ಬೆಳ್ಳಂ ಬೆಳಗ್ಗೆ ಬೆಂಕಿಯ ರುದ್ರ ನರ್ತನ; ಹೊತ್ತಿ ಉರಿದ ಕಟ್ಟಡ

ಬೆಂಕಿ ಅವಘಡದಿಂದ ಕೆಲ ಕಾಲ ಸುತ್ತಮುತ್ತಲಿನ ಜನರಲ್ಲಿ ಆತಂಕ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಗಿದ್ದಾರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಂಗಳೂರು ಗ್ರಾಮಾಂತರ: ಬೆಳ್ಳಂ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಕಟ್ಟಡ ಹೊತ್ತಿ ಉರಿದಿದೆ.ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಶಂಕೆ ವ್ಯಕ್ತವಾಗಿದ್ದು, ಮಂಜುಶ್ರೀ ಗ್ಯಾಸ್ ಬುಕ್ಕಿಂಗ್ ಮತ್ತು ಕೇಬಲ್ ಬುಕ್ಕಿಂಗ್ ಕಛೇರಿ ಹೊತ್ತಿ ಉರಿದಿವೆ. ಬೆಂಕಿಯ ರುದ್ರ ನರ್ತನಕ್ಕೆ ಸಂಪೂರ್ಣ ಕಟ್ಟಡ ಹೊತ್ತಿ ಊರಿದಿದ್ದು, ಕಛೇರಿಯಲ್ಲಿದ್ದ ಪೀಠೋಪಕರಣಗಳೆಲ್ಲ ಸುಟ್ಟು ಭಸ್ಮವಾಗಿವೆ. ಬೆಂಕಿ ಅವಘಡದಿಂದ ಕೆಲ ಕಾಲ ಸುತ್ತಮುತ್ತಲಿನ ಜನರಲ್ಲಿ ಆತಂಕ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಗಿದ್ದಾರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಮೂರು ದಿನಗಳಿಂದ ಮುಂದುವರೆದ ಮಹಿಳೆಯರ ಪ್ರತಿಭಟನೆ:

ತುಮಕೂರು: ಕ್ರಷರ್ ವಿರೋಧಿಸಿ ಮಹಿಳೆಯರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೀಸೇಗೌಡನದೊಡ್ಡಿಯಲ್ಲಿ ಘಟನೆ ನಡೆದಿದೆ. ಕುಣಿಗಲ್ ತಾಲೂಕಿನ ನಿಡಸಾಲೆ ಗ್ರಾಪಂ ಸೇರಿದ ಸರ್ವೆ ನಂಬರ್ 82,23 ಹಾಗೂ 25ರಲ್ಲಿ ಕ್ರಷರ್ ನಡೆಯುತ್ತಿದ್ದು, ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಬಿರಕು, ಬೆಳೆಗಳು ಹಾನಿ, ನೀರು ಕಲುಷಿತ ಜೊತೆಗೆ ಹೈನುಗಾರಿಕೆ ಮಾರಕವಾಗುತ್ತಿದೆ ಎಂದು ಕ್ರಷರ್ ವಿರೋಧಿಸಿ ಕಳೆದ ಮೂರು ದಿನಗಳಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಪುರುಷರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ, ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ರಸ್ತೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ:

ತುಮಕೂರು: ರಸ್ತೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ಕುಮಾರ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಪಾಂಡುರಂಗಪ್ಪ ಹಾಗೂ ಪತ್ನಿ ಲಕ್ಷ್ಮೀ ದೇವಿ, ತಮ್ಮ ಗೋವಿಂದಪ್ಪರ ಮೇಲೆ ಗ್ರಾಮದ ಮಾರನಾಯ್ಕ, ಅಂಜಿನಾಯ್ಕ, ನರಸಿಂಹನಾಯ್ಕ, ಸಾಗರ ಸೇರಿದಂತೆ ಸಹಚರರಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಮನೆ ರಸ್ತೆ ಬಿಟ್ಟಿಲ್ಲ ಅಂತಾ, ಮನೆ ಬಳಿ ಬಂದು ಕಲ್ಲು ದೊಣ್ಣೆಗಳಿಂದ ಹೊಡೆದಿರುವ ಆರೋಪ ಮಾಡಲಾಗಿದ್ದು, ಪಾಂಡುರಂಗ ಕುಟುಂಬಸ್ಥರು ಗಾಯಗೊಂಡಿದ್ದಾರೆ. ಸದ್ಯ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸ್ಕೈ ಯೂನಿ ಸೆಕ್ಸ್ ಸ್ಪಾ ಮೇಲೆ ಸಿಸಿಬಿ ದಾಳಿ:

