12-13ಕ್ಕೆ ಬೆಂಗಳೂರಿನಲ್ಲೇ ಮೆಗಾ ಹರಾಜು: ಮತ್ತೆ​ ಭಾರತ-ವೆಸ್ಟ್​ ಇಂಡೀಸ್​ ಪಂದ್ಯದ ಕಥೆಯೇನು?

IPL Auction: ಫೆ. 12-13ಕ್ಕೆ ಬೆಂಗಳೂರಿನಲ್ಲೇ ಮೆಗಾ ಹರಾಜು: ಮತ್ತೆ​ ಭಾರತ-ವೆಸ್ಟ್​ ಇಂಡೀಸ್​ ಪಂದ್ಯದ ಕಥೆಯೇನು?
ಚುಟುಕು ಕ್ರಿಕೆಟ್​ ಹಬ್ಬ ಅಂದರೆ, ಯಾರಿಗೆ ಇಷ್ಟ ಇಲ್ಲ. ಐಪಿಎಲ್(IPL)​ ಕ್ರಿಕೆಟ್​ಗೆ ಹೆಚ್ಚು ಮಂದಿ ಫ್ಯಾನ್ಸ್​ ಇದ್ದಾರೆ. ನೀವು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಅನುಭವಿಸಿರುತ್ತೀರ. ಆದರೆ, ಕ್ರಿಕೆಟ್​ ಪ್ರೇಮಿಗಳಿಗ ನೆಚ್ಚಿನ ಕಾಲ ಯಾವುದು ಗೊತ್ತಾ?
ಅದೇ.. ಐಪಿಎಲ್​ ಕಾಲ(IPL Time).. ಹೌದು..ಐಪಿಎಲ್​ ಸೀಸನ್​ ಬಂದರೆ ಸಾಕು ನಮ್ಮ ಮಂದಿಗೆ ಅದೇನೋ ಒಂಥರಾ ಜೋಶ್(Josh)​. ನಮ್ಮೂರಿನ ತಂಡ ಗೆಲ್ಲಬೇಕು ಎಂಬ ಹಂಬಲ. ಎಲ್ಲರೂ ನಮ್ಮವರೇ ಎಂಬುವ ಭಾವ. ಇದೆಲ್ಲಕ್ಕಿಂತ ಮುಂಚಿತವಾಗಿ ಹರಾಜು ಪ್ರಕ್ರಿಯೆ ಕೂಡ ನಡೆಸಲಾಗುತ್ತೆ. ಅದರಂತೆ ಈ ಬಾರಿಯ ಅಂದರೆ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಮೆಗಾ ಹರಾಜಿ(Mega Auction)ನ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ. 2022 ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿ(Bengaluru)ನಲ್ಲಿ ನಡೆಯಲಿದೆ. ನಿನ್ನೆಯಷ್ಟೇ ಮೆಗಾ ಹರಾಜು ಫೆ 7, 8ರಂದು ನಡೆಯುತ್ತೆ ಎಂಬ ಮಾಹಿತಿ ಸಿಕ್ಕಿತ್ತು. ಈಗ ದಿನಾಂಕ ಬದಲಾವಣೆ ಮಾಡಿದ್ದು, ಫೆಬ್ರವರಿ 12 ಮತ್ತು 13ರಂದು ಹರಾಜು ನಡೆಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ(BCCI) ಮೂಲಗಳು ತಿಳಿಸಿವೆ. ಹರಾಜು ಪ್ರಕ್ರಿಯೆಯ ದಿನಾಂಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಐಪಿಎಲ್ ಫ್ರಾಂಚೈಸ್‍ಗಳಿಗೆ ಈ ಬಗ್ಗೆ ತಿಳಿಸಿದೆ ಎಂದು ಆಪ್ತಮೂಲಗಳಿಂದ ವರದಿ ಹೊರಬಿದ್ದಿದೆ.

4 ಮಂದಿ ಆಟಗಾರರನ್ನು ಉಳಿಸಿಕೊಂಡಿರುವ ತಂಡಗಳು!

