ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ “ಭೀಮ” ನಿಗೆ ಚಾಲನೆ. !

ವಿಜಯ ಕುಮಾರ್ (ದುನಿಯಾ ವಿಜಯ್) ನಿರ್ದೇಶನದ ಎರಡನೇ ಚಿತ್ರಕ್ಕೆ ಅದ್ದೂರಿ ಮುಹೂರ್ತ.

ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, “ಸಲಗ” ಮೂಲಕ ನಿರ್ದೇಶಕರಾಗೂ ಯಶಸ್ವಿಯಾದರು.
ವಿಜಯ್ ಅವರ ಎರಡನೇ ನಿರ್ದೇಶನದ “ಭೀಮ” ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಸಲಗ” ನಂತರ “ಭೀಮ” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯುವ ಹಾಗೂ ಉತ್ಸಾಹಿ ನಿರ್ಮಾಪಕರಾದ ಜಗದೀಶ್ ಹಾಗೂ ಕೃಷ್ಣ ಸಾರ್ಥಕ್
ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ದಪಡಿಸಿಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನಗಳ ಚರ್ಚೆ ನಡೆದ ನಂತರ “ಭೀಮ” ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ. ಶೀರ್ಷಿಕೆ ಕೊಡಿಸಿದ ಜಗದೀಶ್ ಅವರಿಗೆ ಧನ್ಯವಾದ. ಈ ಚಿತ್ರಕ್ಕೆ ಚರಣ್
ರಾಜ್ ಸಂಗೀತ ನೀಡಲಿದ್ದಾರೆ. ನಿರ್ದೇಶನದ ಜೊತೆಗೆ ನಾನು ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದೀನಿ.
“ಜಯಮ್ಮನ ಮಗ” ಚಿತ್ರದಲ್ಲಿ ನನ್ನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಲ್ಯಾಣಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ಲ್ಯಾಕ್ ಡ್ರ್ಯಾಗನ್ ಮಂಜು ಅವರು ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಇಂದಿನಿಂದ ಚಿತ್ರೀಕರಣ ಆರಂಭಿಸುತ್ತಿದ್ದೇನೆ. ನನ್ನ “ಸಲಗ” ಚಿತ್ರದ ಮುಹೂರ್ತ ಸಮಾರಂಭ ಸಹ ಈ ದೇವಸ್ಥಾನದಲ್ಲಿ ನಡೆದಿತ್ತು. ಎರಡನೇ ಚಿತ್ರದ ಮುಹೂರ್ತ ಇಲ್ಲೇ ನಡೆಯಬೇಕೆಂದು ಆಸೆಯಿತ್ತು. ಇಂತಹ ದೇವಸ್ಥಾನ ಪರಿಚಯಿಸಿದ ಕೆ.ಪಿ.ಶ್ರೀಕಾಂತ್ ಅವರಿಗೆ ಧನ್ಯವಾದ. ಶ್ರೀನಗರ ಕಿಟ್ಟಿ, ಧನಂಜಯ ಸೇರಿದಂತೆ ಅನೇಕ ಚಿತ್ರರಂಗದ ಗೆಳೆಯರು ಆಗಮಿಸಿರುವುದು ಖುಷಿ ತಂದಿದೆ ಎಂದರು ನಾಯಕ ಹಾಗೂ ನಿರ್ದೇಶಕ ವಿಜಯ್ ಕುಮಾರ್ (ದುನಿಯಾ ವಿಜಯ್).

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡು ಲಕ್ಷ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ನೀಡಿದೆ.

Tue Apr 19 , 2022
ಬೆಂಗಳೂರು: ಬಹಳ ವರ್ಷಗಳ ಹಿಂದೆ ವಸತಿ ಯೋಜನೆಯ ಫಲಾನುಭವಿಯಾಗಿ, ವಿವಿಧ ಕಾರಣಕ್ಕೆ ಮನೆಯನ್ನೂ ಪೂರ್ತಿ ಮಾಡಿಕೊಳ್ಳಲಾಗದೆ, ಹೊಸ ಯೋಜನೆಗೂ ಫಲಾನುಭವಿಯಾಗಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಎರಡು ಲಕ್ಷ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ನೀಡಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ತ್ರಿಶಂಕುವಾಗಿದ್ದ ಫಲಾನುಭವಿಗಳಿಗೆ ಸಂಕಷ್ಟದಿಂದ ಮುಕ್ತಿ ನೀಡಲು ನಿರ್ಣಯಿಸಲಾಯಿತು. ಈ ಹಿಂದೆ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಯಾಗಿ, ಸರ್ಕಾರದಿಂದ ಮನೆ ಹಂಚಿಕೆಯಾಗಿದ್ದರೂ ಎರಡು […]

Advertisement

Wordpress Social Share Plugin powered by Ultimatelysocial