ಶಾಸಕ ಶರಣು ಸಲಗರ್ ಅವರಿಂದ ಪ್ರಗತಿ ಪರಿಶೀಲನಾ ಸಭೆ ಮತ್ತು ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆ

ಬಿದರ್ ಜಿಲ್ಲೆಯ ಬಸವಕಲ್ಯಾಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಶಾಸಕ ಶರಣು ಸಲಗರ್ ಅವರು ಅಧ್ಯಕ್ಷತೆಯಲ್ಲಿ ತಾಲೂಕಿನ ಪ್ರಗತಿ ಪರಿಶಿನಾ ಸಭೆ ಮತ್ತು 2022 – 23ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು ..

ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಅಪ್ಪಳಿಸಲಿದ್ಧು ರೈತರು ಕೂಡಾ ಮುಂಗಾರು ಬಿತ್ತನೆಗೆ ತಯಾರಿ ನಡೆಸುತ್ತಿದ್ಧು ಬಸವಕಲ್ಯಾಣದ ರೈತರಿಗೆ ಸಾಕಾಗುವಷ್ಟು ಬಿಜ ಮತ್ತು ರಸಗೊಬ್ಬರಗಳ ಸಮರ್ಪಕ ಪೂರೈಕೆ ಮಾಡುವ ಕೆಲಸ ಮಾಡಬೆಕೆಂದು  ಎಂದು ಶಾಸಕ ಶರಣು ಸಲಗರ್ ಅಧಿಕಾರಿಗಳ ಜೊತೆ  ಸುಮಾರು ಎರೆಡು ಗಂಟೆಗಳ ಚರ್ಚೆ ನಡೆಸಿದ್ಧಾರೆ.ಜೂನ್ 6 ರಿಂದ ಬಸವಕಲ್ಯಾಣ ತಾಲೂಕಿನಾದ್ಯಂತ ರೈತರಿಗೆ ಬೀಜಗಳ ವಿತರಣೆ ಮಾಡಬೇಕೆಂದು  ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಬಸವಕಲ್ಯಾಣ ತಾಲೂಕಿನಲ್ಲಿ ಬಿಜ ವಿತರಣೆಗೆ 19 ಮಾರಾಟ ಕೇಂದ್ರಗಳು ಸ್ಥಾಪಿಸಲಾಗುತ್ತಿದ್ಧು   ರೈತರು ಬಿಜಕ್ಕಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎಂದು  ಶಾಸಕರು ರೈತರಿಗೆ ಭರವಸೆ ನಿಡಿದ್ಧಾರೆ. ಬಸವಕಲ್ಯಾಣ ಮತಕ್ಷೆತ್ರಕ್ಕೆ 17222 ( ಹದಿನೆಳು ಸಾವಿರದ ಎರೆಡು ನೂರು ಇಪ್ಪತ್ತೆರಡು ಕ್ವಿಂಟಾಲ್) ಬಿಜಗಳಿಗೆ ಮನವಿ ಸಲ್ಲಿಸಿದ್ದು ಹಾಗು ಈಗಾಗಲೆ ಸರಕಾರದಿಂದ 10 ಸಾವಿರ ಕ್ವಿಂಟಲ್ ಸೊಯಾಬಿನ್ ಬಿಜಗಳು ಬಸವಕಲ್ಯಾಣದ ಕೃಷಿ ಇಲಾಖೆಗೆ ಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು ..

ಬಿಜ ವಿತರಣೆ ಸಮಯದಲ್ಲಿ ಕೃಷಿ ಇಲಾಖೆಯಲ್ಲಿ ನೌಕರರ ಕೊರತೆ ಇರುವ ಕಾರಣ ಬೆರೆ ಬೆರೆ ಇಲಾಖೆಗಳ ನೌಕರರನ್ನು ತೆಗೆದುಕೊಂಡು ರೈತರಿಗೆ ಸರಿಯಾದ ಸಮಯದಲ್ಲಿ ಬಿಜೆಪಿ ವಿತರಣೆ ಮಾಡಬೆಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನಿಡಿದ್ಧಾರೆ

ಗ್ರಾಮಿಣ ಪ್ರದೇಶಗಳಲ್ಲಿ ಬಿಜಗಳ ವಿತರಣೆ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಬಂದು ಬಿಜಗಳ ವಿತರಣೆಯ ವಿಷಯದಲ್ಲಿ ತಮ್ಮದೆ ದರ್ಬಾರ್ ನಡೆಸಿ ಬಡ  ರೈತರಿಗೆ ಬಿಜ ದೊರಯದಂತೆ ಮಾಡುತ್ತಾರೆ ಹಾಗಾಗಿ ಸಂಭಂದ ಪಟ್ಟ ಅಧಿಕಾರಿಗಳು ಇದಕ್ಕೆಲ್ಲ ಆಸ್ಪದ ಕೊಡಬಾರದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನಿಡಿದ್ಧಾರೆ. ಹಾಗು ಬಿಜಗಳ ಮಾರಾಟ ಕೇಂದ್ರಗಳಿಗೆ ಖುದ್ದು ನಾನು ಭೆಟಿ ನಿಡುತ್ತೆನೆ ಆ ಸಮಯದಲ್ಲಿ ಏನಾದರು ದೊಷ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಭಂದ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿಯಲ್ಲಿ ಗ್ರಾಹಕನ ಗಮನ ಬೇರೆಡೆ ಸೆಳೆದು 5 ಲಕ್ಷ ಹಣ ದರೋಡೆ… ಓರ್ವ ಆರೋಪಿ ಬಂಧನ

Tue May 24 , 2022
ಯಾದಗಿರಿ: ಯಾದಗಿರಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು 5 ಲಕ್ಷ ಹಣ ದರೋಡೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್​​ಬಿಎಂ ಬ್ಯಾಂಕ್​ನಿಂದ ಖಾಜಾಸಾಬ್​ ಎಂಬುವರು ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವೇಳೆ ಗುಂಜಿ ಜಬ್ಬರಾಜ್ ಎಂಬಾತ  ರಸ್ತೆಯಲ್ಲಿ ಹಣ ಬಿದ್ದಿದೆ ಎಂದು ಅವರ ಬೇರೆಡೆ ಗಮನ ಸೆಳೆದು ಹಣ ದೋಚಿದ್ದ. ಆತನನ್ನು ಪೊಲೀಸರು ಬಂಧಿಸಿ 4.5 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಜಬ್ಬರಾಜ್  ನನ್ನು ಪೊಲೀಸರು […]

Advertisement

Wordpress Social Share Plugin powered by Ultimatelysocial