BENGALURU:ಬನ್ನೇರುಘಟ್ಟ ಉದ್ಯಾನದ ಶುಲ್ಕ ಏರಿಕೆ;

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಝೂ, ಸಫಾರಿ, ಬಟರ್ ಫ್ಲೈ ಪಾರ್ಕ್ ದರಗಳು ಪರಿಷ್ಕರಣೆಗೊಂಡಿದ್ದು, ಹೊಸ ದರ ಜನವರಿ 1 ರಿಂದ ಜಾರಿಗೆ ಬರಲಿದೆ.

ಬುಧವಾರ ರಾಷ್ಟ್ರೀಯ ಉದ್ಯಾನ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸೋಮವಾರದಿಂದ ಶುಕ್ರವಾರ, ವಾರಾತ್ಯ ಮತ್ತು ಸರ್ಕಾರಿ ರಜೆ ದಿನಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ದರಗಳು 2022ರ ಜನವರಿ 1 ರಿಂದ ಜಾರಿಗೆ ಬರಲಿವೆ. ಹೊಸ ವರ್ಷದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೋಗುವ ಪ್ರವಾಸಿಗರು ಹೊಸ ಶುಲ್ಕವನ್ನು ಪಾವತಿ ಮಾಡಬೇಕಿದೆ.

ದರಗಳ ಪಟ್ಟಿ ಹೀಗಿದೆ:

ನಾನ್ ಎಸಿ ಬಸ್ ಸಫಾರಿ ಸೋಮವಾರದಿಂದ ಶುಕ್ರವಾರ ವಯಸ್ಕರಿಗೆ 330 ರೂ. (300 ರೂ. ಪ್ರಸ್ತುತ ದರ), ಮಕ್ಕಳಿಗೆ 180 ರೂ. (150 ರೂ. ಪ್ರಸ್ತುತ ದರ) ಮತ್ತು ಹಿರಿಯ ನಾಗರಿಕರಿಗೆ 230 ರೂ.ಗಳು (200 ಪ್ರಸ್ತುತ ದರ).

ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 380 ರೂ. (350 ಪ್ರಸ್ತುತ ದರ), ಮಕ್ಕಳು 230 ರೂ. (200 ರೂ. ಪ್ರಸ್ತುತ ದರ), ಹಿರಿಯ ನಾಗರಿಕರು 280 ರೂ. ಗಳು (250 ರೂ. ಪ್ರಸ್ತುತ ದರ).

ವಿದೇಶಿ ಪ್ರವಾಸಿಗರು :

ಸೋಮವಾರದಿಂದ ಶುಕ್ರವಾರದ ತನಕ ವಿದೇಶಿ ಪ್ರವಾಸಿಗರಿಗೆ ವಯಸ್ಕರಿಗೆ 500 ರೂ. ಇದ್ದ ದರ 530 ರೂ.ಗೆ ಕ್ಕೆ ಏರಿಕೆಯಾಗಿದೆ. ಮಕ್ಕಳಿಗೆ 400 ರೂ. ಇದ್ದ ದರ 430 ರೂ.ಗೆ ಏರಿಕೆಯಾಗಿದೆ. ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 500 ರೂ. ಇದ್ದ ದರ 530 ರೂ.ಗೆ ಏರಿಕೆಯಾಗಿದೆ. ಮಕ್ಕಳಿಗೆ 400 ರೂ. ಇದ್ದ ದರ 430 ರೂ.ಗೆ ಏರಿಕೆಯಾಗಿದೆ.

ಜೀಪ್ ಸಫಾರಿ (ಝೂ+ ಸಫಾರಿ + ಚಿಟ್ಟೆ ಪಾರ್ಕ + ಕ್ಯಾಮರಾ) 6 ಸೀಟರ್ ನಾನ್ ಎಸಿ ಜೀಪ್. ಸೋಮವಾರದಿಂದ ಶುಕ್ರವಾರ 3500 ರೂ. (ಪ್ರಸ್ತುತ ದರ 3500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 3800 ರೂ. (3500 ರೂ. ಪ್ರಸ್ತುತ ದರ).

6 ಸೀಟರ್ ಎಸಿ ಜೀಪ್;

ಸೋಮವಾರದಿಂದ ಶುಕ್ರವಾರ 4000 ರೂ. (ಪ್ರಸ್ತುತ ದರ 4000 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 4300 ರೂ. (4000 ರೂ. ಪ್ರಸ್ತುತ ದರ).

6 ಸೀಟರ್ Xylo; 

ಸೋಮವಾರದಿಂದ ಶುಕ್ರವಾರ 4500 ರೂ. (ಪ್ರಸ್ತುತ ದರ 4500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 5000 ರೂ. (4500 ರೂ. ಪ್ರಸ್ತುತ ದರ).

8 ಸೀಟರ್ ನಾನ್ ಎಸಿ ಜೀಪ್;

ಸೋಮವಾರದಿಂದ ಶುಕ್ರವಾರ 4500 ರೂ. (ಪ್ರಸ್ತುತ ದರ 4500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 5000 ರೂ. (4500 ರೂ. ಪ್ರಸ್ತುತ ದರ).

7 ಸೀಟರ್ ಇನ್ನೋವಾ ;

ಸೋಮವಾರದಿಂದ ಶುಕ್ರವಾರ 5500 ರೂ. (ಪ್ರಸ್ತುತ ದರ 5,500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 6000 ರೂ. (5,500 ರೂ. ಪ್ರಸ್ತುತ ದರ).

ಬನ್ನೇರುಘಟ್ಟ ಬೆಂಗಳೂರು ನಗರದಕ್ಕೆ ಹತ್ತಿರದಲ್ಲಿರುವ ಪ್ರಮುಖ ಪ್ರವಾಸಿ ತಾಣ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಸಫಾರಿ ಮಾಡುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

COVID CASE: ಭಾರತದಲ್ಲಿ ಒಂದೇ ದಿನ 13,154 ಮಂದಿಗೆ ಕೊರೊನಾ ಸೋಂಕು;

Thu Dec 30 , 2021
ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದೊಂದು ತಿಂಗಳಿನಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ 10,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರ ಮಧ್ಯೆ ಓಮಿಕ್ರಾನ್ ರೂಪಾಂತರ ಸೋಂಕಿತರ ಸಂಖ್ಯೆಯು 961ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 13,154 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನದಲ್ಲಿ 268 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು, ಇದೇ ಅವಧಿಯಲ್ಲಿ […]

Advertisement

Wordpress Social Share Plugin powered by Ultimatelysocial