ಚಂಬಲ್ ಕಣಿವೆಯಲ್ಲಿ ಹಾದುಹೋಗಲಿದೆ ಹೊಸ ರಾಷ್ಟ್ರೀಯ ಹೆದ್ದಾರಿ.

ಭೋಪಾಲ್: 408.77 ಕಿ.ಮೀ ಉದ್ದದ ಅಟಲ್ ಪ್ರಗತಿ ಪಥ ಅಥವಾ ಪ್ರೋಗ್ರೆಸ್ ವೇ ಚತುಷ್ಪಥ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಸಂಪೂರ್ಣವಾಗಲಿದೆ. ಈ ಹೆದ್ದಾರಿಯಿಂದ ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಹಾಗೂ ಉತ್ತರ ಪ್ರದೇಶಕ್ಕೆ  ಸಂಚರಿಸಲು ಯಾವುದೇ ಅಡೆ-ತಡೆಗಳಿಲ್ಲದಂತಹ ಸುಲಭ ಸಂಪರ್ಕ ಮಾರ್ಗ ದೊರೆಯಲಿದೆ.
ಸದ್ಯ ಭಾರತದಲ್ಲಿ ಈ ವರ್ಷ ರಾಜಕೀಯವಾಗಿ ಬಲು ಮಹತ್ವದ್ದಾಗಿದೆ. ಕಾರಣ ಕರ್ನಾಟಕ   ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಈ ವರ್ಷ ಜರುಗಲಿವೆ. ಅಟಲ್ ಪ್ರಗತಿಪಥ   ಎಂಬುದು ಒಂದು ಪ್ರತಿಷ್ಠಿತ ಚತುಷ್ಪಥ ಹೆದ್ದಾರಿ ಯೋಜನೆಯಾಗಿದ್ದು ಮಧ್ಯಪ್ರದೇಶದಲ್ಲಿ ಇದರ ಅನುಷ್ಠಾನ ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಈ ಯೋಜನೆಗೆ ಸಂಬಂಧಿಸಿದಂತೆ ಬಿಡ್​ಗಳನ್ನು ಆಹ್ವಾನಿಸಿದ್ದು ಶೀಘ್ರದಲ್ಲಿಯೇ ಈ ಯೋಜನೆ ಜಾರಿಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಮಧ್ಯಪ್ರದೇಶದಲ್ಲೂ ವಿಧಾನಸಭೆ ಚುನಾವಣೆ ಹತ್ತಿರವಾಗಿರುವುದರಿಂದ ಈ ಯೋಜನೆ ರಾಜ್ಯದ ಜನತೆಗೆ ಒಂದು ಉಡುಗೊರೆಯಂತೆಯೇ ಭಾಸವಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಹೆದ್ದಾರಿಯ ವಿವರ ಹೀಗಿದೆ ನೋಡಿ
408.77 ಕಿ.ಮೀ ಉದ್ದದ ಈ ಚತುಷ್ಪಥ ಹೆದ್ದಾರಿ ಯೋಜನೆಯು ರಾಜಸ್ಥಾನದ ಕೋಟಾದಿಂದ ಪ್ರಾರಂಭವಾಗಿ ಉತ್ತರಪ್ರದೇಶದ ಇಟಾವಾದವರೆಗೆ ವ್ಯಾಪ್ತಿಯನ್ನೊಳಗೊಂಡಿದೆ. ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಹಾಗೂ ಉತ್ತರಪ್ರದೇಶಕ್ಕೆ ಸಂಚರಿಸಲು ಯಾವುದೇ ಅಡೆ-ತಡೆಗಳಿಲ್ಲದಂತಹ ಸುಲಭ ಸಂಪರ್ಕ ಮಾರ್ಗವಾಗಿ ಹೊರಹೊಮ್ಮಲಿದೆ. ಒಟ್ಟಿನಲ್ಲಿ ಈ ರಾಷ್ಟ್ರೀಯ ಹೆದ್ದಾರಿಯು ಮಧ್ಯಪ್ರದೇಶದ ಶಿವಪುರ್, ಮೊರೇನಾ, ಭಿಂಡ್ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

ಹೆದ್ದಾರಿ ವ್ಯಾಪ್ತಿ
ಪ್ರಸ್ತಾಪಿಸಲಾದ ಯೋಜನೆಯನುಗುಣವಾಗಿ ಈ ಹೆದ್ದಾರಿಯು ಕೋಟಾ ಜಿಲ್ಲೆಯ ಸೀಮಲ್ಯಾ ಗ್ರಾಮದ ರಾ.ಹೆ. 27 ರ ಮೂಲಕ ಪ್ರಾರಂಭವಾಗಲಿದೆ. ತದನಂತರ ಇದು ಮಧ್ಯಪ್ರದೇಶ ಪ್ರವೇಶಿಸಿ, ಅದನ್ನು ದಾಟಿ ಅಂತಿಮವಾಗಿ ಉತ್ತರಪ್ರದೇಶದ ಇಟಾವಾ ಜಿಲ್ಲೆಯ ನಿನಾವಾ ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ.

