ಬಿಹಾರ: ಈಗ ಭಿಕ್ಷಕರು ಡಿಜಿಟಲ್ ಇಂಡಿಯಾಕ್ಕೆ ಒಗ್ಗಿಕೊಂಡಿದ್ದಾರೆ.

ಬಿಹಾರ: ಈಗ ಭಿಕ್ಷಕರು ಡಿಜಿಟಲ್ ಇಂಡಿಯಾಕ್ಕೆ ಒಗ್ಗಿಕೊಂಡಿದ್ದಾರೆ. ಭಿಕ್ಷೆಯನ್ನು ಹಣದ ರೂಪದಲ್ಲಿ ನೀಡಿ, ಇಲ್ಲವೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡೋ ಮೂಲಕ, ಡಿಜಿಟಲ್ ರೂಪದಲ್ಲೂ   ಪೇ ಮಾಡಿ ಎನ್ನುವ ಕಾಲಕ್ಕೆ ಬಂದು ನಿಂತಿದ್ದಾರೆ.ಈ ಭಿಕ್ಷುಕ ಪೋನ್ ಪೇ, ಗೂಗಲ್ ಪೇ   ಮೂಲಕವೂ ಹಣವನ್ನು ಸ್ವೀಕರಿಸುತ್ತಾನೆ. ಈ ಮೂಲಕ ಡಿಜಿಟಲ್ ಭಿಕ್ಷುಕ ಎಂದೇ ಸೋಷಿಯಲ್ ಮೀಡಿಯಾಗಳಲ್ಲಿ ಪುಲ್ ಫೇಮಸ್ ಆಗಿದ್ದಾನೆಬಿಹಾರದ ಅಮನ್ ತನ್ನ ವಿಶಿಷ್ಟ ಭಿಕ್ಷಾಟನೆ ವಿಧಾನದಿಂದ ನೆಟ್ಟಿಗರ ಗಮನ  ಸೆಳೆದಿದ್ದಾರೆ. ಬೆಟ್ಟಯ್ಯ ರೈಲ್ವೆ ನಿಲ್ದಾಣದ  ಭಿಕ್ಷುಕ ರಾಜು ಪಟೇಲ್  ಡಿಜಿಟಲ್ ಪಾವತಿ ಮೂಲಕ ಭಿಕ್ಷೆ ಸ್ವೀಕರಿಸುವ ಮೂಲಕ ಅನೇಕರ ತಲೆತಿರುಗಿಸಿದ್ದಾರೆ.ಈ ಕುರಿತಂತೆ ಸುದ್ದಿ ಸಂಸ್ಥೆ ಎಎನ್ ಐ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜು ಪಟೇಲ್ ಅವರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಫೋಟೋಗಳಲ್ಲಿ ರಾಜು ಪಟೇಲ್ ಅವರು ತಮ್ಮ ಕುತ್ತಿಗೆಗೆ ಧರಿಸುವ ಕ್ಯೂಆರ್ ಕೋಡ್ ಹೊಂದಿರುವ ಕಾರ್ಡ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. ಹಲವಾರು ಪ್ರಯಾಣಿಕರು ಕ್ಯೂಆರ್ ಕೋಡ್ ಮೂಲಕ ಪಟೇಲ್ ಗೆ ಡಿಜಿಟಲ್ ರೂಪದಲ್ಲಿ ಪಾವತಿಸುವುದನ್ನು ಕಾಣಬಹುದು.ಈ ಬಗ್ಗೆ ಪ್ರತಿಕ್ರಿಯಿಸಿರುವಂತ ರಾಜು ಪಟೇಲ್, ‘ನಾನು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತೇನೆ, ಕೆಲಸವನ್ನು ಪೂರ್ಣಗೊಳಿಸಲು ಮತ್ತು ನನ್ನ ಹೊಟ್ಟೆಯನ್ನು ತುಂಬಲು ಸಾಕು’ ಎಂದು ತಿಳಿಸಿದ್ದಾನೆ.ಅಂದಹಾಗೇ ಹೀಗೆ ಡಿಜಿಟಲ್ ಭಿಕ್ಷುಕನ ಪೋಸ್ಟ್, ಈಗ ಸೋಷಿಯಲ್ ಮೀಡಿಯಾದಲ್ಲಿ 5 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಅಲ್ಲದೇ ಲಕ್ಷಾಂತರ ಜನರು ಡಿಜಿಟಲ್ ಭಿಕ್ಷುಕ ರಾಜು ಪಟೇಲ್ ಬಗ್ಗೆ ತರಾವರಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಈ ವಿಷಯವನ್ನು ನವೀನವೆಂದು ಕಂಡುಕೊಂಡರೆ, ಇತರರು ಇದನ್ನು ಬಡತನದ ಡಿಜಿಟಲೀಕರಣ ಎಂದು ಕರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂತ್ರಿ ಮಗನೇ ಕೇಸರಿ ಶಾಲು ದರಿಸಿದ್ದು; ಬಿಜೆಪಿ ವಿರುದ್ಧ ಡಿಕೆಶಿ ಸ್ಪೋಟಕ ಹೇಳಿಕೆ

Wed Feb 9 , 2022
  ಹಿಜಾಬ್ ವಿವಾದದ ಬಗ್ಗೆ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನ ಸರಬರಾಜು ಮಾಡಿದ್ದು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಒಬ್ಬರ ಮಗ ಎಂದಿದ್ದಾರೆ.ಯಾವುದೇ ಹೆಸರನ್ನು ಬಹಿರಂಗ ಪಡಿಸದೆ ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ಕೇಸರಿ ಶಾಲುಗಳನ್ನ, ಪೇಟಗಳನ್ನ ತರಿಸಿ ಕೊಟ್ಟವರು ಯಾರು. ರಾತ್ರೋರಾತ್ರಿ ಶಾಲುಗಳು,‌ ಪೇಟಗಳು ಎಲ್ಲಿಂದ ಬಂದವು. ವಿದ್ಯಾರ್ಥಿಗಳಿಗೆ […]

Advertisement

Wordpress Social Share Plugin powered by Ultimatelysocial