ಬಿಹಾರದಲ್ಲಿ ಹಾಡಹಗಲೇ ರಸ್ತೆಯಲ್ಲಿ ‘ವೃದ್ಧನಿಗೆ ಇಬ್ಬರು ಮಹಿಳಾ ಪೊಲೀಸರಿಂದ ಲಾಠಿ ಏಟು’.

ಪಾಟ್ನಾ: ಬಿಹಾರ ಇಬ್ಬರು ಮಹಿಳಾ ಪೊಲೀಸ್‌ ಅಧಿಕಾರಿಗಳು ರಸ್ತೆಯಲ್ಲೇ ವೃದ್ಧರೊಬ್ಬರಿಗೆ ಲಾಟಿಯಿಂದ ಥಳಿಸಿರುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತ್ರಕರ್ತ ಮುಖೇಶ್ ಸಿಂಗ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವೃದ್ಧನನ್ನು ಇಬ್ಬರು ಪೊಲೀಸ್ ಮಹಿಳೆಯರು ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಥಳಿಸುತ್ತಿರುವುದನ್ನು ಕಾಣಬಹುದು.

ಅವರು ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಮಹಿಳಾ ಪೊಲೀಸ್ ಅಧಿಕಾರಿಗಳು ಪದೇ ಪದೇ ಲಾಠಿಯಿಂದ ಹೊಡೆಯುವ ಮೂಲಕ ಪೊಲೀಸರು ದರ್ಪ ತೋರಿದ ಘಟನೆ ಬಿಹಾರದಲ್ಲಿ ನಡೆದಿದೆಂದು ತಿಳಿಯಲಾಗಿದೆ . ದೃಶ್ಯದಲ್ಲಿ ವೃದ್ಧ ಸಹಾಯಕ್ಕೆ ದಾರಿಹೋಕರು ಮುಂದಾಗದೇ ಇರುವುದು ಕಾಣಬಹುದಾಗಿದೆ.

 

ಈ ಆಘಾತಕಾರಿ ಘಟನೆಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಿಂಗ್, ‘ಈ ಇಬ್ಬರು ಮಹಿಳಾ ಪೊಲೀಸ್‌ ಆಧಿಕಾರಿಗಳು ಹೊಡೆಯುತ್ತಿರುವ 70 ವರ್ಷದ ವೃದ್ಧ ಹೆಸರು ಪಾಂಡೆ ಜಿ.. ಎಂದು ತಿಳಿಯಲಾಗಿದೆ. ಅವರು ಕಳೆದ ಹಲವು ದಶಕಗಳಿಂದ ಕೈಮೂರ್ನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು…ಆವರು ಬೈಸಿಕಲ್ ನಲ್ಲಿ ಹೋಗುವಾಗ ರಸ್ತೆಯಲ್ಲಿ ಕೆಳಗೆ ಬಿದ್ದರು … ಎದ್ದೇಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಆ ಕಾರಣಕ್ಕಾಗಿ ಪೊಲೀಸರು ಕ್ರೂರವಾಗಿ ದರ್ಪ ತೋರುವುದು ಎಷ್ಟು ಸರಿ ಘಟನೆಯ ಬಗ್ಗೆ ಬಿಹಾರ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟ್ಟೀಟ್‌ ಮೂಲಕ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್ ಗಳಿಗೆ ನಿರ್ಬಂಧ.

Sat Jan 21 , 2023
ಜಗತ್ತೀನಾದ್ಯಂತ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಂಸ್ಥೆಯ ಸಾಕ್ಷ್ಯಚಿತ್ರದ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಇತ್ತ ಕೇಂದ್ರ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್ ಗಳಿಗೆ ನಿರ್ಬಂಧ ಹೇರಿದೆ. ನವದೆಹಲಿ: ಜಗತ್ತೀನಾದ್ಯಂತ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಂಸ್ಥೆಯ ಸಾಕ್ಷ್ಯಚಿತ್ರದ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಇತ್ತ ಕೇಂದ್ರ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್ ಗಳಿಗೆ ನಿರ್ಬಂಧ ಹೇರಿದೆ. ಹೌದು.. ಪ್ರಧಾನಿ ಮೋದಿ ಕುರಿತ ವಿಮರ್ಶಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಟ್ವೀಟ್ಗಳನ್ನು […]

Advertisement

Wordpress Social Share Plugin powered by Ultimatelysocial