ಬೀದರ್​ನಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲೇ ಮಾರಾಮಾರಿ, ಖಾರದಪುಡಿ ಎರಚಿ ಹಲ್ಲೆ.

ಬೀದರ್​: ಬ್ರಿಮ್ಸ್​ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರಾವಗಿದದ್ದು, ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಫೆರೋಜ್ ಖಾನ್ ಮತ್ತು ಇವರ ಮಕ್ಕಳು ಗಾಯಗೊಂಡಿದ್ದಾರೆ. ಫೆರೋಜ್​ ಪುತ್ರ ಮತ್ತು ರೌಫ್ ಎಂಬಾತನ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂಬಂಧ ನಗರದ ಮನಿಯಾರ ತಾಲಿಮ್​ನಲ್ಲಿ ಅಬ್ದುಲ್ ರೌಫ್ ಹಾಗೂ ಫೆರೋಜ್​ ಪುತ್ರರ ನಡುವೆ ಮಾರಾಮಾರಿ ನಡೆದಿತ್ತು.

 

ಗಾಯಗೊಂಡ ಫೆರೋಜ್​ ಪುತ್ರರನ್ನು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ತುರ್ತು ಚಿಕಿತ್ಸಾ ಘಟಕಕ್ಕೆ ಬಂದ ಯುವಕರ ಗುಂಪು ಫೆರೋಜ್ ಮತ್ತು ಇವರ ಮಕ್ಕಳ ಮೇಲೆ ಖಾರದಪುಡಿ ಎರಚಿ ಆಸ್ಪತ್ರೆಯಲ್ಲಿದ್ದ ಪರಿಕರಗಳಿಂದಲೇ ಹಲ್ಲೆ ಮಾಡಿದೆ. ಈ ವೇಳೆ ಪರಸ್ಪರ ಮಾರಾಮಾರಿ ನಡೆದಿದ್ದು. ಘಟನೆಯಲ್ಲಿ ಗಂಭೀರವಾಗಿ ಅಬ್ದುಲ್ ರೌಫ್ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಫಿರೋಜ್ ಖಾನ್, ಅಫಸರ್ ಖಾನ್, ಅರಬಾಜ್ ಖಾನ್ ಸೇರಿ ಮತ್ತಿತರರು ಗಾಯಗೊಂಡಿದ್ದಾರೆ. ಆಸ್ಪತ್ರೆ ಬಳಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್ನಿಂದಾಗಿ ರಣವೀರ್ ಸಿಂಗ್ ಚಿತ್ರಕ್ಕೆ ತೊಂದರೆಯಾಗಲಿಲ್ಲ ಎಂದು ನೆಟಿಜನ್ ಹೇಳಿದ ನಂತರ 83 ಅನ್ನು ಸಮರ್ಥಿಸಿಕೊಂಡಿದ್ದ,ಮಿನಿ ಮಾಥುರ್!

Thu Mar 24 , 2022
ಕಬೀರ್ ಖಾನ್ ಅವರ 83, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ,ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು ಉತ್ತಮ ವಿಮರ್ಶೆಗಳ ಹೊರತಾಗಿಯೂ. ಭಾರತ ಕ್ರಿಕೆಟ್ ತಂಡದ 1983ರ ವಿಶ್ವಕಪ್ ಗೆಲುವನ್ನು ಆಧರಿಸಿದ ಚಿತ್ರ. ದುರದೃಷ್ಟವಶಾತ್, ಚಿತ್ರವು ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ಸಾಧ್ಯವಾಗಲಿಲ್ಲ. ಮತ್ತು ಕಬೀರ್ ಖಾನ್ ಅವರ ಪತ್ನಿ ಮಿನಿ ಮಾಥುರ್ ಅವರು ಕೋವಿಡ್-19 ರ ಓಮಿಕ್ರಾನ್ ರೂಪಾಂತರವು ಬಾಕ್ಸ್ ಆಫೀಸ್ ಸಂಖ್ಯೆ 83 ರ ಮೇಲೆ ಪರಿಣಾಮ ಬೀರಿದೆ […]

Advertisement

Wordpress Social Share Plugin powered by Ultimatelysocial