ಭಯಂಕರ ತಲೆನೋವನ್ನೂ ಕ್ಷಣಾರ್ಧದಲ್ಲಿ ಮಾಯ ಮಾಡಬಲ್ಲದು ಈ ಎಲೆ..!

ಊಟವಾದ್ಮೇಲೆ ಎಲೆ ಅಡಿಕೆ ಹಾಕಿಕೊಳ್ಳೋದು ಮಾಮೂಲು. ಇದರಿಂದ ತಿಂದಿದ್ದೆಲ್ಲ ಚೆನ್ನಾಗಿ ಜೀರ್ಣವಾಗುತ್ತೆ ಅನ್ನೋ ನಂಬಿಕೆ ಇದೆ. ಇದೇ ವೀಳ್ಯದೆಲೆ ನಿಮ್ಮ ತಲೆನೋವಿಗೆ ದಿವ್ಯ ಔಷಧಿಯಾಗಬಲ್ಲದು. ನಿಮಗೆ ಅಸಹನೀಯ ತಲೆನೋವಿದ್ದರೆ ವೀಳ್ಯದೆಲೆಯನ್ನು ಜೋಡಿಸಿ ಅದನ್ನ ತಲೆಗೆ ಕಟ್ಟಿಕೊಂಡರೆ ನೋವು ದೂರವಾಗುತ್ತದೆ.

 

ಇದಲ್ಲದೇ ತುರಿಕೆ ಮತ್ತು ಗಾಯಗಳಿಗೂ ಇದನ್ನು ಮದ್ದಾಗಿ ಬಳಸ್ತಾರೆ.

ಪೂಜೆಗೂ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳು ಇರುವುದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಉಪಯುಕ್ತವಾಗಬಲ್ಲದು. ವೀಳ್ಯದೆಲೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಮೊಡವೆಗಳನ್ನು ತೊಡೆದು ಹಾಕುವಲ್ಲಿ ಸಹ ಪರಿಣಾಮಕಾರಿಯಾಗಿದೆ.

ಕೆಲ ವೀಳ್ಯದೆಲೆಗಳನ್ನು ತೆಗೆದುಕೊಂಡು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಚಿಟಿಕೆ ಅರಿಶಿನ ಮತ್ತು ಅಲೋವೆರಾ ಜೆಲ್ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆದರೆ ಮೊಡವೆಗಳು ಮಾಯವಾಗುತ್ತವೆ. ನಿಮಗೆ ತುರಿಕೆಯ ಸಮಸ್ಯೆ ಇದ್ದರೆ ವೀಳ್ಯದೆಲೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಸ್ನಾನದ ನೀರಿನಲ್ಲಿ ವೀಳ್ಯದೆಲೆಯ ರಸವನ್ನು ಬೆರೆಸಿ ಸ್ನಾನ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರಿಣಾಮಕಾರಿಯಾಗಿ ಅಧ್ಯಯನ ಮಾಡುವುದು ಹೇಗೆ - ನರವಿಜ್ಞಾನ ತಜ್ಞರು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ

Wed Mar 16 , 2022
ಪರಿಣಾಮಕಾರಿ ಅಧ್ಯಯನವು ಎಲ್ಲರಿಗೂ ಸುಲಭವಾಗಿ ಬರುವುದಿಲ್ಲ. ಬುದ್ಧಿವಂತಿಕೆಯ ಹೊರತಾಗಿ, ಯಾವುದೇ ರೀತಿಯ ಕಲಿಕೆಯನ್ನು ಕೈಗೊಳ್ಳಲು ಗಮನಾರ್ಹ ಮಟ್ಟದ ಏಕಾಗ್ರತೆ ಮತ್ತು ನಿರ್ಣಯದ ಅಗತ್ಯವಿದೆ. ಶಿಕ್ಷಣದಲ್ಲಿ ಉತ್ಕೃಷ್ಟರಾಗಿರುವ ವಿದ್ಯಾರ್ಥಿಗಳು, ಸಾಮಾನ್ಯವಾಗಿ “ದಡ್ಡರು” ಎಂದು ಕರೆಯಲಾಗಿದ್ದರೂ, ಪ್ರಜ್ಞಾಪೂರ್ವಕವಾಗಿ ಅಥವಾ ಉಪಪ್ರಜ್ಞೆಯಿಂದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು, ಅದು ಅವರ ಕಲಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ದಿನದ ಕೊನೆಯಲ್ಲಿ, ಮಾನವನ ಮನಸ್ಸು ನ್ಯೂರಾನ್‌ಗಳ ಸಂಯೋಜನೆಯಾಗಿದೆ. ಮನಸ್ಸಿನ ಅರಿವಿನ ಕೌಶಲ್ಯಗಳನ್ನು ಹೆಚ್ಚಿಸಲು ವೈರ್ಡ್ ಆಗಿರಬೇಕು. ಅರಿವಿನ […]

Advertisement

Wordpress Social Share Plugin powered by Ultimatelysocial