ಜಿ20 ಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೊತೆ ಬಿಲ್ ಗೇಟ್ಸ್,

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಸಭೆಯ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಮಾರ್ಚ್ 1ರಂದು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಪಾಲ್ಗೊಳ್ಳುತ್ತಿದ್ದಾರೆ.ನವದೆಹಲಿಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಬಾರಿಯ ಜಿ20 ಶೃಂಗಸಭೆಯನಿಮಿತ್ತ ನವದೆಹಲಿಯಲ್ಲಿ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಕಾರ್ಯಕ್ರಮ ಮಾರ್ಚ್ 1, ಬುಧವಾರ ನಡೆಯಲಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮುಖ್ಯ ಅತಿಥಿ ಮತ್ತು ಮುಖ್ಯ ಭಾಷಣಕಾರರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ರಾಷ್ಟ್ರರಾಜಧಾನಿಯಲ್ಲಿರುವ ಸುಷ್ಮಾ ಸ್ವರಾಜ್ ಭವನ್​ನಲ್ಲಿ ಬುಧವಾರ ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಟೆಕ್ ಕಂಪನಿಗಳ ಮುಖ್ಯಸ್ಥರು ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾರ್ವಜನಿಕ ಡಿಜಿಟಲ್ ಸೌಕರ್ಯದ ಭರವಸೆ ಎಂದು ಕರೆಯಲಾಗುವ ಈ ಕಾರ್ಯಕ್ರಮದಲ್ಲಿ, ಡಿಜಿಟಲ್ ತಂತ್ರಜ್ಞಾನ ಅಳವಡಿಕೆಯಿಂದ ಆರ್ಥಿಕತೆಯನ್ನು ಸುದೃಢಗೊಳಿಸುವ ಬಗ್ಗೆ ವಿಚಾರ ಮಂಡನೆ, ಚರ್ಚೆಗಳು ನಡೆಯಲಿವೆ. ಬಿಲ್ ಗೇಟ್ಸ್ ಅವರು ಮೈಕ್ರೋಸಾಫ್ಟ್ ಮುಖ್ಯಸ್ಥರು ಮಾತ್ರವಲ್ಲದೇ, ತಮ್ಮ ಫೌಂಡೇಶನ್ ಮೂಲಕ ವಿಶ್ವಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತ ಸೇರಿ ವಿಶ್ವದ ಕೆಲ ಉದಯೋನ್ಮುಖ ಆರ್ಥಿಕತೆಯ ದೇಶಗಳಿಗೆ ತಂತ್ರಜ್ಞಾನ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ.ವುಮೆನ್20 ಕಾರ್ಯಕ್ರಮಬೆಂಗಳೂರಿನಲ್ಲಿ ಕಳೆದ ವಾರ ಜಿ20 ಸಭೆಗಳು ನಡೆದಿದ್ದವು. ನಿನ್ನೆ ಸೋಮವಾರದಿಂದ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಎರಡು ದಿನಗಳ ಮಹಿಳಾ20 (W20) ನಡೆಯುತ್ತಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ನಿನ್ನೆ ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು.ಜಿ20 ಸಭೆಯ ಚರ್ಚೆಗಳಲ್ಲಿ ಲಿಂಗ ವಿಚಾರಗಳು ಪರಿಗಣಿತವಾಗುವಂತೆ ಮತ್ತು ಸ್ಪಷ್ಟ ನೀತಿ ರೂಪುಗೊಳ್ಳುವಂತೆ ಮಾಡುವುದು ಡಬ್ಲ್ಯೂ20 ಸಭೆಯ ಮುಖ್ಯ ಉದ್ದೇಶ. ಲಿಂಗ ಸಮಾನತೆ ಬೆಳೆಸುವುದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪುಷ್ಟಿ ನೀಡುವುದು ಇವೇ ಮುಂತಾದ ವಿಚಾರಗಳಿಗೆ ಜಿ20 ಸಭೆಗಳಲ್ಲಿ ಆದ್ಯತೆ ಕೊಡುವುದು ಗುರಿ.ಜಿ20 ಭಾರತದ ಅಧ್ಯಕ್ಷತೆಜಿ20 ಎಂಬುದು ಭಾರತ, ಅಮೆರಿಕ, ಚೀನಾ, ರಷ್ಯಾ ಇತ್ಯಾದಿ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯ 20 ದೇಶಗಳ ಗುಂಪಾಗಿದೆ. ಪ್ರತೀ ವರ್ಷವೂ ಈ ದೇಶಗಳು ಸಭೆ ನಡೆಸಿ ಜಾಗತಿಕ ಸಮಸ್ಯೆ, ಸವಾಲುಗಳ ಬಗ್ಗೆ ಚರ್ಚೆ ನಡೆಸುತ್ತವೆ. ಈ ಬಾರಿಯ ಜಿ20 ಶೃಂಗಸಭೆಗೆ ಭಾರತ ಅಧ್ಯಕ್ಷತೆ ವಹಿಸಿದೆ. ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ಜಿ20 ನಾಯಕರ ಶೃಂಗಸಭೆ ಆಯೋಜನೆಯಾಗಲಿದೆ. ಅದಕ್ಕೆ ಮುನ್ನ ಈ ಸಮಿಟ್​ಗೆ ಪೂರಕವಾಗಿ ಭಾರತದ ವಿವಿಧೆಡೆ ಬೇರೆ ಬೇರೆ ವಿಚಾರಗಳನ್ನಿಟ್ಟುಕೊಂಡು ಸಭೆಗಳು ನಡೆಯುತ್ತಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯೋಧನ ಮೇಲೆ ಹಲ್ಲೆಗೈದು ಚಿನ್ನದ ಸರ ಕಿತ್ತುಕೊಂಡು ಹೋದ ಪುಂಡರು ದೂರು ದಾಖಲು.

Tue Feb 28 , 2023
  ಭಾರತೀಯ ಸೇನೆಯ ವೈದ್ಯಕೀಯ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಯೋಧರೊಬ್ಬರ ಮೇಲೆ ಕಿರಾತಕರು ಹಲ್ಲೆ ನಡೆಸಿ ಚಿನ್ನದ ಸರ ಕಿತ್ತುಕೊಂಡು ಹೋಗಿರುವ ಘಟನೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಮಹಾದ್ವಾರದ ಬಳಿ ನಡೆದಿದೆ.ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಾಗರಾಜ ಹೆಬ್ಬಾಳ ಎಂಬುವವರ ಮೇಲೆಯೇ ಕಿರಾತಕರು ಹಲ್ಲೆ ನಡೆಸಿದ್ದಾರೆ. ಯೋಧ ನಾಗರಾಜ ಅವರು ತಮ್ಮ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಕಾರಿನಲ್ಲಿ ಹೊರಟಿದ್ದ ವೇಳೆ ಮುಂದೆ ಹೋಗುತ್ತಿದ್ದ […]

Advertisement

Wordpress Social Share Plugin powered by Ultimatelysocial