ಬಿಡ್​ಗಳ ಆಹ್ವಾನ
408.77 ಕಿ.ಮೀ ಉದ್ದದ ಈ ಚತುಷ್ಪಥ ಹೆದ್ದಾರಿಯ ಸಿಂಹಪಾಲು ಅಂದರೆ ಸುಮಾರು 300 ಕಿ.ಮೀ ಗಳಷ್ಟು ರಸ್ತೆಯು ಮಧ್ಯಪ್ರದೇಶದ ಮೂಲಕ ಸಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಮಧ್ಯಪ್ರದೇಶದಲ್ಲಿ ಸುಮಾರು 219 ಕಿ.ಮೀ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಬಿಡ್​ಗಳನ್ನು ಆಹ್ವಾನಿಸಿದೆ.

ಹಂತ ಹಂತದಲ್ಲಿ ಹೆದ್ದಾರಿ ನಿರ್ಮಾಣ
ಈ ಉದ್ದವು ವಿವಿಧ ಪ್ರದೇಶಗಳ ಕಾಮಗಾರಿಗಳ ಹಂತ ಹಂತಗಳ ನಿರ್ಮಾಣಗಳನ್ನು ಒಳಗೊಂಡಿದೆ. ಶಿವಪುರ್ ಜಿಲ್ಲೆಯ 60.9 ಕಿ.ಮೀ( ಪ್ಯಾಕೇಜ್ III), ಶಿವಪುರ್ ಮತ್ತು ಮೊರೇನಾ ಜಿಲ್ಲೆಗಳ 50.6 ಕಿ.ಮೀ (ಪ್ಯಾಕೇಜ್ IV), ಮೊರೇನಾ ಜಿಲ್ಲೆಯ 59 ಕಿ.ಮೀ (ಪ್ಯಾಕೇಜ್ V) ಹಾಗೂ ಪ್ಯಾಕೇಜ್ VI ಅಡಿ ಮೊರೇನಾ ಜಿಲ್ಲೆಯ 47.95 ಕಿ.ಮೀ ರಸ್ತೆ ಕಾಮಗಾರಿಗಳಾಗಿವೆ. ಇನ್ನು ಹೆದ್ದಾರಿಯ ಉಳಿದ ಉದ್ದದ ಕಾಮಾಗಾರಿಗಾಗಿ ಟೆಂಡರ್ ಗಳು ತಯಾರಿಸುವ ಪ್ರಕ್ರಿಯೆಯಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಹೊರಡಿಸಲಾಗುವುದೆಂದು ತಿಳಿದುಬಂದಿದೆ.

ಚಂಬಲ್ ಎಕ್ಸ್ ಪ್ರೆಸ್ ವೇ
ಮಧ್ಯಪ್ರದೇಶದಲ್ಲಿ ಹಾದು ಹೋಗುತ್ತಿರುವ ಈ ಹೆದ್ದಾರಿಯು ಹಿಂದೆ ಡಕಾಯಿತಿಗಳಿಗಾಗಿ ಕುಖ್ಯಾತಿ ಪಡೆದಿದ್ದ ಚಂಬಲ್ ಕಣಿವೆಯ ಮೂಲಕ ಹಾದು ಹೋಗುವುದರಿಂದ ಇದನ್ನು ಚಂಬಲ್ ಎಕ್ಸ್ ಪ್ರೆಸ್ ವೇ ಎಂದು ಹೆಸರಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸಿದ ಗಣಿನಾಡು ಬಳ್ಳಾರಿ.

Fri Jan 20 , 2023
  ಬಳ್ಳಾರಿ, ಜನವರಿ, 20: ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ಸವದ ಪ್ರಯುಕ್ತ ನಗರದ ವಿವಿಧೆಡೆಯ ಮುಖ್ಯ ವೃತ್ತಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಬಳ್ಳಾರಿ ನಗರ ಮಧುವಣಗಿತ್ತಿಯಂತೆ ಜಗಮಗಿಸುತ್ತಿದೆ. ಗಮನ ಸೆಳೆದ ದೀಪಾಲಂಕಾರ ಬಳ್ಳಾರಿ ಉತ್ಸವಕ್ಕೆ ಮತ್ತಷ್ಟು ಮೆರಗನ್ನು ನೀಡಲು ಜಿಲ್ಲಾಡಾಳಿತದ ವತಿಯಿಂದ ಆಯೋಜಿಸಿದ್ದ ವಿಶೇಷ ದೀಪಾಲಂಕಾರ ವ್ಯವಸ್ಥೆಗೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಗುರುವಾರ ಎಂಎಲ್‌ಸಿ ವೈ.ಎಂ.ಸತೀಶ್ ಚಾಲನೆ ನೀಡಿದರು. ನಗರದ ಮುಖ್ಯ […]

Advertisement

Wordpress Social Share Plugin powered by Ultimatelysocial