ಫೆಡೆಕ್ಸ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್, ಭಾರತೀಯ ಅಮೇರಿಕನ್ ರಾಜ್ ಸುಬ್ರಮಣ್ಯಂ ನೇಮಕ

ನ್ಯೂಯಾರ್ಕ್: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಪೂರೈಕೆ ದೈತ್ಯ ಕಂಪೆನಿ ಫೆಡೆಕ್ಸ್ ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಭಾರತೀಯ ಮೂಲದ ಅಮೆರಿಕನ್ ರಾಜ್ ಸುಬ್ರಹ್ಮಣ್ಯಂ ನೇಮಕಗೊಂಡಿದ್ದಾರೆ.

ಈಗಿನ ಅಧಿಕಾರಿ ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರು ಜೂನ್ 1ರಂದು ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದು, ಅವರ ಸ್ಥಾನಕ್ಕೆ ರಾಜ್ ಸುಬ್ರಮಣಿಯನ್ ನೇಮಕಗೊಂಡಿದ್ದಾರೆ.

ಸದ್ಯ ಸುಬ್ರಹ್ಮಣ್ಯಂ ಕಾರ್ಯಾಧ್ಯಕ್ಷರಾಗಿರುತ್ತಾರೆ.

ಮುಂದೆ ನನ್ನ ಸ್ಥಾನವನ್ನು ರಾಜ್ ಸುಬ್ರಹ್ಮಣ್ಯಂ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲು ಹರ್ಷವಾಗುತ್ತಿದೆ ಎಂದು ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಸ್ಥಿರತೆ, ನಾವೀನ್ಯತೆ ಮತ್ತು ಸಾರ್ವಜನಿಕ ನೀತಿ ಸೇರಿದಂತೆ ಮಂಡಳಿಯ ಆಡಳಿತ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಮೇಲೆ ಕೇಂದ್ರೀಕರಿಸಲು ಎದುರು ನೋಡುತ್ತಿರುವೆ ಎಂದು ಫ್ರೆಡೆರಿಕ್ ತಿಳಿಸಿದ್ದಾರೆ. ಸ್ಮಿತ್ 1971 ರಲ್ಲಿ ಫೆಡೆಕ್ಸ್ ಅನ್ನು ಸ್ಥಾಪಿಸಿದರು.

ಫ್ರೆಡ್ ಒಬ್ಬ ದಾರ್ಶನಿಕ ನಾಯಕ ಮತ್ತು ವ್ಯಾಪಾರ ಪ್ರಪಂಚದ ದಂತಕಥೆ. ಅವರು ವಿಶ್ವದ ಶ್ರೇಷ್ಠ ಮತ್ತು ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳಲ್ಲಿ ಒಂದನ್ನು ಸ್ಥಾಪಿಸಿದರು. ಈ ಪಯಣದಲ್ಲಿ ಅವರ ಜೊತೆ ಹೆಜ್ಜೆ ಹಾಕಲು ಮತ್ತು ಅವರು ರಚಿಸಿದ ಕಂಪೆನಿಯನ್ನು ಮುನ್ನಡೆಸಿಕೊಂಡು ಹೋಗುವುದು ನನ್ನ ಗೌರವ ಮತ್ತು ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಸುಬ್ರಮಣ್ಯಂ ಫೆಡೆಕ್ಸ್ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆ 11 ನೇ ಕಂತು ಪಡೆಯಲು ಇ-ಕೆವೈಸಿ ಗಡುವು ವಿಸ್ತರಣೆ

Tue Mar 29 , 2022
  ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ 11 ನೇ ಕಂತು ಬಿಡುಗಡೆ ಮಾಡಲಾಗುವುದು. ಇದುವರೆಗೆ ಈ ಯೋಜನೆಯ 10 ಕಂತುಗಳು ರೈತರ ಖಾತೆಗೆ ಬಂದಿವೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರು 11 ನೇ ಕಂತಿಗೆ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು e -KYC ಕಡ್ಡಾಯವಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಗಡುವು ವಿಸ್ತರಿಸಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್(pmkisan.gov.in) ನಲ್ಲಿ ನೀಡಲಾಗಿದೆ. ಮಾಹಿತಿಯ […]

Advertisement

Wordpress Social Share Plugin powered by Ultimatelysocial