ಭಾರತ್ ಜೋಡೋ ಯಾತ್ರೆ ಇಂದಿಗೆ ಅಂತ್ಯ.

ಲೋಕಸಭಾ ಚುನಾವಣೆ ಇರುವ ಮುನ್ನ ಭಾರತ್ ಜೋಡೋ ಯಾತ್ರೆಗೆ ಬಹುತೇಕ ಕಡೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಪಾದಾಯಾತ್ರೆ ಹೋದ ಕಡೆಯಲೆಲ್ಲಾ ಸಾವಿರಾರು ಜನರು ಸೇರಿದ್ದಾರೆ. ರಾಹುಲ್ ಗಾಂಧಿ ಜೊತೆ ಸಾವಿರಾರು ಜನ ಹೆಜ್ಜೆ ಹಾಕಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಭಾನುವಾರ ಅಂತ್ಯಗೊಂಡಿದ್ದು ಇಂದು ಸಮಾರೋಪ ಸಮಾರಂಭ ನಡೆದಿದೆ.

ಸೆಪ್ಟಂಬರ್ 7ರಂದು ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಆರಂಭಗೊಂಡ ಪಾದಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಿ ಉತ್ತರ ತುದಿ ಕಾಶ್ಮೀರದಲ್ಲಿ ಮುಕ್ತಾಯಗೊಂಡಿತ್ತು.ಶ್ರೀ ನಗರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಿದ್ದು ಯಾತ್ರೆಗೆ ಫೈನಲ್ ಟಚ್ ಕೊಟ್ಟಿದ್ದಾರೆ. ಹಾಗೆ ಇಂದಿನ ಸಮಾರೋಪ ಸಮಾರಂಭಕ್ಕೆ ಘಟಾನುಘಟಿಗಳು ಭಾಗಿಯಾಗಲಿದ್ದಾರೆ.

ಭಾರತ್ ಜೋಡೋ ಯಾತ್ರೆ ಜಮ್ಮು ಕಾಶ್ಮೀರಕ್ಕೆ ಜನವರಿ 20ರಂದು ಕಾಲಿಟ್ಟಿತು. ಕಠುವಾ ಜಿಲ್ಲೆಯಿಂದ ಆರಂಭವಾಗಿ ಕಾಶ್ಮೀರದಲ್ಲಿ ಪಾದಯಾತ್ರೆ 8-9 ದಿನಗಳ ಕಾಲ ನಡೆಯಿತು. ಈ ಮಧ್ಯೆ ಲಾಲ್ ಚೌಕ್​ನಲ್ಲಿ ರಾಹುಲ್ ಗಾಂಧಿ ಯಾಕೆ ರಾಷ್ಟ್ರಧ್ವಜ ಹಾರಿಸಿಲ್ಲ ಎಂದು ಕೆಲ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಕೂಗೆಬ್ಬಿಸಿದರು. ಆದರೆ, ಇಂದು ಲಾಲ್ ಚೌಕ್​ನಲ್ಲಿ ತ್ರಿವರ್ಣ ಬಾವುಟ ಹಾರಿಸುವ ಮೂಲಕ ರಾಹುಲ್ ಗಾಂಧಿ ತಮ್ಮ ಟೀಕಾಕಾರರನ್ನು ಸುಮ್ಮನಾಗಿಸುವಲ್ಲಿ ಯಶಸ್ವಿಯಾದರು.

ಹಲವು ನಾಯಕರ ಸಮಾಗಮ

ಭಾರತ್ ಜೋಡೋ ಯಾತ್ರೆ ಸೆಪ್ಟಂಬರ್ 7ರಂದು ಆರಂಭವಾಗಿ ಒಟ್ಟು 150 ದಿನಗಳ ಕಾಲ 12 ರಾಜ್ಯಗಳಾದ್ಯಂತ ಸಾಗಿ ಹೋಗಿದೆ. ಒಟ್ಟು 4 ಸಾವಿರ ಕಿಮೀಯಷ್ಟು ದೂರ ಯಾತ್ರೆ ಸಾಗಿದೆ. ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರು, ಲಕ್ಷಾಂತರ ಜನರು ಈ ಯಾತ್ರೆಯನ್ನು ಕಂಡಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದ ಮುಖಂಡರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.

ಎನ್​ಡಿಎಯೇತರ 21 ರಾಜಕೀಯಪಕ್ಷಗಳಿಗೆಆಹ್ವಾನ

ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ ಕಾಂಗ್ರೆಸ್ ಪಕ್ಷ ಬಹುತೇಕ ವಿಪಕ್ಷಗಳಿಗೆ ಆಹ್ವಾನ ನೀಡಿದೆ. ಆಮ್ ಆದ್ಮಿ, ತೆಲಂಗಾಳ ರಾಷ್ಟ್ರೀಯ ಸಮಿತಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 21 ರಾಜಕೀಯ ಪಕ್ಷಗಳಿಗೆ ಆಮಂತ್ರಣ ಹೋಗಿದೆ. ಆದರೆ, ಎಐಎಡಿಎಂಕೆ, ವೈಎಸ್​ಆರ್ ಕಾಂಗ್ರೆಸ್, ಬಿಜೆಡಿ, ಎಐಎಂಐಎಂ, ಎಐಯುಡಿಎಫ್ ಈ ಐದು ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ನೀಡಿಲ್ಲ.

ಇಂದಿನಕಾರ್ಯಕ್ರಮಗಳೇನು?

ನಿನ್ನೆ ಪಾದಯಾತ್ರೆ ಮುಕ್ತಾಯವಾಗಿದೆ. ಇಂದು ಶ್ರೀನಗರ್​ನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಭಾರತ್ ಜೋಡೋ ಯಾತ್ರೆ ಅಧಿಕೃತವಾಗಿ ತೆರೆಬೀಳಲಿದೆ. ಅದಾದ ಬಳಿಕ ಇದೇ ನಗರದಲ್ಲಿರುವ ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಹಾಗೂ ಇತರ ಹಲವು ರಾಜಕೀಯ ಪಕ್ಷಗಳ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಬೊಗಳೆ ಸರ್ಕಾರ ಎಂದು ಹೇಳಿದ ಮುಖ್ಯಮಂತ್ರಿ ಚಂದ್ರು.

Mon Jan 30 , 2023
2023ರ ರಾಜ್ಯದ ವಿಧಾನ‌ ಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಆಮ್ ಆದ್ಮಿ‌‌ ಪಕ್ಷ ತಯಾರಿ ನಡೆಸಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆಗೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದು ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುವದಾಗಿ ಕಲಬುರಗಿಯಲ್ಲಿ ಆಮ್‌ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ. ಸ್ವತಂತ್ರ ಬುದ್ದಿ ಕಳೆದುಕೊಂಡ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ನಡೆಯುವದು ದುಸ್ಥರವಾಗಿದೆ ಎಂದು ರಾಜ್ಯ […]

Advertisement

Wordpress Social Share Plugin powered by Ultimatelysocial