BIGG NEWS : `PSI’ ನೇಮಕಾತಿ ಪರೀಕ್ಷೆ ಅಕ್ರಮ ಕೇಸ್ : ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ!

ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮದ ಆರೋಪಿಗಳ ಪೈಕಿ ಈಗಾಗಲೇ ಬಹುತೇಕರು ಕಂಬಿ ಹಿಂದಿದ್ದಾರೆ. ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಪ್ರಕರಣದ ಪ್ರಮುಖ ಆರೋಪಿಗಳಾದ ದಿವ್ಯ ಹಾಗರಗಿ ಹಾಗೂ ಮಂಜುನಾಥ್ ತಮ್ಮ ಮೊಬೈಲ್ ಗಳನ್ನು ನಾಶಪಡಿಸಿದ್ದ ಸಂಗತಿ ಈ ಹಿಂದೆ ಬಯಲಾಗಿತ್ತು.ಇದೀಗ ಈ ಪ್ರಕರಣದ ‘ಕಿಂಗ್ ಪಿನ್’ ಆರ್.ಡಿ. ಪಾಟೀಲ್ ಅಲಿಯಾಸ್ ರುದ್ರಗೌಡನ ಕುರಿತ ಸ್ವಾರಸ್ಯಕರ ಸಂಗತಿಯೊಂದು ಬಹಿರಂಗವಾಗಿದೆ. ರುದ್ರಗೌಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಇರಾದೆ ಹೊಂದಿದ್ದು, ಇದಕ್ಕಾಗಿ ಜೈಲಿನಲ್ಲಿ ಕುಳಿತೇ ತಯಾರಿ ನಡೆಸಿದ್ದನೆಂದು ಹೇಳಲಾಗಿದೆ.

ಒಂದೆರಡು ದಿನಗಳಲ್ಲಿ ತನಗೆ ಜಾಮೀನು ಸಿಗಬಹುದೆಂಬ ವಿಶ್ವಾಸ ಹೊಂದಿದ್ದ ರುದ್ರಗೌಡ, ಜೈಲಿನಿಂದ ಹೊರ ಬರುತ್ತಲೇ ತನಗಾಗಿ ಅದ್ದೂರಿ ಸನ್ಮಾನ ಸಮಾರಂಭವೊಂದನ್ನು ಅಫಜಲಪುರದಲ್ಲಿ ಏರ್ಪಡಿಸುವಂತೆ ತನ್ನ ಬೆಂಬಲಿಗರಿಗೆ ಸೂಚನೆ ನೀಡಿದ್ದನೆಂದು ಹೇಳಲಾಗಿದೆ. ಈ ಮೂಲಕ ತನ್ನ ರಾಜಕೀಯ ಶಕ್ತಿ ಪ್ರದರ್ಶಿಸುವ ಚಿಂತನೆ ನಡೆಸಿದ್ದ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲತಾ ಮೋಹನ ಸಂಕೇಶ್ವರ ನಿಧನ

Mon May 16 , 2022
ಹುಬ್ಬಳ್ಳಿ: ಹುಬ್ಬಳ್ಳಿಯ ಮೋಹನ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಮೋಹನ ಸಂಕೇಶ್ವರ ಅವರ ಧರ್ಮಪತ್ನಿ ಶ್ರೀಮತಿ ಲತಾ ಮೋಹನ ಸಂಕೇಶ್ವರ(59) ಸೋಮವಾರ ನಿಧನರಾದರು.   ಲತಾ ಮೋಹನ ಸಂಕೇಶ್ವರ ಅವರು ದೇಶಪಾಂಡೆ ನಗರದ ವಾಸವಿದ್ದರು. ಇವರಿಗೆ ಪತಿ, ಪುತ್ರ ಸಂತೋಷ ಸಂಕೇಶ್ವರ, ಪುತ್ರಿ ಸ್ನೇಹಾ ಗುರುರಾಜ ಕಡಿವಾಳ, ಸೊಸೆ ಶ್ವೇತಾ ಸಂತೋಷ ಸಂಕೇಶ್ವರ ಹಾಗೂ ಅಪಾರ ಬಂಧುಗಳು ಇದ್ದಾರೆ. ಮಂಟೂರ ರಸ್ತೆಯ ಕಲಬುರ್ಗಿ ಮಠದ ರುದ್ರಭೂಮಿಯಲ್ಲಿ ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ […]

Advertisement

Wordpress Social Share Plugin powered by Ultimatelysocial