ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್

ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್
ಮಹಾನ್ ಸಂಗೀತಕಾರರಾದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಎಂಬುದು ತಂದೆ ಮಗ ಇಬ್ಬರದೂ ಒಂದೇ ಹೆಸರು. ಹಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಕಾಲ 1888-1936. ಇಂದು ಕಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಜನ್ಮ ದಿನ ಸ್ಮರಣೆ.
ಗಾನ ಕಲಾ ಭೂಷಣರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಮಂಡ್ಯ ಜಿಲ್ಲೆಗೆ ಸೇರಿದ ಬೆಳಕವಾಡಿಯಲ್ಲಿ 1910ರ ಮಾರ್ಚ್ 9ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ಯರು. ತಾಯಿ ಲಕ್ಷ್ಮಮ್ಮ. ಮೂರು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರಾದರು. ಶಾಲೆಯ ಕಲಿಕೆಯ ಜೊತೆಗೆ ತಿಟ್ಟೆ ಕೃಷ್ಣ ಅಯ್ಯಂಗಾರ್ಯರಲ್ಲಿ ಸಂಗೀತ ಕಲಿತರು. ತಂದೆಯ ಜೊತೆಯಲ್ಲಿ ಸಹ ಗಾಯಕರಾಗಿಯೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು.
ಶ್ರೀನಿವಾಸ ಅಯ್ಯಂಗಾರ್ಯರು ಮದರಾಸು ವಿಶ್ವವಿದ್ಯಾಲಯದ ಸಂಗೀತದ ಡಿಪ್ಲೋಮಾ ಪಡೆದರು (೧೯೩೧-೩೨). ಅಲ್ಲಿನದು ಸಂಜೆ ತರಗತಿಗಳಾಗಿದ್ದು ಟೈಗರ್ ವರದಾಚಾರ್ಯರು ಪ್ರಾಂಶುಪಾಲರಾಗಿದ್ದರು. ಬೆಳಗಿನ ವೇಳೆ ಮುತ್ತಯ್ಯ ಭಾಗವತರು ಪ್ರಾಂಶುಪಾಲರಾಗಿದ್ದ ಮದರಾಸು ಮ್ಯೂಸಿಕ್ ಅಕಾಡಮಿಯಲ್ಲಿ ಪಾಠವಾಗುತ್ತಿತ್ತು. ಹೀಗೆ ಎರಡೂ ವೇಳೆ ಸಂಗೀತ ಕಲಿಕೆ ನಡೆಯುತ್ತಿತ್ತು. ಅನೇಕ ವಿದ್ವಾಂಸರ ಸಂಗೀತ ಕಚೇರಿ ಆಲಿಸುತ್ತಾ, ಗುರುಗಳೊಂದಿಗೆ ಚರ್ಚಿಸುತ್ತಾ, ಕಲಿಯತ್ತಾ ಬೆಳೆದರು.
ಶ್ರೀನಿವಾಸ ಅಯ್ಯಂಗಾರ್ಯರು ಮೈಸೂರಿಗೆ ಹಿಂದಿರುಗಿದ ನಂತರ ಪಾಶ್ಚಾತ್ಯ ಸಂಗೀತ ಕಲಿತರು. 1939ರಲ್ಲಿ ಲಂಡನ್ನಿನ ಟ್ರಿನಿಟಿ ಕಾಲೇಜಿನ ಸಂಗೀತದ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಮೊದಲ ಶ್ರೇಣಿ ಗಳಿಸಿ, ಬೆಂಗಳೂರಿನ ವಾಣಿವಿಲಾಸ ಇನ್‌ಸ್ಟಿಟ್ಯೂಟಿನಲ್ಲಿ ಸಂಗೀತದ ಅಧ್ಯಾಪಕರಾಗಿ ನೇಮಕಗೊಂಡರು. ಕೆಲಕಾಲ ಮೈಸೂರಿನ ಸರಕಾರಿ ಟ್ರೈನಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಶ್ರೀನಿವಾಸ ಅಯ್ಯಂಗಾರ್ಯರು ಜಯಚಾಮರಾಜ ಒಡೆಯರಿಂದ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು. ಕೆಲಕಾಲ ಕರ್ನಾಟಕ ಸರಕಾರದ ಪರೀಕ್ಷಾ ಮಂಡಲಿ, ಆಕಾಶವಾಣಿ ಆಡಿಶನ್ ಮಂಡಳಿಯ ತೀರ್ಪುಗಾರರ ಜವಾಬ್ದಾರಿ ನಿರ್ವಹಿಸಿದರು.
ಶ್ರೀನಿವಾಸ ಅಯ್ಯಂಗಾರ್ಯರು ಸಾಹಿತ್ಯ ರಚನೆಯಲ್ಲೂ ತೊಡಗಿ ಮಹಾ ವೈದ್ಯನಾಥ ಅಯ್ಯರ್, ಮುತ್ತಯ್ಯ ಭಾಗವತರ್, ಟೈಗರ್ ವರದಾಚಾರ್ ಮುಂತಾದವರ ಬಗ್ಗೆ ಜೀವನ ಚರಿತ್ರೆಗಳನ್ನು ಬರೆದರು.
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರಿಗೆ 1928ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಓರಿಯಂಟರ್ ಕಾನ್‌ಫರೆನ್ಸ್ ಕಚೇರಿಯಲ್ಲಿ ಪ್ರಶಸ್ತಿ, 1980ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ ಸಂಗೀತ ಸಮ್ಮೇಳನದ ಅಧ್ಯಕ್ಷತೆ-ಗಾನಕಲಾ ಭೂಷಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ ಬಿರುದು, ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನಸಭಾ, ನಂದಿನಿ ರಸಿಕ ಸಭಾ ಮುಂತಾದ ಸಂಸ್ಥೆಗಳಿಂದ ಸನ್ಮಾನಗಳು ಹೀಗೆ ಅನೇಕ ಗೌರವಗಳು ಸಂದಿದ್ದವು.
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರು 2002ರ ಫೆಬ್ರವರಿ 5ರಂದು ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿ. ಎನ್. ಜಯಲಕ್ಷ್ಮೀ ದೇವಿ

