“ವಿದ್ಯುನ್ ಲತಾ”ಅಭಿವೃದ್ಧಿಯ ಹಾದಿಯತ್ತ

ಸುಪ್ರಸಿದ್ಧ ತಾಣ… ಹೊಯ್ಸಳರ ನೆಲೆಬೀಡು… ವಿಶ್ವವಿಖ್ಯಾತ ದೇಗುಲ ಎಂದೊಡನೆ ನೆನಪಾಗೋದೆ ಚನ್ನಕೇಶವನ ಸನ್ನಿಧಿ…. ಈ ಐತಿಹಾಸಿಕ ದೇಗುಲದ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಶ್ರಮಿಸಿದವ್ರು… ಹಲವು ಕಾರ್ಯಗಳನ್ನು ನಿರ್ವಹಿಸಿ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದವ್ರು… ಯಾರಿವರು, ಇವರ ಕಾರ್ಯನಿರ್ವಹಣೆ ಎಂಥದ್ದು ಅಂದ್ರಾ ಈ ಸ್ಟೋರಿ ನೋಡಿ

ವಿಶ್ವ ವಿಖ್ಯಾತ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ… ಇಂತಹ ಐತಿಹಾಸಿಕ ತಾಣದಲ್ಲಿ ಸ್ವಚ್ಚತೆ, ಶುಚಿತ್ವವನ್ನು ಕಾಪಾಡುವುದು ಅಷ್ಟೇ ಜವಾಬ್ದಾರಿಯುತ ಕೆಲಸವೂ ಹೌದು… ಕಾರ್ಯ ನಿರ್ವಾಹಕಾಧಿಕಾರಿ ಸ್ಥಾನದಲ್ಲಿರುವವರು ಪ್ರತಿ ಕೆಲಸವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಲೇಬೇಕಿರುತ್ತೆ. ಈ ಹಿಂದೆ ಇದ್ದ ಕಾರ್ಯ ನಿರ್ವಾಹಕಾಧಿಕಾರಿ
ರಾಮಕೃಷ್ಣಶೆಟ್ಟಿ ಜನೋಪಯೋಗಿ ಕಾರ್ಯಗಳನ್ನು ಕೈಗೊಂಡು ಮನೆಮಾತಾಗಿದ್ರು. ಇದೀಗ ಈ ಸಾಲಿಗೆ ಸೇರ್ಪಡೆಗೊಂಡವ್ರು ವಿದ್ಯುನ್ ಲತಾ, ಚನ್ನಕೇಶವನ ದೇಗುಲದಲ್ಲಿ ಹಾಲಿ ಕಾರ್ಯನಿರ್ವಾಹಣಾಧಿಕಾರಿಯಾಗಿ ವಿದ್ಯುನ್‍ ಲತಾ ಅವರು
ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ದಿವಂಗತ ಶಿಕ್ಷಕರ ಅನುಕಂಪದ ಆಧಾರಿತವಾಗಿ 1994 ರಲ್ಲಿ ಮುಜರಾಯಿ ಇಲಾಖೆಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡ ಇವ್ರು ಶಿವಗಂಗೆ ಗಂಗಾಧರೇಶ್ವರ, ಶ್ರೀಕಂಠೇಶ್ವರ ದೇಗುಲ, ಮೈಸೂರು ಅರಮನೆ, ತಹಸೀಲ್ದಾರ್ ಕಚೇರಿ, ಎಸಿ, ಡಿಸಿ, ಕಚೇರಿಯಲ್ಲಿ ಸೇವೆ ಸಲ್ಲಿಸಿ ನಂತರ ಬಡ್ತಿ ಹೊಂದಿ ಬೇಲೂರಿನ ಪ್ರಸಿದ್ಧ ದೇಗುಲಕ್ಕೆ ಆಗಮಿಸಿದ್ದಾರೆ.

ಬೇಲೂರು ದೇಗುಲಕ್ಕೆ ಇಒ ಆಗಿ ಬಂದಾಗ ಸ್ವಲ್ಪ ಹೆದರಿಕೆಯಿತ್ತು‌ ಆದರೆ ಇಲ್ಲಿನ ದೇಗುಲದ ನೌಕರರು, ಅರ್ಚಕ ಸಮೂಹದ ಅಡ್ಡೆಗಾರರು, ದೇಗುಲದ ಸಮಿತಿ ಸಹಕಾರದೊಂದಿಗೆ ಕೆಲವೊಂದು ಸಣ್ಣಪುಟ್ಟ ಸಮಸ್ಯೆ ಬಂದರೂ ನಿಭಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.‌ ಬೇಲೂರಿನಲ್ಲಿ 5 ವರ್ಷ ಸೇವೆ ಸಲ್ಲಿಸಿದ ನಂತರ ಮಂಡ್ಯಕ್ಕೆ ವರ್ಗಾವಣೆ ಆಗಿತ್ತಾದ್ರೂ ಪುನಃ ಬೇಲೂರಿಗೆ ಬರುವ ಭಾಗ್ಯ ನನ್ನಪಾಲಿನದಾಗಿತ್ತು. ಇಲ್ಲಿ ಇರುವವರಗೆ ಉತ್ತಮ ಕಾರ್ಯಗಳನ್ನು ಮಾಡಬೇಕೆಂಬ ಹಂಬಲವಿದೆ. ಅವನತಿ ಸ್ಥಿತಿಯಲ್ಲಿರುವ ನವರಂಗಮಂಟಪ ದುರಸ್ತಿ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕೆಲಸ ಆಗಬೇಕಿದೆ ಅಂತಾರೆ.

