ಜವಾರಿ ಭಾಷೆಯ ‘ಬಯಲುಸೀಮೆ’ ಸಿನಿಮಾ ಆಡಿಯೋ ಲಾಂಚ್

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಒಂದು ವಿಶೇಷ ಪ್ರೀತಿ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಬಯಲು ಸೀಮೆ ಸಿನಿಮಾ ಶೂಟಿಂಗ್ ಮುಗಿಸಿಕೊಂಡು, ನಿನ್ನೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆಗೆ ಮಾಡಿತು. ಇಡೀ ಸಿನಿಮಾ ತಂಡ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅನುಭವ ಹಂಚಿಕೊಂಡರು.

ನಿರ್ದೇಶಕರು ಏನೇ ವಿಷ್ಯುವಲೈಸೇಷನ್ ಮಾಡಿದರೇ ಅದಕ್ಕೆ ನಿರ್ಮಾಪಕರ ಸಪೋರ್ಟ್ ಬಹಳ‌ ಮುಖ್ಯ. ಪ್ರತಿಯೊಬ್ಬರೂ ಈ ಸಿನಿಮಾಗೆ ಬಹಳಷ್ಟು ಶ್ರಮಿಸಿದ್ದಾರೆ. ನಾಗಾಭರಣ ಅವರ ಜೊತೆ ಆಕ್ಟ್ ಮಾಡಿರೋದು ಖುಷಿ ಕೊಟ್ಟಿದೆ ಎಂದು ಆರ್ಮುಗಂ ರವಿಶಂಕರ್ ತಮ್ಮ ಅನುಭವ ಹಂಚಿಕೊಂಡರು.ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ‘ಬಯಲುಸೀಮೆ’ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಸಿನಿಮಾ ಮೂಡಿ‌ಬಂದಿದೆ.ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಭತ್ತರ ದಶಕ ಮತ್ತು ಈವತ್ತಿನ ಕಾಲಮಾನದೊಂದಿಗೆ ಜುಗಲ್ಬಂದಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆ. ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಂಥಾ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್:ಕೃನಾಲ್ ಪಾಂಡ್ಯ ಸಂಭ್ರಮಾಚರಣೆ ಬಗ್ಗೆ ಮೌನ ಮುರಿದ ಕೀರನ್ ಪೊಲಾರ್ಡ್!

Tue Apr 26 , 2022
ಕೀರಾನ್ ಪೊಲಾರ್ಡ್ ಅವರ ವಿಕೆಟ್‌ಗೆ ಹಣೆಗೆ ಮುತ್ತಿಟ್ಟು ಸಂಭ್ರಮಿಸುತ್ತಿರುವ ಕೃನಾಲ್ ಪಾಂಡ್ಯ ಅವರನ್ನು ಮಾಜಿ ಕ್ರಿಕೆಟಿಗರು ಲಕ್ನೋ ಸೂಪರ್ ಜೈಂಟ್ಸ್ ಆಲ್‌ರೌಂಡರ್‌ನ ಕ್ರಮಗಳಿಗೆ ದೂಷಿಸಿದ್ದಾರೆ. ಕೃನಾಲ್ ಪಾಂಡ್ಯ ಕೀರನ್ ಪೊಲಾರ್ಡ್‌ಗೆ ಹಿಂಬದಿಯಿಂದ ಹಾರಿ ಮತ್ತು ಅವರ ಕ್ಯಾಪ್ ಮೇಲೆ ಮುತ್ತು ನೀಡುವ ಮೂಲಕ ಅನನ್ಯ ಕಳುಹಿಸಿದರು. ಕೀರಾನ್ ಪೊಲಾರ್ಡ್ ಆನ್–ಫೀಲ್ಡ್ ವರ್ತನೆಗಳಿಗೆ ಪ್ರತಿಕ್ರಿಯಿಸಲಿಲ್ಲ ಆದರೆ ಘಟನೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಕ್ಕೆ ತೆಗೆದುಕೊಂಡರು. ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ […]

Advertisement

Wordpress Social Share Plugin powered by Ultimatelysocial