ಬೆಲ್ಲದ ಜೊತೆ ಈ ವಸ್ತು ಸೇವಿಸಿದ್ರೆ ಸಿಗುತ್ತೆ ಬಿಳಿ ಕೂದಲ ಸಮಸ್ಯೆಗೆ ಪರಿಹಾರ.!

ತಲೆಕೂದಲು ಬೆಳ್ಳಗಾಗೋದು ನಲ್ವತ್ತು ದಾಟಿದ ಮೇಲೆ. ಆದ್ರೆ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ 25ರ ಯುವಕ ಯುವತಿಯರಿಗೂ ಕೂದಲು ಬೆಳ್ಳಗಾಗ್ತಾ ಇದೆ. ಕೆಲವೊಮ್ಮೆ ಇದಕ್ಕೆ ಆನುವಂಶಿಕ ಕಾರಣಗಳೂ ಇರಬಹುದು.

ಅದೇನೇ ಆದ್ರೂ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದರಿಂದ ಯುವಕರು ಮತ್ತು ಯುವತಿಯರು ಮುಜುಗರ ಅನುಭವಿಸ್ತಾರೆ.

ಅವರ ಆತ್ಮವಿಶ್ವಾಸವನ್ನೇ ಇದು ಕುಗ್ಗಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಪ್ರಾರಂಭಿಸಿದ್ರೆ ರಾಸಾಯನಿಕಯುಕ್ತ ಹೇರ್ ಡೈ ಬಳಸಬಾರದು. ಇದರಿಂದ ಕೂದಲು ಶುಷ್ಕವಾಗುತ್ತದೆ ಮತ್ತು ಅಸ್ವಾಭಾವಿಕವಾಗಿ ಕಾಣಲು ಪ್ರಾರಂಭಿಸುತ್ತದೆ.

ನೀವು ಮನೆಯಲ್ಲೇ ಕೆಲವೊಂದು ವಸ್ತುಗಳನ್ನು ಬಳಸಿ ಬಿಳಿ ಕೂದಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆರೋಗ್ಯ ತಜ್ಞರ ಪ್ರಕಾರ ಬೆಲ್ಲ ಮತ್ತು ಮೆಂತ್ಯವನ್ನು ನಿಯಮಿತವಾಗಿ ಸೇವಿಸಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಮೆಂತ್ಯದ ಬೀಜಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಇದನ್ನು ಬೆಲ್ಲದೊಂದಿಗೆ ತಿಂದರೆ ಅದರ ಪರಿಣಾಮವನ್ನು ದ್ವಿಗುಣಗೊಳಿಸಬಹುದು.

ಮೆಂತ್ಯವನ್ನು ಪುಡಿಮಾಡಿ ಇಟ್ಟುಕೊಳ್ಳಿ. ಆ ಪುಡಿಯನ್ನು ಪ್ರತಿದಿನ ಬೆಳಗ್ಗೆ ಬೆಲ್ಲದೊಂದಿಗೆ ಸೇವಿಸಿ. ಇದನ್ನು ನಿಯಮಿತವಾಗಿ ಮಾಡಿದರೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ನಿಲ್ಲುತ್ತದೆ ಜೊತೆಗೆ ಬಿಳಿಕೂದಲು ಮತ್ತೆ ಕಪ್ಪಾಗುತ್ತದೆ.ಮೆಂತ್ಯ ಮತ್ತು ಬೆಲ್ಲವನ್ನು ತಿನ್ನುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ. ಕೂದಲು ಮೊದಲಿಗಿಂತ ಬಲವಾಗಿ ಹೊಳೆಯಲಾರಂಭಿಸುತ್ತದೆ.

ಮೆಂತ್ಯದ ನೀರು ಸೇವನೆಯಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ. ಮೆಂತ್ಯವನ್ನು ರಾತ್ರಿ ನೀರಲ್ಲಿ ನೆನೆಸಿಡಿ. ಬೆಳಗ್ಗೆ ಅದನ್ನು ಕುದಿಸಿಕೊಂಡು ಕುಡಿಯಿರಿ. ಈ ರೀತಿ ಮಾಡುವುದರಿಂದ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೆಂತ್ಯವನ್ನು ನೆನೆಸಿ ಮೊಸರಿನೊಂದಿಗೆ ರುಬ್ಬಿಕೊಳ್ಳಬೇಕು. ಆ ಪೇಸ್ಟ್‌ ಅನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಶಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಜ್ಮೀರ್ ದರ್ಗಾ ಸಮೀಕ್ಷೆಗೆ ಹಿಂದೂ ಸಂಘಟನೆಗಳ ಒತ್ತಾಯ!

Fri May 27 , 2022
ಜೈಪುರ ಮೇ 27: ರಾಜಸ್ಥಾನದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯು(ದರ್ಗಾ) ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು. ಹಾಗಾಗಿ ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯು ದರ್ಗಾ ಆವರಣವನ್ನು ಸರ್ವೆ ಮಾಡಬೇಕು ಎಂದು ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ. ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ ಸಮೀಕ್ಷೆ ನಡೆಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದೆ. “ಅಜ್ಮೀರ್ ದರ್ಗಾದ ಗೋಡೆಗಳು […]

Advertisement

Wordpress Social Share Plugin powered by Ultimatelysocial