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕರವೇ ಅಧ್ಯಕ್ಷ ಚಂದ್ರಶೇಖರ್ ಕೊರೊನಾ ಕಾರಣದಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.‌ ಇತ್ತೀಚೆಗೆ ಚನ್ನಕೇಶವನ ದರ್ಶನ ಪಡೆಯಲು ಭಕ್ತರು ದೇಗುಲದ ಮುಖಮಾಡ್ತಿದ್ದಾರೆ. ದೇಗುಲದ ಅಭಿವೃದ್ಧಿ ದೃಷ್ಠಿಯಿಂದ ವಿದ್ಯುನ್ ಲತಾ ಅವ್ರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಂಗಮಂದಿರ ನಿರ್ಮಾಣ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ‌. ದೇಗುಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಪ್ಪವಾಗಿ ಇಡುವ ಕಾಯಕಕ್ಕೆ ಕೈಹಾಕಿದ್ದು ಕೊಠಡಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯ ವಿಧಾನವೂ ಕಚೇರಿ ಅಧಿಕಾರಿಗಳ ಸಲಹೆಯೊಂದಿಗೆ ನಡೆಯುತ್ತಿದೆ
ಅಂತ ದೇಗುಲದ ಆಗಮಿಕ ಅರ್ಚಕ ಕೃಷ್ಣಸ್ವಾಮಿಭಟ್ಟರ್ ತಿಳಿಸಿದ್ದಾರೆ. ಧಾರ್ಮಿಕ ವಿಚಾರದಲ್ಲಿ ಇಒ ವಿದ್ಯುಲ್ಲತಾ ನೌಕರರ ಕುಂದುಕೊರತೆ ಬಗ್ಗೆ ತಕ್ಷಣ ಸ್ಪಂಧಿಸಿ ಮೇಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ. ಧಾರ್ಮಿಕ ಕಾರ್ಯಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಥೋತ್ಸವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಅಧಿಕಾರಿಗಳು ಇದ್ದರೆ ಅರ್ಧ ಹೊರೆ ಕಡಿಮೆಯಾಗಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೇಲೂರಿನ ಚನ್ನಕೇಶವನ ಸನ್ನಿಧಿಯ ಅಭಿವೃದ್ಧಿಯ ಕಾರ್ಯಗಳನ್ನು ನೋಡ್ತಾ ಇದ್ರೆ ವಿದ್ಯುನ್ ಲತಾ ಅವರ ಉತ್ತಮ ಕಾರ್ಯಗಳ ಪರಿಚಯವಾಗುತ್ತೆ. ಈ ಕಾರ್ಯನಿರ್ವಾಹಕ ಅಧಿಕಾರಿ ಮತ್ತಷ್ಟು ಉತ್ತಮ ಕಾರ್ಯಗಳನ್ನು ನಿರ್ವಹಿಸಲಿ ಅಂತ ಆಶಿಸುತ್ತಾ,,,,, ಇದೇ ಈ. ಹೊತ್ತಿನ ವಿಶೇಷ ಸುದ್ದಿ ವಿದ್ಯುನ್ ಲತಾ ಅಭಿವೃದ್ಧಿಯ ಹಾದಿಯತ್ತ…!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮೂರಿನಲ್ಲಿ ಲೀಟರ್​ ಪೆಟ್ರೋಲ್, ಡೀಸೆಲ್ ​ಬೆಲೆ ಎಷ್ಟಿದೆ? ಇಲ್ಲಿದೆ ವಿವರ

Mon Dec 20 , 2021
Petrol Rate Today, 20-12-2021: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 95 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 86.67 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ.ದೆಹಲಿ: ಸರ್ಕಾರಿ ತೈಲ ಕಂಪನಿಗಳು ಇಂದು ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಆ ಮೂಲಕ ಇಂದು ಸಹ ಇಂಧನ ದರದಲ್ಲಿ  […]

Advertisement

Wordpress Social Share Plugin powered by Ultimatelysocial