Thu Mar 10 , 2022
ಸಿ. ಎನ್. ಜಯಲಕ್ಷ್ಮೀ ದೇವಿ ಲೇಖಕಿಯಾಗಿ ಮತ್ತು ಸಮಾಜಸೇವಕಿಯಾಗಿ ಪ್ರಸಿದ್ಧರಾಗಿದ್ದವರು. ಜಯಲಕ್ಷ್ಮೀದೇವಿಯವರು ಚನ್ನಪಟ್ಟಣದಲ್ಲಿ 1926ರ ಮಾರ್ಚ್ 8ರಂದು ಜನಿಸಿದರು. ತಂದೆ ಸಿ.ಕೆ.ನಾರಾಯಣರಾವ್. ತಾಯಿ ನಂಜಮ್ಮ. ನಾಟಕ ಕರ್ತೃ ಸಿ.ಕೆ.ವೆಂಕಟರಾಮಯ್ಯನವರು ತಂದೆ ಸಿ.ಕೆ.ನಾರಾಯಣರಾವ್ ಅವರ ಹಿರಿಯ ಸಹೋದರರು. ತಂದೆ ಚನ್ನಪಟ್ಟಣದ ಪಟ್ಲು ಗ್ರಾಮದಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದುದರಿಂದ ಓದಿಗೆ ಅನುಕೂಲವಿಲ್ಲದೆ ಜಯಲಕ್ಷ್ಮೀ ದೇವಿ ಅವರ ವಿದ್ಯಾಭ್ಯಾಸ ಮೈಸೂರಿನ ಇನ್ನೊಬ್ಬ ದೊಡ್ಡಪ್ಪನವರಾದ ಕೆ.ಎ. ಪದ್ಮನಾಭಯ್ಯನವರ ಆಶ್ರಯದಲ್ಲಿ ನಡೆಯಿತು. ಇವರು ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರಾಗಿದ್ದು […]

Advertisement

Wordpress Social Share Plugin powered by Ultimatelysocial