ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ.

 

 

ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ ಮಾಧುರ್ಯಯುತ ಕನ್ನಡದ ಧ್ವನಿಯ ನಿರೂಪಕಿಯಾಗಿ, ಬರಹಗಾರ್ತಿಯಾಗಿ, ಕವಯತ್ರಿಯಾಗಿ, ಸ್ರೀ ಶಕ್ತಿ ಒಕ್ಕೂಟದ ಸಂಘಟಕರಾಗಿ, ಫೇಸ್ಬುಕ್ ಕಗ್ಗ ಬಳಗದ ಸ್ಥಾಪಕರಾಗಿ ಹೀಗೆ ಹಲವು ರೀತಿಯಲ್ಲಿ ಅವರು ಸಕ್ರಿಯರು.ಭವಾನಿ ಲೋಕೇಶ್ ಅವರ ಜನ್ಮದಿನ ಮಾರ್ಚ್ 3. ಅವರು ಮಂಡ್ಯ ಜಿಲ್ಲೆಯ ಕೆರೆಗೂಡಿನಲ್ಲಿ ಜನಿಸಿದರು. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ಭವಾನಿ ಮುಂದೆ, ಕನ್ನಡ ಎಂ.ಎ., ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಯುಜಿಸಿ ಶಿಕ್ಷಣ ತರಬೇತಿ, ಟಿಸಿಎಚ್ ಶಿಕ್ಷಕ ತರಬೇತಿ, ಕಂಪ್ಯೂಟರ್ ಡಿಪ್ಲೊಮೊ ಮುಂತಾದ ಹಲವು ವಿದ್ಯಾರ್ಹತೆಗಳನ್ನು ಕಾಲದಿಂದ ಕಾಲಕ್ಕೆ ಪೋಣಿಸಿಕೊಂಡಿದ್ದಾರೆ.
ಹಲವು ವರ್ಷ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ಅಧಿಕಾರಿಗಳ ಸಹಾಯಕ ಮೇಲ್ವಿಚಾರಕ ಹುದ್ದೆಯನ್ನು ನಿರ್ವಹಿಸಿದ ಭವಾನಿ ಪ್ರಸಕ್ತದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮೇಲ್ವಿಚಾರಣಾ ಕಾರ್ಯನಿರ್ವಹಿಸುತ್ತಿದ್ದಾರೆ.ಹದಿಮೂರನೆಯ ವಯಸ್ಸಿನಿಂದಲೆ ಕವಿತೆ ಬರೆದು ಅಧ್ಯಾಪಕರಿಂದ ಮೆಚ್ಚುಗೆ ಗಳಿಸಿಕೊಂಡ ಭವಾನಿ ತಮ್ಮ ಮನೆಯ ಪಕ್ಕ ಇದ್ದ ಗ್ರಂಥಾಲಯದ ಪುಸ್ತಕಗಳನ್ನೆಲ್ಲ ಓದಿ ಅಲ್ಲಿನ ಧೂಳನ್ನು ಕಡಿಮೆ ಮಾಡಿದವರು.ಭವಾನಿ ಲೋಕೇಶ್ ಅವರ ಕೃತಿಗಳಲ್ಲಿ ಭಾವಯಾನ, ಸಾಕ್ಷರರಿಗಾಗಿ, ಕರ್ನಾಟಕ ಗೆಜೆಟ್, ಸರಳ ವಿವಾಹ, ಬದುಕು ಭಾವದ ಕಡಲು ಮುಂತಾದವು ಸೇರಿವೆ. ದಿವ್ಯಾನುಭೂತಿಯ ಯುಗಾವತಾರಿ ಎಂಬ ಬಸವಣ್ಣನವರ ಕುರಿತಾದ ಕೃತಿಯನ್ನು ಸಂಪಾದಿಸಿದ್ದಾರೆ.ಭವಾನಿ ಲೋಕೇಶ್ ಅವರು ತಮ್ಮ ಸುತ್ತಮುತ್ತಲಿನ ನಗರ ಮತ್ತು ಗ್ರಾಮಗಳ ಮಹಿಳಾ ಸಂಘಗಳ ಸ್ತ್ರೀ ಸಂಘಗಳನ್ನು ಒಂದುಗೂಡಿಸಿ ‘ಸ್ತ್ರೀ ಶಕ್ತಿ ಒಕ್ಕೂಟ’ದ ನಿರ್ವಹಣೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರೋಜಿನಿ ಮಹಿಷಿ ಕನ್ನಡಿಗರಿಗೆ ಎಂಬ ಹೆಸರು ಚಿರಪರಿಚಿತ.

Mon Mar 6 , 2023
  ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ‘ಸರೋಜಿನಿ ಮಹಿಷಿ ವರದಿ’ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. ಡಾ. ಸರೋಜಿನಿ ಮಹಿಷಿ ಅವರು ಪ್ರಸಿದ್ಧ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾ ಜ್ಞಾನಿ.ಸರೋಜಿನಿ ಮಹಿಷಿ 1927ರ ಮಾರ್ಚ್ 3 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿ. ತಾಯಿ ಕಮಲಾಬಾಯಿ.ಸರೋಜಿನಿ […]

Related posts

Advertisement

Wordpress Social Share Plugin powered by Ultimatelysocial