ಮುಸ್ಲಿಂ ಟೋಪಿ ಧರಿಸಿ `ಕವ್ವಾಲಿ’ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ಸಚಿವ.

ಬೆಂಗಳೂರು : ರಾಜ್ಯದ ಬಿಜೆಪಿ ಸಚಿವರೊಬ್ಬರು ಮುಸ್ಲಿಂ ಸಮುದಾಯದ ಒಲೈಕೆಗೆ ಮುಂದಾಗಿದ್ದು, ಟೋಪಿ ಧರಿಸಿ ಮುಸ್ಲಿಂ ಸಮುದಾಯದ ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಅವರ ಪುತ್ರ ನಿತಿನ್ ಪುರುಷೋತ್ತಮ್ ಭಾಗಿಯಾಗಿದ್ದಾರೆ.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಿನ್ನೆ ರಾತ್ರಿ ಸಚಿವ ಎಂಟಿಬಿ ನಾಗರಾಜ್ ಅವರು ಮುಸ್ಲಿಂ ಸಮುದಾಯದವರಿಗಾಗಿ ಕವ್ವಾಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಟೋಪಿ ಹಾಕಿಕೊಂಡು ಮಧ್ಯರಾತ್ರಿಯವರೆಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಪರ ವಿರೋಧ ವ್ಯಕ್ತವಾಗುತ್ತಿದೆ.

ಹೊಸಕೋಟೆಯಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಉರ್ದುವಿನಲ್ಲೇ ಭಾಷಣ ಮಾಡಿದ್ದಾರೆ. ಮಗ ನಿತಿನ್ ಪುರುಷೋತ್ತಮ್ ಕೂಡ ಉರ್ದುವಿನಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಸಚಿವರ ಎದುರಲ್ಲೇ ಕವ್ವಾಲಿ ಹಾಡುಗಾರರ ಮೇಲೆ ಹಣದ ಮಳೆಯೇ ಸುರಿಸಲಾಗಿದೆ. ಸದ್ಯ ಎಂಟಿಬಿ ನಾಗರಾಜ್ ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸತ್ಯನಾರಾಯಣ ಪುರಾತತ್ವ ಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಖ್ಯಾತರು.

Tue Jan 17 , 2023
ಮಹೋಪಾಧ್ಯಾಯ ರಾ. ಸತ್ಯನಾರಾಯಣ ಅವರು ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಖ್ಯಾತರೆನಿಸಿದ್ದವರು. ಇಂದು ಅವರ ಸಂಸ್ಮರಣಾ ದಿನ. ರಾ. ಸತ್ಯನಾರಾಯಣರು 1927ರ ಮೇ 8 ರಂದು ಮೈಸೂರಿನಲ್ಲಿ ಜನಿಸಿದರು. ಅವರದ್ದು ಸಂಗೀತಗಾರರ ಮನೆತನ. ತಂದೆ ರಾಮಯ್ಯ. ತಾಯಿ ವರಲಕ್ಷಮ್ಮ. ಇವರ ಅಣ್ಣಂದಿರಾದ ರಾ. ಚಂದ್ರಶೇಖರಯ್ಯ, ರಾ. ಸೀತಾರಾಮ್‌ರವರು ಮೈಸೂರು ಸಹೋದರರೆಂದೇ ಗಾಯನದಲ್ಲಿ ಪ್ರಖ್ಯಾತರಾದರೆ ರಾ. ವಿಶ್ವೇಶ್ವರನ್ ವೀಣೆಯಲ್ಲಿ ಪ್ರಸಿದ್ಧರು.ಎಸ್.ಎಸ್.ಎಲ್.ಸಿ.ಯಲ್ಲಿ ರ‍್ಯಾಂಕ್ ಪಡೆದ ಸತ್ಯನಾರಾಯಣ […]

Advertisement

Wordpress Social Share Plugin powered by Ultimatelysocial