ನೆಲಮಂಗಲ: ಹೆಸರಘಟ್ಟ ರಸ್ತೆಯಲ್ಲಿರುವ ಸ್ಕೈ ಯೂನಿ ಸೆಕ್ಸ್ ಸ್ಪಾ ಮೇಲೆ ಸಿಸಿಬಿ ದಾಳಿ ಮಾಡಿದ್ದಾರೆ. ಕಿಂಗ್ ಪಿನ್ ಐಶ್ವರ್ಯ(22)ಬಂಧನ ಮಾಡಲಾಗಿದೆ. ಹಣದ ಅಮಿಶವೊಡ್ಡಿ ಕೃತ್ಯಕ್ಕೆ ಬಳಸುತ್ತಿದ್ದ ತಪಸ್ಸಿ ಮಂಡಲ್, ಜಯಂತಿನಾಯ್ಕ, ಕಾವೇರಿ ರಕ್ಷಣೆ ಮಾಡಲಾಗಿದೆ. ಮೊಬೈಲ್ ಫೋನ್ ಮುಖಾಂತರವಾಗಿ ಗ್ರಾಹಕರನ್ನ ಸೆಳೆದು ಅಡ್ಡೆ ನಡೆಸಲಾಗುತ್ತಿದ್ದು, ಬಂಧಿತ ಮಹಿಳೆಯಿಂದ 3ಸಾವಿರ ನಗದು ಜಪ್ತಿ ಮಾಡಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಯುದ್ಧವು ಜಾಗತಿಕ ಆರ್ಥಿಕತೆಯ ಮೇಲೆ 'ತೀವ್ರ ಪರಿಣಾಮ' ಬೀರುತ್ತದೆ;

Sun Mar 6 , 2022
ರಷ್ಯಾ-ಉಕ್ರೇನ್ ಯುದ್ಧ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಮಧ್ಯೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯು ಶನಿವಾರದಂದು $ 1.4 ಶತಕೋಟಿ ತುರ್ತು ಹಣಕಾಸುಗಾಗಿ ಉಕ್ರೇನ್‌ನ ವಿನಂತಿಯನ್ನು ತನ್ನ ಮಂಡಳಿಗೆ ಅನುಮೋದನೆಗಾಗಿ ಮುಂದಿನ ವಾರದಲ್ಲಿ ತರಲು ನಿರೀಕ್ಷಿಸಿದೆ ಮತ್ತು ಹಣಕಾಸಿನ ಆಯ್ಕೆಗಳ ಕುರಿತು ಮಾತುಕತೆ ನಡೆಸುತ್ತಿದೆ. ನೆರೆಯ ಮೊಲ್ಡೊವಾದಲ್ಲಿ ಅಧಿಕಾರಿಗಳೊಂದಿಗೆ. ಅಧಿಕೃತ ಹೇಳಿಕೆಯನ್ನು ನೀಡುತ್ತಾ, ಜಾಗತಿಕ ಸಾಲದಾತನು ಉಕ್ರೇನ್‌ನಲ್ಲಿನ ಯುದ್ಧವು ಈಗಾಗಲೇ ಶಕ್ತಿ ಮತ್ತು ಧಾನ್ಯದ ಬೆಲೆಗಳನ್ನು ಹೆಚ್ಚಿಸುತ್ತಿದೆ ಮತ್ತು ರಷ್ಯಾದ […]

Advertisement

Wordpress Social Share Plugin powered by Ultimatelysocial