆ ಸಾಲವನ್ನು ನೀಡಬೇಕು ಎಂದು ಆರ್‌ಬಿ ಐ ಕಂಪನಿಗಳಿಗೆ ನಿರ್ದೇಶನಗಳನ್ನು ನೀಡಿದೆ. ಮೊದಲು ಈ ಸಾಲದ ಮಿತಿ ಗ್ರಾಮೀಣ ಸಾಲದಾತರಿಗೆ 1.2 ಲಕ್ಷ ಮತ್ತು ನಗರ ಸಾಲದಾತರಿಗೆ 2 ಲಕ್ಷ ರೂ. ಆಗಿತ್ತು. ಆರ್‌ಬಿಐನ ಈ ಹೊಸ ನಿಯಮವು ಏಪ್ರಿಲ್ 1, 2022 ರಿಂದ ಅನ್ವಯಿಸಲಿದೆ.

ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುವ ಹಾಗಿಲ್ಲ
ಆರ್.ಬಿ.ಐ ಜಾರಿಗೊಳಿಸಿರುವ ಮಾರ್ಗಸೂಚಿಗಳ ಪ್ರಕಾರ, ‘ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಕ್ಕೆ ಸಂಬಂಧಿಸಿದ ಶುಲ್ಕಗಳ ಮೇಲೆ ಮಿತಿಯನ್ನು ನಿಗದಿಪಡಿಸಬೇಕಾಗುತ್ತದೆ. ಅಂದರೆ, ಈ ಕಂಪನಿಗಳು ಗ್ರಾಹಕರಿಂದ ಅನಿಯಂತ್ರಿತ ಬಡ್ಡಿಯನ್ನು ವಿಧಿಸುವಂತಿಲ್ಲ. ಇದರೊಂದಿಗೆ, ಎಲ್ಲಾ ನಿಯಮಿತ ಘಟಕಗಳು, ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲ್ಪಟ್ಟ ನೀತಿಯನ್ನು ಜಾರಿಗೊಳಿಸಬೇಕು. ಇದರಲ್ಲಿ, ಮೈಕ್ರೋ ಫೈನಾನ್ಸ್ ಸಾಲದ ಮೊತ್ತ, ಕವರ್, ಬಡ್ಡಿದರದ ಸೀಲಿಂಗ್ ಮತ್ತು ಇತರ ಎಲ್ಲಾ ಶುಲ್ಕಗಳ ಬಗ್ಗೆ ಸ್ಪಷ್ಟತೆಯನ್ನು ತರಬೇಕಾಗಲಿದೆ.

ಇಂತಹ ಪರಿಸ್ಥಿತಿಯಲ್ಲಿ ದಂಡ ಬೀಳುವುದಿಲ್ಲ
ನಿಗದಿತ ಅವಧಿಗಿಂತ ಮೊದಲು ಸಾಲವನ್ನು ಮರುಪಾವತಿಸುವ ಗ್ರಾಹಕರಿಗೆ RBI ತನ್ನ ಮಾರ್ಗಸೂಚಿಗಳಲ್ಲಿ, ‘ಪ್ರತಿ ನಿಯಮಿತ ಘಟಕವು ಸಂಭಾವ್ಯ ಸಾಲಗಾರನ ಬಗ್ಗೆ, ಬೆಲೆ-ಸಂಬಂಧಿತ ಮಾಹಿತಿಯನ್ನು ಫ್ಯಾಕ್ಟ್‌ಶೀಟ್ ರೂಪದಲ್ಲಿ ಒದಗಿಸಬೇಕಾಗುತ್ತದೆ. ಸಾಲಗಾರನು ತನ್ನ ಸಾಲವನ್ನು ಅವಧಿಗೂ ಮುನ್ನ ಮರುಪಾವತಿಸಲು ಬಯಸಿದರೆ, ಆತನ ಮೇಲೆ ಯಾವುದೇ ದಂಡವನ್ನು ವಿಧಿಸಬಾರದು. ಕಂತು ಪಾವತಿಯಲ್ಲಿ ವಿಳಂಬವಾದರೆ, ಮೈಕ್ರೋ ಫೈನಾನ್ಸ್ ಕಂಪನಿಗಳು ಗ್ರಾಹಕರ ಮೇಲೆ ದಂಡವನ್ನು ವಿಧಿಸಬಹುದು. ಆದರೆ ಅದು ಸಂಪೂರ್ಣ ಸಾಲದ ಮೊತ್ತಕ್ಕೆ ಅಲ್ಲ ಮತ್ತು ಕೇವಲ ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಸೀಮಿತವಾಗಿರಬೇಕು’ ಎಂದು ಹೇಳಿದೆ.

ಸಾಲ ಒಪ್ಪಂದಗಳು ಸರಳ ಭಾಷೆಯಲ್ಲಿರಲಿ
ಇದಲ್ಲದೆ, ಸಾಲಗಾರನು ಸಾಲವನ್ನು ತೆಗೆದುಕೊಂಡಿದ್ದರೆ, ಮೈಕ್ರೋಫೈನಾನ್ಸ್ ಕಂಪನಿಗಳು ಅವನ ಮಾಸಿಕ ಆದಾಯದ ಗರಿಷ್ಠ ಶೇ.50 ರಷ್ಟು ಹಣವನ್ನು ಮಾತ್ರ ಸಾಲ ಮರುಪಾವತಿಗಾಗಿ ನಿಗದಿಪಡಿಸಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಗ್ರಾಹಕರ ನಡುವಿನ ಒಪ್ಪಂದವು ಸಾಲಗಾರನಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿರಬೇಕು ಎಂದು RBI ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಣಬೀರ್ ಕಪೂರ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಆಲಿಯಾ ಭಟ್ ನೆನಪಿಸಿಕೊಂಡಾಗ, ನನ್ನ ತಲೆಯಲ್ಲಿ ಒಂದು ರೀತಿಯ ಕಲ್ಪನೆ ಮತ್ತು ಅದು ನಿಜವಾಯಿತು!

Wed Mar 16 , 2022
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಉದ್ಯಮದಲ್ಲಿ ಮುದ್ದಾದ ಸೆಲೆಬ್ ಜೋಡಿಗಳಲ್ಲಿ ಒಂದಾಗಿದ್ದಾರೆ. ಅಭಿಮಾನಿಗಳು ಅವರ ರಸಾಯನಶಾಸ್ತ್ರವನ್ನು ಪ್ರೀತಿಸುತ್ತಾರೆ ಮತ್ತು ಪರಸ್ಪರರ ಮೇಲಿನ ಅವರ ಕೊನೆಯಿಲ್ಲದ ಪ್ರೀತಿಯನ್ನು ನೋಡುವ ಮೂಲಕ ಆಗಾಗ್ಗೆ ಗಾಗಾ ಹೋಗುತ್ತಾರೆ. ಪ್ರೇಮ ಪಕ್ಷಿಗಳು ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಅವರು ಮದುವೆಯಾಗಿ ನೆಲೆಸಲು ಯೋಜಿಸಿದ್ದಾರೆ. ರಣಆಲಿಯಾ ಅಭಿಮಾನಿಗಳು ಒಳ್ಳೆಯ ಸುದ್ದಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಆದರೆ ಗಂಟು ಕಟ್ಟುವ ಮೂಲಕ ಇಬ್ಬರೂ ಅಧಿಕೃತಗೊಳಿಸಲು ಸ್ವಲ್ಪ ಸಮಯ ಕಾಯಬೇಕಾಗಿದೆ […]

Advertisement

Wordpress Social Share Plugin powered by Ultimatelysocial