ಈಗಾಗಲೇ 8 ತಂಡಗಳು ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ಆ ಬಳಿಕ ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ 2 ತಂಡಗಳು ಸಹಿತ ಒಟ್ಟು 10 ತಂಡಗಳು ಆಟಗಾರರನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ಬಿಸಿಸಿಐ ಹರಾಜು ಪ್ರಕ್ರಿಯೆ, ಟಿವಿ ಪ್ರಸಾರದ ಹಕ್ಕು ಬಗ್ಗೆ ಈಗಾಗಲೇ ಚರ್ಚೆನಡೆಸಿದ್ದು ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ತಿಳಿಸುವ ಸಾಧ್ಯತೆ ಇದೆ. ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಮತ್ತಷ್ಟು ಜೋಶ್​ ನೀಡಿದೆ. ಯಾವ ತಂಡಕ್ಕೆ ಯಾವ ಆಟಗಾರ ಹೋಗುತ್ತಾನೆಂದು ಈಗಾಗಲೇ ಕ್ರೀಡಾಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ಯಾವ ತಂಡದ ಬಳಿ ಎಷ್ಟು ಮೊತ್ತ ಬಾಕಿ?

ಡೆಲ್ಲಿ ಕಾಪಿಟಲ್ಸ್ 47.5 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 48 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ, ಮುಂಬೈ ಇಂಡಿಯನ್ಸ್ 48 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿ, ರಾಜಸ್ಥಾನ್ ರಾಯಲ್ಸ್ 62 ಕೋಟಿ, ಸನ್ ರೈಸರ್ಸ್ ಹೈದರಾಬಾದ್ 68 ಕೋಟಿ,ಪಂಜಾಬ್ ಕಿಂಗ್ಸ್ 72 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಈ ಹಣದಲ್ಲಿ ಇತರ ಆಟಗಾರರನ್ನು ಖರೀದಿಸಬೇಕಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಲಾ 90 ಕೋಟಿ ರೂಪಾಯಿಯನ್ನು ಹರಾಜಿನಲ್ಲಿ ವ್ಯಯಿಸಲಿದೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.

ಭಾರತ- ವೆಸ್ಟ್​ ಇಂಡಿಯಾ ಪಂದ್ಯದ ಕಥೆಯೇನು?

ಇನ್ನೂ ಫೆಬ್ರವರಿ 12 ಕ್ಕೆ ಭಾರತ ಹಾಗೂ ವೆಸ್ಟ್​ ಇಂಡೀಸ್​ ನಡುವೆ ಏಕದಿನ ಟೂರ್ನಿ ಆರಂಭವಾಗಲಿದೆ. ಹಾಗಾಗಿ ಹರಾಜು ಪ್ರಕ್ರಿಯೆಯಿಂದ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ಬಿಸಿಸಿಐ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವು ಐಪಿಎಲ್​ ಆಡಳಿತ ಮಂಡಳಿ, ಹರಾಜು ಪ್ರಕ್ರಿಯೆಯಿಂದ ಏಕದಿನ ಪಂದ್ಯಕ್ಕೆ ಯಾವುದೇ ತೊಂದರೆಯಾಗಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 12ರಂದು ಕೊಲ್ಕತ್ತಾದಲ್ಲಿ ಏಕದಿನ ಪಂದ್ಯ ನಿಗದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾ.?

Thu Dec 23 , 2021
ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ.? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ. ತೆಂಗಿನೆಣ್ಣೆ ಎಲ್ಲಾ ವಿಧಗಳಿಂದಲೂ ಅತ್ಯುತ್ತಮ ಮೌತ್ ವಾಶ್ ಆಗಬಲ್ಲದು. ಬಾಯಿಗೆ ಸ್ವಲ್ಪ ಎಣ್ಣೆ ಹಾಕಿ ಐದು ನಿಮಿಷ ಮುಕ್ಕಳಿಸಿ ಉಗುಳಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ತೊಳೆಯಿರಿ. ಇದರಿಂದ ಬಾಯಿಯ ವಾಸನೆ ಹೋಗುತ್ತದೆ. ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಇದರಿಂದ […]

Advertisement

Wordpress Social Share Plugin powered by Ultimatelysocial