BEAUTY TIPS : ವಯಸ್ಸು ಮುಚ್ಚಿಡಬೇಕಾ.? ಹಾಕಿದ್ರೆ ಮಾಡಿ ಈ ವ್ಯಾಯಾಮ

ವಯಸ್ಸು ಮುಚ್ಚಿಡಬೇಕಾ.? ಹಾಕಿದ್ರೆ ಮಾಡಿ ಈ ವ್ಯಾಯಾಮ

ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು ಮೂಡುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕೆ ಬೇಕಾಗುವಂತ ಪ್ರಯತ್ನಗಳನ್ನು ಮಾಡುತ್ತಾರೆ.

ಮುಖದಲ್ಲಿ ಸ್ಮೈಲ್ ಲೈನ್ಸ್ ಕಡಿಮೆ ಮಾಡಲು ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ಕೆಲವು ಮುಖದ ವ್ಯಾಯಾಮಗಳನ್ನು ಮಾಡಬೇಕು.

ನಿಮ್ಮ ಕಣ್ಣನ್ನು ಮುಚ್ಚಿಕೊಂಡು ಹೆಬ್ಬೆರಳನ್ನು ಕಣ್ಣಿನ ತುದಿಯಲ್ಲಿಡಿ. ನಿಮ್ಮ ಬೆರಳುಗಳು ಹಣೆಯ ಮೇಲಿರಲಿ. ಈ ವ್ಯಾಯಾಮವಾದ ನಂತರ ಹೆಬ್ಬೆರಳನ್ನು ಹಣೆಗೆ ತರಲು ಪ್ರಯತ್ನಿಸಿ. 5 ಸೆಕೆಂಡ್ ನಿಮ್ಮ ಕೈ ಹಾಗೇ ಇರಲಿ. ದಿನಕ್ಕೆ 10 ಬಾರಿ ಈ ವ್ಯಾಯಾಮವನ್ನು ಮಾಡಿ ಇದರಿಂದ ಕಣ್ಣಿನ ಹತ್ತಿರದ ಸುಕ್ಕುಗಳು ಹೋಗುತ್ತವೆ.

ನಿಮ್ಮ ತೋರು ಬೆರಳಿನ ಸಹಾಯದಿಂದ ನಿಮ್ಮ ಬಾಯಿಯ ಮೂಲೆಯನ್ನು ಬದಿಗೆ ತಳ್ಳಲು ಅಥವಾ ಹಿಗ್ಗಿಸಿ ಪ್ರಯತ್ನಿಸಿ. ಸ್ವಲ್ಪ ಸಮಯ ಅದೇ ಸ್ಥಿತಿಯಲ್ಲಿರಿ. ತುಂಬ ಜೋರಾಗಿ ಕೂಡ ಹಿಗ್ಗಿಸಬೇಡಿ. ಬಾಯಿಯ ಎರಡು ಮೂಲೆಗೂ ಹೀಗೆ ಮಾಡಿ. ದಿನಕ್ಕೆ 25 ಬಾರಿ ಈ ವ್ಯಾಯಾಮ ಮಾಡಿ. ಕೈ ಸಹಾಯ ತೆಗೆದುಕೊಳ್ಳದೇ ಬಾಯಿಯ ಮೂಲೆಯನ್ನು ಹಿಗ್ಗಿಸಲು ಪ್ರಯತ್ನಿಸಿ. ಈ ವ್ಯಾಯಾಮ ನಿಮ್ಮ ಚರ್ಮ ಸಡಿಲವಾಗುವುದನ್ನು ತಪ್ಪಿಸುತ್ತದೆ ಮತ್ತು ಇದರಿಂದ ಚರ್ಮದ ಮೇಲ್ಪದರ ಕೂಡ ಉತ್ತಮವಾಗುತ್ತದೆ.

ನಿಮ್ಮ ಬೆರಳುಗಳನ್ನು ನಿಮ್ಮ ಸ್ಮೈಲ್ ಲೈನ್ಸ್ ಮೇಲಿಟ್ಟು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿ ನಗಲು ಪ್ರಯತ್ನಿಸಿ. 5 ಸೆಕೆಂಡ್ ಗಳ ಕಾಲ ಇದೇ ಸ್ಥಿತಿಯಲ್ಲಿರಿ. ದಿನಕ್ಕೆ 30 ಬಾರಿ ಹೀಗೆ ಮಾಡಿ. ಇದರಿಂದ ಸ್ಮೈಲ್ ಲೈನ್ಸ್ ದೂರವಾಗುತ್ತದೆ ಮತ್ತು ಇದರಿಂದ ಕೆನ್ನೆಯ ಸ್ನಾಯುಗಳು ಗಟ್ಟಿಯಾಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ

Thu Dec 23 , 2021
ಈ ವಾರಾಂತ್ಯದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆ ಸಿಗಲಿದೆ. ‘ಕಲರ್ಸ್​ ಕನ್ನಡ’  ವಾಹಿನಿ ಒಂದು ವಿಶೇಷ ಸಂಚಿಕೆಯನ್ನು ಸಿದ್ಧಪಡಿಸಿದೆ. ಈಗಾಗಲೇ ಸೂಪರ್​ ಹಿಟ್​ ಆಗಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ ಮತ್ತು ಕಿರುತೆರೆ ಸೆಲೆಬ್ರಿಟಿಗಳ ‘ರಾಜಾ ರಾಣಿ’ ಕಾರ್ಯಕ್ರಮಗಳ ಸಂಗಮ ಆಗುತ್ತಿದೆ. ಈ ಎರಡೂ ಕಾರ್ಯಕ್ರಮದ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಪ್ರೋಮೋ ಈಗ ಗಮನ ಸೆಳೆಯುತ್ತಿದೆ. ‘ರಾಜಾ ರಾಣಿ’ ಕಾರ್ಯಕ್ರಮದ ನಿವೇದಿತಾ ಗೌಡ  ಮತ್ತು ‘ನನ್ನಮ್ಮ ಸೂಪರ್​ ಸ್ಟಾರ್​’  […]

Advertisement

Wordpress Social Share Plugin powered by Ultimatelysocial