ಬೆಂಗಳೂರು ಬುಲ್ಸ್ vs ಯು ಮುಂಬಾ: ಹೆಚ್ಚು ಗೆದ್ದ ಬಲಿಷ್ಠ ತಂಡ ಹಾಗೂ ಕಣಕ್ಕಿಳಿಯುವ ಆಟಗಾರರ ಮಾಹಿತಿ

ಬೆಂಗಳೂರು ಬುಲ್ಸ್ vs ಯು ಮುಂಬಾ: ಹೆಚ್ಚು ಗೆದ್ದ ಬಲಿಷ್ಠ ತಂಡ ಹಾಗೂ ಕಣಕ್ಕಿಳಿಯುವ ಆಟಗಾರರ ಮಾಹಿತಿ

ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಟೂರ್ನಿ ಮತ್ತೆ ಬಂದಿದೆ. ಹೌದು, ವಿವೋ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಇಂದಿನಿಂದ ( ಡಿಸೆಂಬರ್ 22, ಬುಧವಾರ ) ಆರಂಭಗೊಳ್ಳುತ್ತಿದ್ದು ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಲಿವೆ.

ಈ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು ವೀಕ್ಷಕರಿಗೆ ಅನುಮತಿ ನೀಡದೇ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯಲಿದೆ. ಇನ್ನು ಯು ಮುಂಬಾ ತಂಡದ ಕೋಚ್ ಆಗಿರುವ ಸುಬ್ರಹ್ಮಣ್ಯನ್ ರಾಜಗುರು ತಮ್ಮ ಕೋಚಿಂಗ್ ವೃತ್ತಿಯ ಚೊಚ್ಚಲ ಪಂದ್ಯವನ್ನು ಆಡಲಿದ್ದು ಇದುವರೆಗೂ ನಡೆದಿರುವ ಎಲ್ಲಾ ಪ್ರೋ ಕಬಡ್ಡಿ ಲೀಗ್‌ಗಳಲ್ಲೂ ಕೋಚ್ ಆಗಿ ಕಣಕ್ಕಿಳಿದಿರುವ ಅನುಭವವನ್ನು ಹೊಂದಿರುವ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ಎದುರಿಸಲಿದ್ದಾರೆ. ರಣಧೀರ್ ಸಿಂಗ್ ಸೆಹ್ರಾವತ್ ತಮ್ಮ ನುರಿತ ಕೋಚಿಂಗ್ ಸಲಹೆಗಳೊಂದಿಗೆ ಬೆಂಗಳೂರು ಬುಲ್ಸ್ ಆಟಗಾರರು ಘರ್ಜಿಸುವಂತೆ ಮಾಡಲಿದ್ದರೆ, ಯು ಮುಂಬಾ ನೂತನ ಕೋಚ್ ಸುಬ್ರಹ್ಮಣ್ಯನ್ ರಾಜಗುರು ಯಾರಿಗೂ ತಿಳಿಯದ ತಮ್ಮ ಕೋಚಿಂಗ್ ಕುಶಲತೆಯೊಂದಿಗೆ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸುವ ಸಾಧ್ಯತೆಗಳೂ ಇವೆ.

ಇನ್ನು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದುವರೆಗೂ ಎಷ್ಟು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ, ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು ಮತ್ತು ಪಂದ್ಯದಲ್ಲಿ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ..

ಬೆಂಗಳೂರು ಬುಲ್ಸ್ vs ಯು ಮುಂಬಾ ಮುಖಾಮುಖಿ ಅಂಕಿ ಅಂಶಪ್ರೊ ಕಬಡ್ಡಿ ಲೀಗ್‌ನ ಮೊದಲೆರಡು ಆವೃತ್ತಿಗಳಲ್ಲಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಣಿಸಿದ್ದ ಯು ಮುಂಬಾ ಬೆಂಗಳೂರು ಬುಲ್ಸ್ ತಂಡ ಟೂರ್ನಿಯಿಂದ ಹೊರ ಬೀಳುವಂತೆ ಮಾಡಿತ್ತು. ಹಾಗೂ ಈ ಸೇಡನ್ನು ಬೇಗನೆ ತೀರಿಸಿಕೊಂಡ ಬೆಂಗಳೂರು ಬುಲ್ಸ್ ಲೀಗ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯವೊಂದರಲ್ಲಿ ಯು ಮುಂಬಾ ತಂಡವನ್ನು ಸೋಲಿಸಿ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವುದನ್ನು ತಪ್ಪಿಸಿತ್ತು. ಇನ್ನು ಕೊನೆಯ ಆವೃತ್ತಿಯಿಂದ ಯು ಮುಂಬಾಗೆ ಬೆಂಗಳೂರು ಬುಲ್ಸ್ ಎರಡೂ ಪಂದ್ಯಗಳಲ್ಲಿಯೂ ಸೋಲನ್ನು ಉಣಿಸಿದೆ. ಒಟ್ಟಾರೆ ಮುಖಾಮುಖಿ ಫಲಿತಾಂಶ

ಪಂದ್ಯಗಳು – 14

ಯು ಮುಂಬಾ – 9

ಬೆಂಗಳೂರು ಬುಲ್ಸ್ – 5

ಡ್ರಾ – 0

 ನೇರಪ್ರಸಾರದ ಮಾಹಿತಿ

ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕ ಜೊತೆ ಸೇರಿ ಹಾಳಾದ್ವಿʼ : ಇಮ್ರಾನ್‌ ಖಾನ್

Wed Dec 22 , 2021
ಅಮೆರಿಕದವ್ರು ನಮಗೆ ಹಣ ಕೊಡ್ತಾರೆ ಅನ್ನುವ ಒಂದೇ ಒಂದು ಕಾರಣಕ್ಕೋಸ್ಕರ, 20 ವರ್ಷಗಳ ಹಿಂದೆ ಅಫ್ಘನಿಸ್ಥಾನದಲ್ಲಿ ಅಮೆರಿಕ ಮಾಡಿದ ಯುದ್ಧಕ್ಕೆ ಪಾಕಿಸ್ಥಾನ ಸಹಾಯ ಮಾಡಿ ತಪ್ಪು ಮಾಡಿತು. ಇದು ನಾವೆ ಮಾಡಿಕೊಂಡ ಗಾಯ ಅಂತ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಈ ಯುದ್ದದಲ್ಲಿ ನಮ್ಮ 80 ಸಾವಿರ ಜನಸತ್ತು ಹೋದ್ರು, 7ವರೆಲಕ್ಷ ಕೋಟಿ ರುಪಾಯಿ ನಮಗೆ ಲಾಸ್‌ ಆಯ್ತು, ನಮ್ಮ ದೇಶದ ರೆಪ್ಯುಟೇಶನ್‌ ಕೂಡ ಹಾಳಾಯ್ತು. ಆದ್ರೆ ಅಮೆರಿಕ ಅಫ್ಘಾನಿಸ್ಥಾನದಲ್ಲಿ ಇವತ್ತಿನ […]

Advertisement

Wordpress Social Share Plugin powered by Ultimatelysocial